ಪ್ರಜಾ ನಾಯಕ ಸುದ್ದಿ ಜಗಳೂರು :- ಬರಪೀಡಿತ ತಾಲೂಕಿನ ರೈತರಿಗೆ 70ಕೋಟಿ ವಿಮಾಹಣ ಬಿಡುಗಡೆಗೊಂಡಿದ್ದು.ನಿಜಕ್ಕೂ ಸ್ವಾಗತರ್ಹ ರಾಜ್ಯ ಸರ್ಕಾರಕ್ಕೆ ಅಭಿನಂದನೆಗಳು ಎಂದು ಶಾಸಕ ಬಿ.ದೇವೇಂದ್ರಪ್ಪ ಹರ್ಷ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕೃಷಿ ಇಲಾಖೆ,ರೈತರುಗಳು ಬೆಳೆ ವಿಮೆ ಬಿಡುಗಡೆಗೊಂಡ ಹಿನ್ನೆಲೆ ಹಮ್ಮಿಕೊಂಡಿ ದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿಯೇ ಅಧಿಕ ಗಜಗಾತ್ರದ ವಿಮಾಕಂತು ರೈತರಿಗೆ ಬಿಡು ಗೊಂಡಿರುವುದು ಸಂತಸದ ಸಂಗತಿ.ಕಾರಣೀ ಭೂತರಾದ ರಾಜ್ಯ ದಲ್ಲಿನ ಕಾಂಗ್ರೆಸ್ ಆಡಳಿತ ಸರ್ಕಾರದ ಕಾಳಜಿ ಹಾಗೂ ರಾಜ್ಯ ಸಚಿವ ಚೆಲುವರಾಯ ಸ್ವಾಮಿ ಅವರ ಸಹಕಾರದಿಂದ ತಾಲೂಕಿನ ಮುಸುಕಿನ ಜೋಳ, ಶೇಂಗಾ,ತೊಗರಿ,ಜೋಳ,ರಾಗಿ,ಬೆಳೆಗಳಿಗೆ ವಿಮಾ ಹಣ ಬಿಡುಗಡೆಯಾಗಿದೆ ಎಂದರು.
ಕೇಂದ್ರ ಬರ ಅಧ್ಯಯನ ತಂಡಕ್ಕೆ ತಾಲೂಕಿನ ರೈತರ ಸಮಗ್ರ ಬೆಳೆ ಗಳ ಸ್ಥಿತಿಗತಿಗಳನ್ನು ಮನವರಿಕೆಮಾಡಿಕೊಡ ಲಾಗಿತ್ತು.ಅದರ ಫಲ ವಾಗಿ ಅರ್ಹ ಫಲಾನುಭವಿಗಳಿಗೆ ಬೆಳೆ ಪರಿಹಾರ ಸಿಗಲಿದೆ ಬರ ಪೀಡಿತ ತಾಲೂಕು ಪಟ್ಟಿಗೆ ಸೇರ್ಪಡೆಗೊಳಿಸಲಾಯಿತು ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್ ಮಾತ ನಾಡಿ,2023ಮುಂಗಾರು ಹಂಗಾಮಿನಲ್ಲಿ ಶೇ.80 ರಷ್ಟು ವಾಡಿಕೆ ಗಿಂತ ಕಡಿಮೆ ಮಳೆಪ್ರಮಾಣವಾದ್ದರಿಂದ ಮೆಕ್ಕೆಜೋಳ ಬೆಳೆನಷ್ಟ ವಾಗಿದ್ದರಿಂದ ತಾಲೂಕಿನ 8 ಗ್ರಾ. ಪಂ ವ್ಯಾಪ್ತಿಗಳಲ್ಲಿ ತಾಂತ್ರಿಕ ದೋಷವಾಗಿದ್ದವು. ವಿಮಾ ಕಂಪನಿಗಳು ವಿಮಾಕಂತು ಜಮಾ ಮಾಡುವಲ್ಲಿ ನಿರಾಕರಿ ಸಿದ್ದವು.ವಿಮಾಕಂಪನಿ ಸರ್ಕಾರದ ಸ್ವಾಮ್ಯ ದಲ್ಲಿರುವುದ ರಿಂದ ನಂತರ ರಾಜ್ಯಮಟ್ಟದಲ್ಲಿ ಕೃಷಿ ಇಲಾಖೆ ಉನ್ನ ತ ಮಟ್ಟದ ಅಧಿಕಾರಿಗಳು ಸರಿಪಡಿಸಿದ ಫಲವಾಗಿ ಬೇರೆ ಯಾವ ಜಿಲ್ಲೆಗಳಿಗೂ ಬಾರದ ವಿಮೆ ತಾಲೂಕಿನ ₹70 ಕೋಟಿ ಹಣ ಬಿಡು ಗಡೆಯಾಗಿದೆ.
ತಾಲೂಕಿನಲ್ಲಿ ಕಳೆದ ವರ್ಷ 16065 ರೈತರು 1ಕೋಟಿ 77 ಲಕ್ಷ ವಿಮಾಕಂತನ್ನು ಪ್ರಸ್ತಾವನೆ ಸಲ್ಲಿಸಲಾಗಿತ್ತು ಅದರಲ್ಲಿ ರಾಜ್ಯ ಮತ್ತು ಕೇಂದ್ರಸರ್ಕಾರಗಳು 50:50 ಅನುಪಾತ ದಲ್ಲಿ 15,789 ಜನ ರೈತರಿಗೆ ಒಟ್ಟು 70 ಕೋಟಿ 48 ಲಕ್ಷ ಹಣಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಪ್ರಸಕ್ತ ಸಾಲಿನಲ್ಲಿ ತಾಲೂಕಿನಲ್ಲಿ ಮೆಕ್ಕೇಜೋಳ ಬೆಳೆಗೆ 15,000 ಜನ ಬೆಳೆ ವಿಮಾ ಕಂತು ಪಾವತಿಸಿದ್ದಾರೆ.ಮೆಕ್ಕೇ ಜೋಳ ಜುಲೈ 31ಕಂತು ಪಾವತಿಸಲು ಕೊನೆಯದಿನಾಂಕ ವಾಗಿದೆ.ಬೆಳೆನಷ್ಟ ಪರಿಹಾರಕ್ಕೆ ವಿಮೆ ಸಹಕಾರಿಯಾಗುತ್ತದೆ.5 ವರ್ಷದ ಸರಾಸರಿ ಇಳುವರಿ ಪರಿಗಣನೆ ಮಾಡಿ ವಿಮಾ ಹಣ ಅಂದಾಜಿಸಲಾಗುತ್ತದೆ ಎಂದು ತಿಳಿಸಿದರು.
ಕೆಪಿಸಿಸಿ ಎಸ್.ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ ಮಾತ ನಾಡಿ,ತಾಲೂಕಿನಲ್ಲಿ ಗಣಿಗಾರಿಕೆ,ನದಿಮೂಲಗಳಿಲ್ಲದೆ ರೈತರು ಆರ್ಥಿಕ ಸಂಕಷ್ಟದಲ್ಲಿದ್ದು ಕೃಷಿ ಭೂಮಿಯನ್ನೇ ಅವಲಂಬಿಸಿದ್ದಾರೆ. ಬೆಳೆವಿಮೆಯಿಂದ ಅನುಕೂಲ ವಾಗಲಿದೆ.ಮನರೇಗಾ ಯೋಜನೆ ಕುರಿತು ಕೆಲ ಪಟ್ಟಭದ್ರ ಹಿತಾಸಕ್ತಿಗಳಿಂದ ವ್ಯಾಪಕ ಅವ್ಯವಹಾರದ ಅಪಪ್ರಚಾರ ಗೊಳಿಸಿದ್ದಾರೆ.ವದಂತಿಗಳಿಗೆ ಕಿವಿಗೊಡದೆ ಬಡಕೂಲಿ ಕಾರ್ಮಿಕರು ಸದ್ಬಳಕೆಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಕಳೆದ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ತಾಲೂಕಿ ನ ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಹಾರ ನಡೆದಿದ್ದರೂ ಸಹ ಪ್ರಸಕ್ತವಾಗಿ ಕಾಂಗ್ರೆಸ್ ಆಡಳಿತ ಪಕ್ಷದ ರಾಜ್ಯದಲ್ಲಿ ದ್ದು ಶಾಸಕರ ಕಾಳಜಿ ಯಿಂದ ಅರ್ಹ ಫಲಾನುಭವಿಗಳಿಗೆ ಹಂತಹಂತವಾಗಿ ಹಣಜಮಾ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್,ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್,ಮುಖಂಡರಾದ ಬಿ. ಮಹೇಶ್ವರಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಓಮಣ್ಣ,ತಿಮ್ಮಣ್ಣ,ಪ್ರಕಾಶ್ ರೆಡ್ಡಿ,ಆಜಾಮುಲ್ಲಾ,ಮಾಳಮ್ಮನಹಳ್ಳಿ ವೆಂಕಟೇಶ್,ಪ್ರಕಾಶ್ ರಡ್ಡಿ , ರವಿ ಕುಮಾರ್,ಸೇರಿದಂತೆ ರೈತರು ಇದ್ದರು.