ಜಗಳೂರು ಸುದ್ದಿ
ಬಂಜಾರ ಬುಡಕಟ್ಟು ಸಮುದಾಯ ಶಿಕ್ಷಣದಿಂದ ಮುಖ್ಯವಾಹಿನಿ ಯಲ್ಲಿದೆ ಎಂದು ಬಂಜಾರ ಸಮಾಜದ ತಾಲೂಕು ಅಧ್ಯಕ್ಷ ಪುರುಷೋತ್ತಮನಾಯ್ಕ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಸಂತಸೇವಾಲಾಲ್ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು. ವಿಶಿಷ್ಠ ಸಂಪ್ರದಾಯಗಳಿಂದ ಬಂಜಾರ ಸಮಾಜದವರು ಕಾಡುಮೇಡು ಅಲೆದು ಶ್ರಮದ ಜೀವನ ಸಾಗಿಸುತ್ತಿದ್ದರು.ಸಂವಿಧಾನದ ಫಲವಾಗಿ ಉತ್ತಮ ಶಿಕ್ಷಣ ಪಡೆದು ಸರ್ವತೋಮುಖ ಅಭಿವೃದ್ದಿ ಹೊಂದಿದ್ದಾರೆ ಅಲ್ಲದೆ ಆಡಳಿತ ಸರಕಾರಗ ಳು ತಾಂಡಗಳು ಕಂದಾಯಗ್ರಾಮಗಳಾಗಿ ಪರಿವರ್ತನೆಗೊಂಡಿವೆ. ತಾಲೂಕಿನಲ್ಲಿ ಸಹೋದರ ಸಮಾಜಗಳ ಸಹಕಾರದಿಂದ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ ಎಂದು ತಿಳಿಸಿದರು.
ಸಂದರ್ಭದಲ್ಲಿ ಪ.ಪಂ ಸದಸ್ಯ ಪಾಪಲಿಂಗಪ್ಪ, ಗ್ರೇಡ್ -2 ತಹಶೀಲ್ದಾರ್ ಮಂಜಾನoದ, ಮುಖಂಡರಾದಕೃಷ್ಣ ನಾಯ್ಕ, ಖಜಾನೆ ಅಧಿಕಾರಿ ನೇತ್ರಾವತಿ, ಆರ್.ಐ ಕುಬೇಂದ್ರನಾಯ್ಕ ಸೇರಿದಂತೆ ಇದ್ದರು.
0 Today: 4