✍️ವರದಿ -: ಹೆಚ್.ಬಾಬು ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು -: ಪಟ್ಟಣದಲ್ಲಿ ಗುಂಡಿ ಗಳದ್ದೇ ದರ್ಬಾರು ಎಲ್ಲಿ ನೋಡಿದರಲ್ಲಿ ರಸ್ತೆಯಲ್ಲಿ ಗುಂಡಿಗಳೇ ಸುಗಮ ಸಂಚಾರಕ್ಕೆ ಯು ಅಡ್ಡಿಯಾಗಿವೆ ಆದರೂ ಇದರ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಕಣ್ಣು ಮುಚ್ಚಿ ದ್ದಾರೆ
ರಾಜ್ಯ ಹೆದ್ದಾರಿ (ಮಲ್ಪೆ ಮೊಳಕಾಲ್ಮೂರು) ಜಗಲೂರು ಪಟ್ಟಣ ದ ಹೃದಯ ಭಾಗದಲ್ಲಿ ಹಾದು ಹೋಗಿದೆ ಜೆ.ಎಂ.ಎಫ್.ಸಿ ಸಿವಿಲ್ ಕೋರ್ಟಿನಿಂದ ದೊಣ್ಣೆಹಳ್ಳಿ ಬೈಪಾಸ್ ಅವರಿಗೆ ರಸ್ತೆ ನೋಡುವಂತಿ ಲ್ಲ ಪಟ್ಟಣದ ಹಳೇ ಮಹಾತ್ಮ ಗಾಂಧಿ ವೃತದಲ್ಲಿ ದೊಡ್ಡ ಗುಂಡಿಯೇ ಬಿದ್ದಿದ್ದು ಸುಮಾರು ದಿನಗಳು ಕಳೆಯುತ್ತ ಬರುತ್ತಿದೆ ಮಳೆ ಬಂತಂ ದರೆ ಸಾಕು ಗುಂಡಿ ತುಂಬಿ ಹರಿಯುತ್ತಿ ರುತ್ತದೆ ಅದರ ಲ್ಲಿಯೇ ವಾಹನಗಳ ಸಂಚಾರ ಅನಿವಾರ್ಯವಾಗಿದೆ
ಅಕ್ಕ ಪಕ್ಕದ ಓಡಾಡುವ ಜನರಿಗೆ ಈ ಗುಂಡಿಯಲ್ಲಿ ನಿಂತ ನೀರು ವಾಹನಗಳ ಓಡಾಟದ ರಭಸಕ್ಕೆ ರಾಚುತ್ತಿವೆ ಪ್ರತಿನಿತ್ಯ ಇದೇ ರಸ್ತೆ ಯಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಓಡಾಡುತ್ತಿ ದ್ದಾರೆ ರಸ್ತೆ ನಿರ್ವಹಣೆ ಮಾಡಬೇಕೆಂಬ ಜವಾಬ್ದಾರಿ ಇಲ್ಲವೇ ಈ ರಸ್ತೆ ನಿರ್ವಹಣೆಗೆ ಬಿಡುಗಡೆಯಾದ ಹಣ ಎಲ್ಲಿ ಹೋಯಿತು ಎಂಬುದನ್ನು ಸಾರ್ವಜನಿಕರು ಪ್ರಶ್ನಿಸಿದ್ದಾರೆ.!
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ರಸ್ತೆಯನ್ನು ನಿರ್ವಹಣೆ ಮಾಡಬೇಕಾಗಿದ್ದ ರಸ್ತೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಪಟ್ಟಣ ಪಂಚಾಯಿತಿ ಎಸ್.ಎಫ್.ಸಿ ಅನುದಾನದಲ್ಲಿ ದ್ವಿ ಮುಖ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಿತ್ತು
ಆದರೆ ಈ ಮುಖ್ಯ ರಸ್ತೆ ನಿರ್ವಹಣೆ ಲೋಕೋಪಯೋಗಿ ಇಲಾಖೆ ಕೈಗೊಳ್ಳಬೇಕಾಗಿತ್ತು ಅದ್ಯಾಕೋ ಏನೋ ಗೊತ್ತಿಲ್ಲ ಲೋಕೋಪ ಯೋಗಿ ಇಲಾಖೆ ನಿರ್ವಹಣೆ ಮಾಡುತ್ತಿಲ್ಲ ಹೋಗುವ ಚಳ್ಳಕೆರೆ ಟೋಲ್ ಗೇಟ್ ಗೆ ಹೋಗುವ ಇಳಿ ಜಾರಿನಲ್ಲಿ ತೊಗ್ಗು ಗುಂಡಿಗಳ ಲ್ಲಿ ವಾಹನ ಸಂಚರಿಸುತ್ತಿವೆ ಏನಾದರೂ ವಾಹನಗಳು ಬ್ರೇಕ್ಫಾಲ್ ಆದರೆ ದೊಡ್ಡ ಅವಘಡವೇ ಸಂಭವಿ ಸುವುದರಲ್ಲಿ ಎರಡು ಮಾತಿ ಲ್ಲ.
ಸುಗಮ ಸಂಚಾರಕ್ಕೆ ತೊಗ್ಗು ಗುಂಡಿಗಳು ಅಡ್ಡಿಯಾಗುತ್ತಿವೆ ಜಗ ಳೂರು ಪಟ್ಟಣ ಪಂಚಾಯಿತಿ ಕೂಡ ಇದರ ಬಗ್ಗೆ ಲೋಕೋಪ ಯೋಗಿ ಇಲಾಖೆ ಗಮನಕ್ಕೆ ತರಬೇಕಾಗಿತ್ತು ಆದರೆ ಇಲ್ಲಿನ ಪಟ್ಟಣ ಪಂಚಾಯಿತಿ ಕೂಡ ಮೌನಕ್ಕೆ ಶರಣಾಗಿದೆ.
ಜಗಳೂರು ಪಟ್ಟಣದಲ್ಲಿರುವ ಮುಖ್ಯರಸ್ತೆ ಅಗಲೀಕರಣದ ಸದ್ದು ಸಾರ್ವಜನಿಕರಲ್ಲಿ ಗೊಂದಲವನ್ನುಂಟು ಮಾಡಿದೆ ಇದೊಂದಡೆ ಇರಲಿ ರಸ್ತೆಯಲ್ಲಿ ಬಿದ್ದಿರುವ ತೊಗ್ಗು ಗುಂಡಿಗಳನ್ನಾದರೂ ಮುಚ್ಚ ಲು ಲೋಕೋಪಯೋಗಿ ಇಲಾಖೆಗೆ ಏನು ಅಡ್ಡಿ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಜಗಳೂರು ಪಟ್ಟಣದ ನಾಗರಿಕರು ಒತ್ತಾಯಿ ಸಿದ್ದಾರೆ.
ಜಗಳೂರು ಪಟ್ಟಣದ ಕೆಲವು ವಾರ್ಡ್ ರಸ್ತೆಗಳ ಬಗ್ಗೆ ಪಟ್ಟಣ ಪಂಚಾ ಯಿತಿ ನಿರ್ಲಕ್ಷ..!
ಜಗಳೂರು ಟೌನಿನಲ್ಲಿ 18 ವಾರ್ಡುಗಳಿದ್ದು ಇದರಲ್ಲಿ ಅನಧಿಕೃತ ಅಧಿಕೃತ ಬಡವಣೆಗಳನ್ನಾಗಿ ವಿಂಗಡಣೆ ಮಾಡಲಾಗಿದೆ ಇಲ್ಲಿರುವ ರಸ್ತೆಗಳು ದುಸ್ಥಿತಿ ಹೇಳತಿರದು ಎಲ್ಲಾ ರಸ್ತೆಗಳು ಕೇಸರು ಗದ್ದೆಮ ಯ ವಾಹನಗಳ ಓಡಾಟ ಒಂದೆಡೆ ಹೋಗಲಿ ಸಾರ್ವಜನಿಕರು ಈ ರಸ್ತೆಗಳಲ್ಲಿ ನಡೆದಾಡುವಂತಿಲ್ಲ ಎಲ್ಲಿ ಜಾರಿ ಬೀಳುತ್ತೇವೆ ಎಂಬ ಭಯದಲ್ಲಿ ನಿಧಾನವಾಗಿ ಹೆಜ್ಜೆ ಇಡುವ ಪರಿಸ್ಥಿತಿ ನಿರ್ಮಾಣವಾಗಿದೆ ಆದರೆ ಈ ಬಗ್ಗೆ ಪಟ್ಟಣ ಪಂಚಾ ಯಿತಿ ದಿವ್ಯ ನಿರ್ಲಕ್ಷ ವಹಿಸಿದೆ ಪಾಪ ವಾರ್ಡುಗಳ ಸದಸ್ಯರಿಗೆ ಅಧಿಕಾರ ವಿಲ್ಲದಂತಾಗಿದೆ ಆಡಳಿತ ಅಧಿಕಾರಿ ನೇಮಕವಾಗಿರು ವುದರಿಂದ ಅವರ ಅಧಿಕಾರ ಮಟಕು ಗೊಂಡಂತಾಗಿದೆ ಈ ರಸ್ತೆಗಳ ದುಸ್ಥಿತಿ ಬಗ್ಗೆ ಚಕಾರವೆತ್ತಿದರೆ ಅಧಿ ಕಾರಿಗಳ ಕಿವಿ ಕೇಳು ತ್ತಿಲ್ಲ ಹೀಗಾಗಿ ಅಧಿ ಕಾರಿಗಳೇ ಸರ್ವಾಧಿಕಾರಿ ಯಂತೆ ವರ್ತಿಸಿದ್ದಾ ರೆಂದು ಆರೋಪ ಸದಸ್ಯರಿಂದಲೇ ಕೇಳಿ ಬರುತ್ತಿದೆ.!
ಹೊಸ ಪಟ್ಟಣ ಪಂಚಾಯಿತಿಗೆ ಹೋಗಲು ರಸ್ತೆ ಸಂಪರ್ಕ ಕೆಸರು ಗದ್ದೆಮಯ..!
ಪಟ್ಟಣದ ಹೃದಯ ಭಾಗದಲ್ಲಿದ್ದ ಹಳೆ ಪಟ್ಟಣ ಪಂಚಾಯಿತಿ ಕಟ್ಟಡ ವನ್ನು ಕಳೆದೆರಡು ವರ್ಷಗಳ ಹಿಂದೆ ಹೊಸ ಪಟ್ಟಣ ಪಂಚಾ ಯಿತಿ ಕಾರ್ಯಾಲಯಕ್ಕೆ ಸ್ವಿಫ್ಟ್ ಮಾಡಲಾಗಿತ್ತು ಸಾರ್ವಜನಿಕರಿಗೆ ಕಟ್ಟಡವೇನು ನೋಡಲು ಬಲು ಸುಂದರ ವಾಗಿದೆ ಈ ಪಟ್ಟಣ ಪಂಚಾಯಿತಿಗೆ ಹೋಗಲು ಸಿಸಿ ರಸ್ತೆ ಅಥವಾ ಡಾಂಬರೀಕರಣ ಮಾಡಿ ನೂತನ ಕಟ್ಟಡವನ್ನು ಉದ್ಘಾಟನೆ ಮಾಡಬೇಕಾಗಿತ್ತು ಆದರೆ ಜಿಗುಟು ಮಣ್ಣಿನ ರಸ್ತೆ ಇರುವುದರಿಂದ ಮಳೆ ಬಂತಂದರೆ ಸಾರ್ವಜನಿಕರು ವಯೋ ವೃದ್ಧರು.ಅಂಗವಿಕ ಲರು.ವಾಹನ ಸವಾರರು ಈ ರಸ್ತೆಯಲ್ಲಿ ಭತ್ತ ನಾಟಿ ಮಾಡಿದ ಕೆಸರು ಗದ್ದೆಯಲ್ಲಿ ಪಟ್ಟಣ ಪಂಚಾಯಿತಿಗೆ ನಡೆದಂತಾಗುತ್ತದೆ ಏನಾದರೂ ಈ ರಸ್ತೆಯಲ್ಲಿ ಅಪ್ಪಿ ತಪ್ಪಿ ಕೆಸರಿನಲ್ಲಿ ಜಾರಿ ಬಿದ್ದರೆ ಕೈ ಕಾಲು ಮುರಿದು ಕೊಂಡು ಆಸ್ಪತ್ರೆ ಸೇರಬೇಕಾಗುತ್ತದೆ ಈ ಕೂಡ ಲೇ ಪ.ಪಂ ಮುಖ್ಯಧಿಕಾರಿಗಳಾ ಗಲಿ ಅಥವಾ ಜನಪ್ರತಿನಿಧಿಗಳಾ ಗಲಿ ಶೀಘ್ರವೇ ಈ ರಸ್ತೆಯನ್ನು ಡಾಂಬರೀಕರಣ ಅಥವಾ ಸಿ.ಸಿ ರಸ್ತೆಯನ್ನಾಗಿ ಮಾಡಿ ಸಾರ್ವಜನಿಕರಿಗೆ ಮತ್ತು ವಾಹನ ಸವಾರರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿ ಕೊಡಬೇಕೆಂದು ಸಾರ್ವ ಜನಿಕರು ಒತ್ತಾಯಿಸಿದ್ದಾರೆ.