ವಿಶೇಷ ವರದಿ-: ಎಚ್ ಬಾಬು ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ – : ಇಷ್ಟು ದಿನ ಅಭ್ಯರ್ಥಿಗಳು ನಾ ಮುಂದು ತಾ ಮುಂದು ಎಂದು ಚುನಾವಣಾ ಪ್ರಚಾರದಲ್ಲಿ ತೊಡ ಗಿ ಮತದಾರರಿಗೆ ಕೈಮುಗಿದು ಮತ ನೀಡು ವಂತೆ ಕೋರಿದ್ದರು ಈಗಾಗ ಲೇ ಮತದಾರರು ನಮ್ಮ ದಾವಣಗೆರೆ ಜಿಲ್ಲೆಯಲ್ಲಿ ಸಂಸದರು ಯಾರು ಎಂಬ ಯೋಗ್ಯ ಅಭ್ಯರ್ಥಿಯನ್ನು ಈಗಾಗಲೇ ಮೇ 7 ನೇ ತಾರೀಖಿ ನಂದು ಮತದಾರರು ಮತ ಪಟ್ಟಿಗೆಯಲ್ಲಿ ಆಯ್ಕೆ ಮಾಡಿದ್ದಾರೆ
ಮುಂದಿನ ತಿಂಗಳು ಜೂನ್ 4 ರವರೆಗೆ ಮತದಾರರು ರಾಜಕೀ ಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕಾತುರದಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ನಿಮ್ಮ ಪಕ್ಷದ ಅಭ್ಯರ್ಥಿ ಸೋಲು ತ್ತಾರೆ ಎಷ್ಟು ಮತಗಳ ಅಂತರ ದಲ್ಲಿ ಗೆಲ್ಲುತ್ತಾರೆ ಎಂದು ಹೋಟೆಲ್ ಸಾರ್ವ ಜನಿಕ ಸ್ಥಳಗಳಲ್ಲಿ ಕಟಿಂಗ್ ಶಾಪ್ ಗ್ರಾಮೀಣ ಭಾಗದ ಅರ ಳಿ ಕಟ್ಟೆಗಳಲ್ಲಿ ಬಿಸಿ ಬಿಸಿ ಚರ್ಚೆ ಮಾತನಾಡುವುದು ಸರ್ವೇ ಸಾಮಾ ನ್ಯವಾಗಿದೆ
ಇದೆಲ್ಲದರ ನುಡಿವೆಯು ಮತದಾರ ಪ್ರಭುಗಳು ಯಾವ ಪಕ್ಷದ ಅಭ್ಯರ್ಥಿಗಳ ಕಡೆ ಒಲವು ತೋರಿದ್ದಾರೆ ಎಂಬುವುದು ಕಾದು ನೋಡುವ ಬಹುದೊಡ್ಡ ಯಕ್ಷ ಪ್ರಶ್ನೆಯಾಗಿಯೇ ಮತದಾರರಿಗೆ ಉಳಿದುಬಿಟ್ಟಿದೆ..!
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳ ಜಿದ್ದಾಜಿದ್ದಿನ ರಾಜಕೀಯ ಭವಿಷ್ಯ ಇನ್ನೇನು ದಿನಗಣನೆ ಅಂದರೆ ಮುಂದಿನ ತಿಂಗಳು ಜೂನ್ 4 ರಂದು ಬೆಳಿ ಗ್ಗೆ 8 ಗಂಟೆಯಿಂದ ತೋಳಹುಣಿಸೆ ದಾವಣಗೆರೆ ವಿಶ್ವವಿದ್ಯಾನಿಲಯ ಶಿವ ಗಂಗೋತ್ರಿಯಲ್ಲಿ ನಡೆಯಲಿರುವ ಮತ ಎಣಿಕೆ ಫಲಿತಾಂಶದ ಕಡೆಗೆ ಅಭ್ಯರ್ಥಿಗಳ ಕುತೂಹಲ ಮತ್ತು ಎದೆಯಲ್ಲಿ ನೋಡಕ ಶುರುವಾಗಿ ದೆ ಇದೆಲ್ಲದಕ್ಕೂ ಶೀಘ್ರವೇ ಉತ್ತರ ದೊರೆಯಲಿದೆ ತಾಳ್ಮೆ ನಮ್ಮದಾಗಿರಲಿ.!