ಜಗಳೂರು ಪಟ್ಟಣದಲ್ಲಿ ಇದೆ ತಿಂಗಳು ದಿನಾಂಕ 25ರಂದು ನೆಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಚಿಂತಕ ತೋರಣಗಟ್ಟೆ ಪ್ರೊ. ಎಚ್.ಲಿಂಗಪ್ಪ ಅವರನ್ನ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಸುಜಾತಮ್ಮ ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದರು. ಹಲವು ವರ್ಷಗಳ ನಂತರ ತಾಲ್ಲೂಕಿನಲ್ಲಿ ಎರಡನೇ ಸಾಹಿತ್ಯ ಸಮ್ಮೇಳನ ನೆಡೆಸಲು ಸರ್ವ ಕನ್ನಡ ಬಳಗದ ಬಂಧುಮಿತ್ರರು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಜೊತೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಅಜೀವ ಸದಸ್ಯರು ವಿವಿದ ಸಂಘಟನೆಗಳ ಕ.ಸಾ.ಪ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ, ಚಿಂತಕ ಪ್ರೊ.ಹೆಚ್.ಲಿಂಗಪ್ಪ ಆಯ್ಕೆ ಮುಖಂಡ
ರೊoದಿಗೆ ಈಗಾಗಲೇ ಹಲವು ಸುತ್ತಿನ ಪೂರ್ವ ಭಾವಿ ಸಭೆ ನೆಡೆಸಿ ತೀರ್ಮಾನ ಮಾಡಿ ಆಯ್ಕೆ ಮಾಡಲಾಗಿದೆ ಎಂದರು.
ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯೊಂದಿಗೆ ಒಪ್ಪಿಗೆ ಪಡೆದು ನಮ್ಮ ತಾಲ್ಲೂಕಿನವರಾದ ಪ್ರೊ ಲಿಂಗಪ್ಪ ಸಾಹಿತ್ಯ ಕೃಷಿ ಜೊತೆಗೆ ವಿಬಿನ್ನ ಬಹುಮುಖ ಪ್ರತಿಭೆಯಂತಿರುವ ಅವರನ್ನ ಈ ಭಾರಿ ನೆಡೆಯುವ 2023 ರ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ್ನ ಅಧ್ಯಕ್ಷರಾಗಿದ್ದಾರೆ ಸರ್ವರೂ ಕೈಜೊಡಿಸಿ ಕನ್ನಡ ತೇರು ಏಳೆಯೋಣ ಎಂದು ಮನವಿ ಮಾಡಿದರು.
ಕಾರ್ಯಕಾರಿ ಸಮಿತಿ ಸದಸ್ಯ ನಾಗಲಿಂಗಪ್ಪ ಮಾತನಾಡಿ ಪ್ರಸ್ತುತ ಆಧುನಿಕ ಸಮಾಜಕ್ಕೆ ಸಾಹಿತ್ಯ ಭಾಷೆ ಕಲೆ ಸಂಸ್ಕöÈತಿ ಮತ್ತು ಐತಿಹಾಸಿಕ ಪರಂಪರೆ ವಿಚಾರಧಾರೆಗಳನ್ನು ತಿಳಿಸುವ ಮುಖ್ಯ ಉದ್ದೇಶದಿಂದಲೇ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಜಗಳೂರು ತಾಲ್ಲೂಕು ಇತಿಹಾಸ ಮತ್ತು ಪರಂಪರೆಯ ಪ್ರತಿಬಿಂಬಿಸುವoತಹ ಚಿತ್ರಗಳನ್ನ ಒಳಗೊಂಡoತಹ ಸಮ್ಮೇಳನ ಲಾಂಛನವನ್ನ ಸಿದ್ದ ಪಡಿಸಲಾಗಿದೆ ವಿವಿದ ಗೋಷ್ಠಿಗಳನ್ಮ ನೆಡೆಸಲು ವಿವಿದ ಪ್ರತ್ಯೇಕವಾಗಿ ಸಮಿತಿ ರಚಿಸಲಾಗಿದ್ದು ಸಾಹಿತ್ಯ ಆಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಎಂದು ತಿಳಿಸಿದರು.
ಇದೇ ವೇಳೆ ಕಾರ್ಯದರ್ಶಿ ಗೀತಾ ಮಂಜು. ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ.ಕಾರ್ಯಕಾರಿ ಸಮಿತಿ ಸದಸ್ಯ ಆರ್ ಓಬಳೇಶ್ ಮಾತನಾಡಿದರು
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಗೌರವ ಕಾರ್ಯದರ್ಶಿ ಗೀತಾ ಮಂಜುನಾಥ್.ಸಂಘಟನಾ ಕಾರ್ಯದರ್ಶಿ ಕೃಷ್ಣಮೂರ್ತಿ. ಮಹಿಳಾ ಸಾಹಿತಿ ಗೌರಮ್ಮ.
ಚಂಪಕಲಾ , ಕಾರ್ಯಕಾರಣಿ ಸಮಿತಿ ಸದಸ್ಯರಾದ , ಆರ್ ಓಬಳೇಶ್ , ಮುಖ್ಯ ಶಿಕ್ಷಕಿ ಶಿವಮ್ಮ. ಇದ್ದರು