✍️ವರದಿ:- ಎಚ್.ಬಾಬು ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು :- ಉತ್ತರ ಕರ್ನಾಟಕ ದ ಜಾನಪದ ವಿಶಿಷ್ಟ ಹಬ್ಬದ ಸಂಭ್ರಮ.ಬರದ ನಾಡು ಜಗಳೂರು ಸೇರಿದಂತೆ ನಮ್ಮ ಗಡಿ ತಾಲೂಕುಗಳಾದ ಕೂಡ್ಲಿಗಿ ಕೊಟ್ಟೂರು ಸೇರಿದಂತೆ ವಿವಿಧಡೆ ಜೋಕುಮಾರ ಸ್ವಾಮಿ ಹಬ್ಬ ಆಚರಣೆ ವಿಶೇಷ ವಾಗಿದೆ.
ಸಾಂಪ್ರಾದಾಯಿಕ ನಾಡಹಬ್ಬ ಗಣೇಶನ ಪ್ರತಿಷ್ಠಾಪನೆಯ ನಂತರ ಮೂರು ಅಥವಾ ಐದು ದಿನಗಳ ಕಾಲ ಪ್ರಪಂಚದಲ್ಲಿ ಹಾಯಾಗಿ ಕುಳಿತುಕೊಂಡು ಕಾಯಿ ಕಡುಬು ಹೋಳಿಗೆ ಸುಖ ಭೋಜನ ಮತ್ತು ಹಣ್ಣು ಹಂಪಲು ಗಳನ್ನು ಸೇವಿಸಿ ಡೊಳ್ಳು ಹೊಟ್ಟೆಯನ್ನು ತುಂಬಿಸಿ ಕೊಂಡು ಸತ್ತನಂತರ.ಭೂಲೋಕ ನೆಮ್ಮದಿಯಿಂದ ಕೂಡಿ ದೆ ಎಂದು ಮಳೆರಾಯನಿಗೆ ವರದಿನೀಡುತ್ತಾನೆ ಎಂಬ ಪ್ರತೀತಿ. ಆಗ ಜಗತ್ತಿನಲ್ಲಿ ಮಳೆಯಿಲ್ಲದೆ ಸೂತಕದ ಛಾಯೆ ಆವರಿಸುತ್ತದೆ. ಆಗ ಮೂರು ದಿನಗಳ ನಂತರ ಆಗಮನವಾಗುವವನೇ ಮಳೆತರು ವ ದೇವರು ಜೋಕುಮಾರಸ್ವಾಮಿ ಎನ್ನುವುದು ವಾಡಿಕೆಯಾಗಿದೆ.
3 ದಿನಗಳಲ್ಲಿ ಜೋಕುಮಾರಸ್ವಾಮಿ ಹುಟ್ಟಿ ಮಳೆ ಹೋಗಿ ಬೆಳೆ ಒಣಗುತ್ತದೆ. ಆಗ ಜೋಕುಮಾರ ತನ್ನಕುದುರೆ ಏರಿ ಹೊಲಗದ್ದೆಗಳ ಲ್ಲಿ ಸಂಚರಿಸುತ್ತಾನೆ. ಇದಕ್ಕೆ ಸಾಕ್ಷಿ ಎಂಬಂತೆ ಹೊಲದಲ್ಲಿನ ಗಿಡಗ ಳ ಬುಡದಲ್ಲಿ ಹಾಗೂ ಎಲೆಗಳ ಮೇಲೆ ಬಿಳಿಯಾದ ಬುರುಗು (ನೊರೆ) ಇರುತ್ತದೆ ಇದನ್ನು ಜೋಕುಮಾರ ಉಗುಳಿದ್ದಾನೆ ಎಂದು ನಂಬುವ ರೈತರು ಜೋಕುಮಾರನ ಬಗ್ಗೆ ಮಾತನಾಡದೆ ಇರಲಾರ ರು.ಅವನು ತನ್ನ ಮೇಲು ಹೊದಿಕೆ ಒಮ್ಮೆ ಜೋರಾಗಿ ಆಕಾಶಕ್ಕೆ ಬೀಸಿದಾಗ ಮೋಡ ಗಳು ಮಳೆ ಸುರಿಸುತ್ತವೆ ಎಂಬ ಕಥೆಯ ಇದೆ ಎನ್ನುತ್ತಾರೆ ಹಿಂದಿನ ಕಾಲದ ಹಿರಿಯ ಯಜಮಾನರು ಚಿಕ್ಕ ಮಕ್ಕಳಿ ಗೆ ಕಥೆ ಹೇಳುವುದು ಸಾಮಾನ್ಯವಾಗಿದೆ .
ಗಣೇಶ ಸತ್ತು ಮೂರು ದಿನಕ್ಕೆ ಜೋಕುಮಾರ ಬಾರಿಕರ (ಗಂಗಾ ಮತಸ್ಥರು.ಬೆಸ್ತರ) ಮನೆಯಲ್ಲಿ ಹುಟ್ಟುತ್ತಾನೆ ಅವರು ಹುತ್ತದ ಮಣ್ಣಿ ನಿಂದ ತಿದ್ದಿ, ತೀಡಿದ ಅತ್ಯಂತ ಚೆಲುವಿನಿಂದ ಕೂಡಿದ ಮೂರ್ತಿ ಜೋಕುಮಾರ ಸ್ವಾಮಿ ಇದಾಗಿರುತ್ತದೆ.
ಬೆಳಿಗ್ಗೆ ಬಿದಿರಿನ ಬುಟ್ಟಿಯಲ್ಲಿಟ್ಟುಕೊಂಡು ಮೊದಲು ಗೌಡರ ಮನೆ ಗೆ ತರುತ್ತಾರೆ. ಗೌಡರ ಮನೆಯಲ್ಲಿ ಪೂಜೆಯಾದನಂತರ ಅವರು ಕೊಡುವ ಬಿಳಿ ಬಟ್ಟೆಯನ್ನು ಜೋಕುಮಾರನಿಗೆ ಹೊದಿಸಿ ಬೆಣ್ಣೆಯ ನ್ನು ಬಾಯಿಗೆ ಸವರಿ ಪೂಜೆ ನೆರವೇರಿಸಿದ ಬಳಿಕ ಏಳು ದಿನಗಳ ಕಾಲ ಊರಿನ ಪ್ರತಿ ಮನೆ ಮನೆಗೂ ಜೋಕುಮಾರನನ್ನು ಬಾರಿಕ ಜನಾಂಗದ ಮಹಿಳೆಯರೇ ಹೆಚ್ಚಾಗಿ ಈ ಜೋಕುಮಾರ ನನ್ನು ಹೊತ್ತು ತಿರುಗುವ ಉಸ್ತುವಾರಿ ನೋಡಿಕೊಳ್ಳುತ್ತಾರೆ.
ದವಸಧಾನ್ಯ ರೊಟ್ಟಿ ಕಾಳು ಸಂಗ್ರಹಣೆ :- ಜೋಕುಮಾರಸ್ವಾಮಿಗೆ ಬೇವಿನ ಸೊಪ್ಪು ಮತ್ತು ಪುಷ್ಪಗಳಿಂದ ಅಲಂಕರಿಸಿ ಕೊಂಡು ಪಟ್ಟಣ ಮತ್ತು ಗ್ರಾಮೀಣ ಭಾಗದ ಎಲ್ಲಾ ಹಳ್ಳಿಗಳಲ್ಲಿ ಮಹಿಳೆ ಯರು ಮತ್ತು ಪುರುಷರು ತಲೆ ಮೇಲೆ ಜೋಕುಮಾರಸ್ವಾಮಿ ಬುಟ್ಟಿಯನ್ನು ಹೊತ್ತುಕೊಂಡು ಊರೂರು ತಿರುಗಿ ಹಾಡು ಹೇಳು ವ ಮುಖಾಂತರ ಏಳು ದಿನಗಳ ಕಾಲ ಹಳ್ಳಿಗಳಲ್ಲಿ ದವಸ ದಾನ್ಯ ಗಳನ್ನು ಸಂಗ್ರಹಣೆ ಮಾಡಿಕೊಳ್ಳುತ್ತಾರೆ ಮತ್ತು ಗ್ರಾಮೀಣ ಭಾಗದ ಹಳ್ಳಿಗಳಲ್ಲಿ ಪ್ರತಿ ಮನೆಗೆ ಹೋದಾಗ ಕಟ್ಟೆಯ ಮೇಲೆ ಜೋಕುಮಾ ರನನ್ನು ಇಟ್ಟು ಆತನಿಗೆ ಸಂಬಂಧಿಸಿದ ಹಾಡುಗಳನ್ನು ಹೇಳುತ್ತಾರೆ.
ಜಾನಪದ ಸೊಗಡಿನ ಹಾಡು :- ಆ ಹಾಡುಗಳಲ್ಲಿ ಆತನ ಜನನ, ಉಡಾಳತನ,ಆತನ ಕೊಲೆ,ನಂತರದಲ್ಲಿ “ಅಡ್ಡಡ್ಡ ಮಳೆಯಾಗಿ, ಗೊಡ್ಡೆಮ್ಮೆ ಹೈನಾಗಿ” ಎಲ್ಲವೂ ಬರುತ್ತವೆ. ಮನೆ ಯವರು ಕೊಡು ವ ಜೋಳಕ್ಕೆ ಪ್ರತಿಯಾಗಿ ಮೊರದಲ್ಲಿ ಐದಾ ರು ಕಾಳು ಜೋಳ, ಬೇವಿ ನ ಸೊಪ್ಪು, ಒಂದಿಷ್ಟು ನುಚ್ಚನ್ನು ಮತ್ತು(ಕರಿ )ಕಾಡಿಗೆ ಯಂತ ಹದ್ದನ್ನು ಇಡುತ್ತಾರೆ. ಜೋಳದ ಕಾಳನ್ನು, ಬೇವಿನ ಸೊಪ್ಪ ನ್ನು ಕಾಳಿನ ಸಂಗ್ರಹದಲ್ಲಿ ಹಾಕುತ್ತಾ ರೆ. ಕರಿಯನ್ನು ನುಚ್ಚಿನ ಅನ್ನದ ಜೊತೆಗೆ ಬೆರೆಸಿ ಹೊಲದ ಸುತ್ತ ಚರಗ ಚೆಲ್ಲುತ್ತಾರೆ ಹೀಗೆ ಮಾಡು ವುದ ರಿಂದ ಪೈರುಗಳು ಹುಲುಸಾಗುತ್ತವೆ. ಧಾನ್ಯಗಳಿಗೆ ಹುಳು ಬಾಧೆ ಕಾಣಿಸಿಕೊಳ್ಳು ವುದಿಲ್ಲ ಎನ್ನುವುದು ರೈತರ ನಂಬಿಕೆ ಇದೆ
ವಿಧಿ ವಿಧಾನಗಳಿಂದ ಅಂತ್ಯ ಸಂಸ್ಕಾರ ನಂತರ ಸಾಮೂಹಿಕ ಭೋಜನ ! :- ಜೋಕುಮಾರ ತನ್ನ ಹುಟ್ಟಿನ ನಂತರದ ಏಳನೇ ದಿನ ಹರಿಜನ (ಬೇಗಾರ )ಕೇರಿಗೆ ಹೋಗಿ ತನ್ನ ಕೀಟಲೆಯಿಂದ ಮಾತಂಗಿಯರ ಕೈಗೆ ಸಿಕ್ಕು ಕಣ್ಣು ಕಿತ್ತಿಸಿಕೊಳ್ಳುತ್ತಾನೆ.ಮರಳಿ ಕಣ್ಣು ಕಳೆದು ಕೊಂಡು ಕೇರಿಗೆ ಬಂದ ಜೋಕುಮಾರನನ್ನು ಹಿರಿಯ ರೊಬ್ಬರು ಒನಕೆಯಿಂದ ಆತನ ತಲೆ ಕುಟ್ಟಿ ರಾತ್ರಿ ಪಟ್ಟ ಣದ ಬಾವಿ ಯಲ್ಲಿ ಎಸೆಯುವುದು ಸಂಪ್ರದಾಯ.ಕೊನೆ ಯ ದಿನ ಗುರುತಿಸಿದ ಮನೆ ಯಲ್ಲಿ ಜೋಕುಮಾರನ ಮೂರ್ತಿ ಗೆ ಚೂರಿ ಹಾಕುವರು. ನಂತರ ಜೋಕುಮಾರ ಸತ್ತನೆಂದು ಅಗಸ ರ ಬಂಡೆ ಅಡಿ ಮಣ್ಣಿ ನಲ್ಲಿ ಹೂತು ಹಾಕಿ ಬರುವರು. ಹೀಗೆ ಹೂತಿಡುವ ಸಂದರ್ಭದಲ್ಲಿ ವಿಧಿ ವಿಧಾನಗಳಿವೆ. ನಂತರ ಸಂಚರಿಸಿದ ಸಂದರ್ಭದಲ್ಲಿ ದೊರೆ ತ ಧಾನ್ಯಗಳಿಂದ ಅಡುಗೆ ಮಾಡಿ ಸಾಮೂಹಿಕ ಭೋಜನ ಮಾಡುತ್ತೇವೆ ಎನ್ನುತ್ತಾರೆ
ಹೀಗೆ ಏಳು ದಿನ ಬದುಕುವ ಜೋಕಪ್ಪ ಏಳನೇ ದಿನ ಸಾಯುತ್ತಾನೆ. ಅಂದೇ ಅಳಲು-ಅಂಬಲಿ ಎಂಬ ವಿಶಿಷ್ಟ ಆಚರಣೆ ಹೊಲಗಳಲ್ಲಿ ನಡೆಯುತ್ತದೆ. ರೊಟ್ಟಿ-ಬುತ್ತಿ ಕಟ್ಟಿಕೊಂಡು ಹೊಲಗಳಿಗೆ ಹೊಗಿ ಭೂತಾಯಿಯ ಪೂಜೆ ಮಾಡಿ ಮನೆಮಂದಿಯೆಲ್ಲಾ ಸೇರಿ ಉಂಡು ಬರುವುದು ಸಂಪ್ರದಾಯ. ಅಷ್ಟೇ ಅಲ್ಲ ಈ ಅಳಲಿನಲ್ಲಿ ಹೊಸಬಟ್ಟೆ ಉಡುವಂತಿಲ್ಲ, ಒಡವೆ-ವಾಹನ ಖರೀದಿಸುವಂತಿಲ್ಲ,ಶುಭಕಾರ್ಯ ಮಾಡುವಂತಿಲ್ಲ ಎಂಬುದು ಗ್ರಾಮೀಣ ಜನರ ಪದ್ಧತಿಯಾಗಿದೆ
ಜೋಕುಮಾರನ ಮರಣದ ನಂತರ ಅಗಸರು ಬಟ್ಟೆ ಒಗೆಯುವ ಹಳ್ಳದ ದಂಡೆಗೋ,ಕೆರೆಯ ಸಮೀಪವೋ,ನದಿ ದಂಡೆಗೋ ಒ ಯ್ದು ಬಿಸಾಕುತ್ತಾರೆ. ಜೋಕುಮಾರನು ಸತ್ತ ಸುದ್ದಿ ತಿಳಿದ ನಂತರ ವೇ ಏಳು ದಿನಗಳ ಕಾಲ ಜೋಕುಮಾರನನ್ನು ಹೊತ್ತು ತಿರುಗಿದ ಮಹಿಳೆ ಯರು ತಲೆಗೆ ನೀರು ಹಾಕಿಕೊಂಡು ಸ್ನಾನ ಮಾಡುತ್ತಾರೆ. ಆ ಮೇಲೆ ಮೂರು ದಿನಗಳ ಕಾಲ ಊರಿನ ಯಾವ ಮಡಿವಾಳ ರೂ ಬಟ್ಟೆಗಳ ನ್ನು ಒಗೆಯುವಂತಿಲ್ಲ. ಜೋಕುಮಾರ ನನ್ನು ಬಿಸಾಕಿ ದ ಸ್ಥಳದಲ್ಲಿ ಕಲ್ಲಿಟ್ಟು ಪೂಜಿಸಿ ಎಡೆ ತೋರಿಸಿ “ದಿನ” ಮಾಡಿ ಮುಗಿ ಸಿ ತಮ್ಮ ಕಾಯಕ ಪ್ರಾರಂಭಿಸುತ್ತಾರೆ ಎನ್ನುತ್ತಾರೆ ಹಿರಿಯರು … ಇಂದಿಗೂ ಗ್ರಾಮೀಣ ಭಾಗದಲ್ಲಿ ಜೋಕುಮಾರನ ಅಳಲು ಎಂದು ಕರೆಯು ವುದು ವಾಡಿಕೆ ಆಗಿದೆ
“ಈಗಲೂ ಈ ಪದ್ಧತಿಯನ್ನು ಜಗಳೂರು ತಾಲ್ಲೂಕಿನ ಬಾರಿ ಕರು (ಗಂಗಾಮತಸ್ಥರು) ವಂಶಸ್ಥರಾದ ನೀಲಮ್ಮ, ಗೀತಮ್ಮ, ಜೀವಿತ, ರೇಖಾ, ರೇಣುಕಮ್ಮ, ಕೀರ್ತನ, ರೇವಣ್ಣ ಪ್ರಕಾಶ್, ನಿಂಗರಾಜ್, ಸಾವಿತ್ರಮ್ಮ, ಸಾಕಮ್ಮ, ದ್ರಾಕ್ಷಾಯಣಮ್ಮ, ಭಾಗ್ಯಮ್ಮ, ರೇಣುಕಮ್ಮ, ಜಯಣ್ಣ, ಜಗದೀಶ್, ಸೇರಿದಂತೆ ಅನೇಕರು ಆಚರಣೆ ಮಾಡು ತ್ತಾರೆ “
ಜೋಕುಮಾರ ಸ್ವಾಮಿಯ ಹಾಡು…
ಅಡ್ಡಡ್ಡ ಮಳೆ ಬಂದು,ದೊಡ್ಡ ದೊಡ್ಡ ಕೆರೆ ತುಂಬಿ,ಗೊಡ್ಡಗಳೆಲ್ಲ ಹೈನಾಗಿ ಜೋಕುಮಾರ,ಜೋಕುಮಾರ…ಜೋಕುಮಾರ..ಮಡಿ ವಾಳ ಕೇರಿ ಹೊಕ್ಕಾನ ಜೋಕುಮಾರ ಮುಡಿತುಂಬಾ ಹೂವ ಮುಡದಂತ ಚೆಲುವಿನ ತನ್ನ ಮಡಿಯಂದಾ ಜೋಕಮಾರ..!