ಜಗಳೂರು ತಾಲೂಕು ಖಾಸಗಿ ವಿಂಡ್ ಫ್ಯಾನ್ ಮತ್ತು ಸೋಲಾರ್ ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಾರಾಟವಾಗಿ ದೆ -: ಪ್ರಧಾನ ಕಾರ್ಯದರ್ಶಿ ಟಿ.ಲಕ್ಷ್ಮಣ ನಾಯಕ ಬೇಸರ.
ವರದಿ -: ಎಚ್.ಬಾಬು ಮರೇನಹಳ್ಳಿ
ಜಗಳೂರು ಸುದ್ದಿ : ಜಿಲ್ಲಾಡಳಿತ ಜಗಳೂರು ತಾಲೂಕನ್ನು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಾರಾಟ ಮಾಡಲಾಗಿದೆ ಎಂದು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ್ ನಾಯಕ ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡ ಸ್ವಾಮಿ ಬಣದ ವತಿಯಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮಗಾಂಧಿ ವೃತ್ತದ ಡಾ.ಬಿ. ಆರ್ ಅಂಬೇಡ್ಕರ್ ವೃತ್ತದ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿ ಬಳಿ ನೂರಾರು ರೈತರು ಜಮಾಯಿಸಿ ತಹಶೀಲ್ದಾರ್ ಸಯ್ಯದ್ ಕಲೀಂ ಉಲ್ಲಾ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿ ನಂತರ ಮಾತನಾಡಿ ಅವರು
ಜಿಲ್ಲಾಧಿಕಾರಿಗಳು.ಉಪವಿಭಾಗದ ಅಧಿಕಾರಿಗಳು ತಹಶೀಲ್ದಾ ರ್ ಸೇರಿದಂತೆ ಇದಕ್ಕೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಮಲ್ಟಿ ನ್ಯಾಷನಲ್ ಕಂಪನಿಗಳಿಗೆ ಮಂಡಿ ಹೂರಿ ತಾಲೂಕನ್ನು ಮಾರಾಟ ಮಾಡುವುದಕ್ಕೆ ಮುಂದಾಗಿದೆ.ಅಲ್ಲದೆ ಜಿಲ್ಲೆಯಲ್ಲಿ ಜಗಳೂರು ತಾಲೂಕನ್ನು ಜಿಲ್ಲಾಧಿಕಾರಿಗಳು ನಿರ್ಲಕ್ಷ್ಯ ಮಾಡು ತ್ತಿದ್ದು,ಖಾಸಗಿ ಕಂಪನಿಗಳು ಜಗಳೂರು ಭೂಮಿಯನ್ನು ವ್ಯವಸ್ಥಿ ತವಾಗಿ ಕಬಳಿಸಿದ್ದರು,ಕಂಪನಿಗಳ ವಿರುದ್ಧವಾಗಿ ಕ್ರಮ ಕೈ ಕೊಂಡಿಲ್ಲ,ಕೇವಲ ಬೆಟ್ಟ,ಗುಡ್ಡ,ದಿಣ್ಣೆ ಪ್ರದೇಶದಲ್ಲಿ ಅಳವಡಿಸ ಬೇಕಿರುವ ವಿಂಡ್ ಪ್ಯಾನ್ ಸ್ಥಾವರಗಳನ್ನು ಕೃಷಿ ಯೋಗ್ಯ ಭೂಮಿಗೆ ಹಾಕುವುದಕ್ಕೆ ಅನುಮತಿ ನೀಡಿ ರುವುದು ಯಾವ ಆದೇಶದಲ್ಲಿದೆ ಎಂದು ಪ್ರಶ್ನೆಸಿದ್ದರಲ್ಲದೆ ರೈತರು ಉಳಿಮೆ ಮಾಡುವುದು ತಪ್ಪೇ ಜನರಿಗೆ ಅನ್ನ ಹಾಕುವ ರೈತರನ್ನು ಜಿಲ್ಲಾ ಡಳಿತ ನಿರ್ಲಕ್ಷ್ಯ ಮಾಡುವುದು ಏಕೆ ರೈತರಿಗೆ ಅನುಕೂಲವಾಗು ವಂತಹ ಸಾವಯವ ಗೊಬ್ಬರ ತಯಾರು ಘಟಕ,ಮಾರುಕಟ್ಟೆ ನಿರ್ಮಾಣಕ್ಕೆ ಅನುವು ಮಾಡುವುದು ಬಿಟ್ಟು ಖಾಸಗಿ ಕಂಪನಿ ಗಳಿಗೆ ಬೆಂಬಲ ನೀಡುತ್ತೀರುವುದು ದುರಾದೃಷ್ಟಕರ ಮುಂದಿನ ದಿನಗಳಲ್ಲಿ ತಾಲೂಕಾ ಆಡಳಿತ ಮತ್ತು ಜಿಲ್ಲಾ ಆಡಳಿತ ಈ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದರೆ ಜಿಲ್ಲಾಧಿಕಾರಿ ಗಳ ಕಚೇರಿಯನ್ನು ಮುತ್ತಿಗೆ ಹಾಕಲಾಗುವುದು ಎಂದು ಎಚ್ಚ ರಿಕೆ ನೀಡುತ್ತಾ ಆಕ್ರೋಷ ವ್ಯಕ್ತಪಡಿಸಿದರು.
ಜಂಟಿ ಕಾರ್ಯದರ್ಶಿ ಭರಮ ಸಮುದ್ರ ಕುಮಾರ್ ಮಾತನಾಡಿ ತಾಲೂಕಿನಾದ್ಯಂತ ನಿಯಮ ಬಾಹಿರವಾಗಿ ವಿಂಡ್ ಫ್ಯಾನ್ ಅಳವಡಿಕೆಮಾಡುತ್ತಿರು ವುದನ್ನು ತಾಲೂಕಿನ ಪತ್ರಿಕಾ ಮಧ್ಯಮ ದವರು ಸರಣಿ ಸುದ್ದಿಗಳನ್ನು ಭಿತ್ತರಿಸಿದರೂ,ಕಂದಾಯ ಇಲಾಖೆ ನೊಟೀಸ್ ಗಳನ್ನು ಗಾಳಿಗೆ ತೂರಿ,ಇಂಧನ ಇಲಾಖೆ ಸಿಆರ್ ಎಡಿಎಲ್ ಇ ನಾ 22 ಷರತ್ತು ಬದ್ದ ನಿಯಮಗಳನ್ನು ಲೆಕ್ಕಿಸದೆ ಭೂ ಕಂದಾಯ ಅಧಿನಿಯಮ 1964 ರ ಕಲಂ 192(ಎ) ತಿದ್ದುಪಡಿಯ ಪ್ರಕಾರ ಯಾವುದೇ ಭೂಮಿಯನ್ನು ಪರಿವರ್ತನೆ ಮಾಡದೆ ತಮ್ಮ ರಾಕ್ಷಸಿ ಕಾರ್ಯಗಳನ್ನು ಮುಂದು ವರೆಸುತ್ತಿರುವುದು ತಾಲೂಕು ಕೃಷಿಕರ ಅಸ ಮಧಾನಕ್ಕೆ ಎಡೆ ಮಾಡಿದಂತಾಗಿದೆ.ಅಲ್ಲದೆ ದೇವರ ಹೊಲಗಳು,ಸರ್ಕಾರಿ ಗೋಮಾಳ ಜಮೀನುಗಳನ್ನು ಆಕ್ರಮಣಮಾಡಿ ಕೊಂಡಿವೆ.ಶಬ್ದ ಮಾಲಿನ್ಯ,ಪರಿಸರ ಮಾಲಿನ್ಯಕ್ಕೆ ಕಾರಣವಾಗಿವೆ ಸರ್ಕಾರ ಎಚ್ಚೆತ್ತುಕೊಂಡು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಬಾಕ್ಸ್ 1
ಜಿಲ್ಲಾಧಿಕಾರಿಗಳು ಹಿಟ್ಲರ್ ಸಂಸ್ಕೃತಿಯಿಂದ ಜಿಲ್ಲೆಯನ್ನು ಆಳುತ್ತಿದ್ದಾರೆ ಎಂದನಿಸುತ್ತಿದೆ, ರೈತರ ಹಿತಾಸಕ್ತಿ ಕಾಪಡುವುದು ಬಿಟ್ಟು ಖಾಸಗಿ ಕಂಪನಿಯವರ ಹಿತ ಕಾಪಾಡುತ್ತಿದ್ದಾರೆ. ಜಗಳೂರು ತಾಲೂಕನ್ನು ಬೇರೆಡೆ ಸ್ಥಳಾಂತರ ಮಾಡಿ,ಖಾಸಗಿ ಕಂಪನಿಗಳ ವಿದ್ಯುತ್ ಸ್ಥಾವರ ಅಳವಡಿಕೆ ಮಾಡಲು ಅವಕಾಶ ಮಾಡಿಕೊಡಬೇಕು ಅಲ್ಲದೆ ಸೂಕ್ಷ್ಮ ಮಳೆ ಪ್ರದೇಶ ಹಾಗೂ ಅಖಂಡ ಬರ ಪರಿಸ್ಥಿತಿ ಹಣೆಪಟ್ಟಿಗೆ ಹೆಸರಾದರೂ ರೈತ ಹಾಗೂ ಪ್ರಗತಿ ಪರ ಸಂಘಟನೆಗಳ ನಿರಂತರ ಹೊರಾಟದ ಫಲವಾಗಿ ಭದ್ರಾಮೇಲ್ದಂಡೆ ಯೋಜನೆ ಸಾಕಾರಗೊಂಡು ನೀರು ತಲುಪುವ ಕೃಷಿ ಕ್ಷೇತ್ರ ಪ್ರಗತಿಯ ದಾಪುಗಾಲು ಹೆಜ್ಜೆಯಿಡುವ ಮುಂದಲೆಯಲ್ಲಿಯೇ, ತಾಲೂಕಿನ ಪ್ರಗತಿಗೆ ಅಮಂಗಲ ಹಾಗೂ ಅಮವಾಸ್ಯೆಯ ಕಗ್ಗತ್ತಲಿನಂತೆ ಬಹುರಾಷ್ಟ್ರೀಯ ಕಂಪನಿಗಳಾದ ರಿನ್ಯೂವ್ ಮತ್ತು ಕ್ಲೀನ್ ಮ್ಯಾಕ್ಸ್ ಕಂಪನಿಗಳು ತಮ್ಮ ಸ್ವಾರ್ಥದ ಅಜಾನುಬಾಹುಗಳನ್ನು ಅಕ್ರಮ ಮತ್ತು ಅನಧಿಕೃತವಾಗಿ ಚಾಚುತ್ತಾ ಕೃಷಿ ಯೋಗ್ಯ ಭೂಮಿಗಳನ್ನು ರೈತರ ಅಮಾಯಕ ಪರಿಸ್ಥಿತಿಯಿಂದ ಕಿತ್ತುಕೊಂಡು ಅಟ್ಟಹಾಸ ಮೆರೆಯುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
— ಬಸವರಾಜಪ್ಪ
ತಾಲೂಕು ಅಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡಸ್ವಾಮಿ ಬಣ ಜಗಳೂರು ತಾಲೂಕು
ಬಾಕ್ಸ್ -2
ಗ್ರಾಮ ಸಹಾಯಕನ ಮೇಲೆ ದೈಹಿಕವಾಗಿ ಹಲ್ಲೆ ಖಂಡನೀಯ
ಫ್ಯಾನ್ ಕಂಪನಿಯವರ ಪಟಾಲಮರು ಹಿರೇಮಲ್ಲನಹೊಳೆ ಗ್ರಾಮದ ಗ್ರಾಮ ಸಹಾಯಕನ ಮೇಲೆ ದೈಹಿಕವಾಗಿ ಹಲ್ಲೆ ನೆಡಿಸಿದರು ತಹಶೀಲ್ದಾರ್, ಎಫ್ ಐ ಆರ್ ಮಾಡಿಸದೆ, ಗ್ರಾಮ ಸ್ಥರ ಜೊತೆಗೂಡಿ ರಾಜಿ ಸಂದಾನ ಮಾಡಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ.ತಾಲೂಕು ಆಡಳಿತದ ನೋಟಿಸಿ ಗೂ ಹೆದರದೆ ಬೃಹತ್ ವಿಂಡ್ ಫ್ಯಾನುಗಳನ್ನು ಭೂ ಪರಿವರ್ತನೆ ಮಾಡದೆ ಅಕ್ರಮವಾಗಿ ಅಳವಡಿಸುತ್ತಿದ್ದಾರೆ ಆದರೆ ಇಲ್ಲಿನ ಜಿಲ್ಲಾ ಮತ್ತು ಸ್ಥಳೀಯ ಆಡಳಿತ ನಿರ್ಲಕ್ಷವಹಿಸಿದೆ ಈಗಲಾದರೂ ಎಚ್ಚೆತ್ತು ಮಾನ್ಯ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡರೇ ಜಗಳೂರಿಗೆ ಶೀಘ್ರವೇ ಒಮ್ಮೆ ಭೇಟಿ ನೀಡಿ ಈ ವ್ಯವಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿ ವಿನಂತಿ.
-ಜಯರಾಮಪ್ಪ
ಗೌರವಾಧ್ಯಕ್ಷರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನಂಜುಂಡಸ್ವಾಮಿ ಬಣ ಜಗಳೂರು ತಾಲೂಕು
ಈ ಸಂದರ್ಭದಲ್ಲಿ ರೈತ ಸಂಘಟನೆಯ ಪದಾಧಿಕಾರಿಗಳಾದ ಹೇಮರೆಡ್ಡಿ.ದೊಣ್ಣೆಹಳ್ಳಿ ಲೊಕೇಶ್,ಪಾಲನಾಯಕ, ಮಲ್ಲಿ ಕಾರ್ಜುನಪ್ಪ,ಬಸವರಾಜ.ಮಹಾಂತೇಶ್,ತಿಪ್ಪೇಸ್ವಾಮಿ,ಹೊನ್ನೂರಅಲಿ, ರಂಗಪ್ಪ,ನಾಗರಾಜ್,ಹನುಮಂತಪ್ಪ.ಮೋಹನ್ ಕುಮಾರ್.ಮಲ್ಲಿಕಾರ್ಜುನ್.ಮಹಾಂತೇಶ್.ರಂಗಪ್ಪ.ಮಂಜಪ್ಪ ಸೇರಿದಂತೆ ನೂರಾರು ರೈತರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು