ಜಗಳೂರು ಸುದ್ದಿ : ನೀವು ಮಾಡಿದ ಶಾಸಕ ನಾನು. ಮೂರು ಸಲ ಆಶೀರ್ವಾದ ಮಾಡಿದ್ದೀರಿ. ನಿಮ್ಮ ಆಶೀರ್ವಾದ ಇರುವವರಿಗೂ ಮನೆಯ ಮಗನಾಗಿ ಕ್ಷೇತ್ರದ ಅಭಿವೃದ್ದಿ ಮಾಡುವೆ ಎಂದು ಶಾಸಕ ಎಸ್. ವಿ ರಾಮಚಂದ್ರ ಹೇಳಿದರು.
ಪಟ್ಟಣದ ಗುರುಭವನದಲ್ಲಿ ತಾಲೂಕು ಬಿಜೆಪಿ ಘಟಕದ ವತಿಯಿಂದ ವಿಧಾನ ಸಭಾ ಕ್ಷೇತದ ವೀಕ್ಷಕರ ಪರಿಚಯ ಹಾಗೂ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಈ ಇದೆ ವೇಳೆ 30ಕ್ಕೂ ಅಧಿಕ ಕಾಂಗ್ರೇಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಗೊಂಡರು.
ಕ್ಷೇತ್ರದಲ್ಲಿ ಎಂದು ಜಗಳವಿಟ್ಟವನಲ್ಲ:-
ಕ್ಷೇತ್ರದಲ್ಲಿ ಅಣ್ಣ ತಮ್ಮಂದಿರಿಗೆ ಜಗಳವಿಟ್ಟವನಲ್ಲ. ಹೆಗಲಮೇಲೆ ಕೈ ಹಾಕಿಕೊಂಡು ಮಾತನಾಡಿ ಆಸೆ ಹುಟ್ಟಿಸುವವನಲ್ಲ. ಕೊಟ್ಟ ಮಾತನ್ನು ನಡೆಸುವಂತವನು. ಜಗ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುವೆ. ನಾನು ಮನೆಯಲ್ಲಿರದೇ ಕ್ಷೇತ್ರದವನ್ನು ಸುತ್ತಾಡುತ್ತಿದ್ದು, ಅಪಾಘತವಾದಾಗ, ಸಾವಿನಲ್ಲಿದ್ದವರಿಗೆ ಆರೋಗ್ಯ ತೊಂದರೆಯಾದಾಗ ನಾನು ಭೇಟಿ ನೀಡಿ ಸಹಕಾರ ನೀಡಿದ್ದೇನೆ. ಹರಪನಹಳ್ಳಿ ತಾಲ್ಲೂಕಿನ ಕ್ಷೇತ್ರದ 7 ಗ್ರಾಮ ಪಂಚಾಯಿತಿಯ 12 ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ ಮಾತು ಕೊಟ್ಟಂತೆ ನಡೆದು ಕೊಂಡಿದ್ದೇನೆ ಎಂದರು.
ನಮ್ಮ ಬಿಜೆಪಿ ಪಕ್ಷಕ್ಕೆ ನಿನ್ನೆ ಮೊನ್ನೆ ಬಂದರಿಗೆ ಟಿಕೆಟ್ ದೊರೆಯುವುದಿಲ್ಲ:-
ಯಾರು ಪಕ್ಷಕ್ಕೆ ದುಡಿದಿರುತ್ತಾರೋ ಅಂತವರನ್ನು ಪಕ್ಷ ಗುರುತಿಸುವಂತ ಕೆಲಸ ಮಾಡುತ್ತದೆ. ಓಡಿ ಬಂದರಿಗೆ ಟಿಕೆಟ್ ದೊರೆಯುವುದಿಲ್ಲ. ಸಿರಿಗೆರೆ ಶ್ರೀಗಳ ಆಶರ್ೀವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. 164 ಗ್ರಾಮಗಳಿಗೆ 424 ಕೋಟಿ ರೂ ವೆಚ್ಚದಲ್ಲಿ ಬಹುಗ್ರಾಮ ಕುಡಿಯಿವ ನೀರಿನ ಯೋಜನೆ ಜಾರಿಗೆ ತರಲಾಗಿದೆ. 1336 ಕೋಟಿ ರೂ ವೆಚ್ಚದ ಭದ್ರ ಮೇಲ್ದಾಂಡೆ ನೀರಾವರಿ ಯೋಜನೆಗೆ ಇನ್ನೂ 15 ದಿನಗಳಲ್ಲಿ ಕಾಮಗಾರಿಗೆ ಮಾನ್ಯ ಮುಖ್ಯಮಂತ್ರಿಗಳು ಇಲ್ಲವೆ ಸಚಿವರನ್ನು ಕರೆಸಿ ಭೂಮಿ ಪೂಜೆ ಮಾಡಿಸಲಾಗುವುದು, ಜಲ ಜೀವನ್ ಮೀಷನ್ ಯೋಜನೆಯಡಿ ಮನೆ ಮನೆಗೆ ನೀರು ಕೊಡಲಾಗುತ್ತಿದೆ ಆದರೆ ಪ್ರಚಾರ ಕೊರತೆ ಇದೆ ಈ ಯೋಜನೆಗಳ ಬಗ್ಗೆ ಜನತೆಗೆ ತಿಳಿಸುವಂತ ಕೆಲಸ ಮಾಡಬೇಕು.ಎರಡು ಭಾರಿ ಸಿ.ಎಂ ಕರೆಸಿ ಬೃಹತ್ ಕಾರ್ಯಕ್ರಮಮಾಡಿದ್ದೇನೆ. ಕಬ್ಬಡ್ಡಿ ಕ್ರೀಡಾ ಕೂಟವನ್ನು ಆಯೋಜಿಸಿದ್ದನೆ. ಎಸ್. ಟಿ ನಿಗಮದ ಅಧ್ಯಕ್ಷನಾಗಿದ್ದರಿಂದ ಈಗ 200 ಮೊಟರ್ ಸೈಕಲ್ಗಳನ್ನು ಆರ್ಹರಿಗೆ ಕೊಡಲಾಗುವುದು. ನಿಗಮದ ವತಿಯಿಂದ 600 ಬೋರ್ ವೆಲ್ ಸೇರಿದಂತೆ ಅನೇಕ ಸವಲತ್ತು ಕೊಡಿಸಲಾಗಿದೆ ಎಂದರು.
ಪಕ್ಷದ ತೀರ್ಮಾನವೆ ಅಂತಿಮ ತೀರ್ಮಾನ :-
ವಿಧಾನ ಸಭಾಕ್ಷೇತದ ವಿಕ್ಷಕ ಆರುಂಡಿ ನಾಗರಾಜ್ ಮಾತನಾಡಿ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಪ್ರಧಾನಮಂತ್ರಿ ಮಾಡಿದ್ದಾರೆ. ಪಕ್ಷದ ಕಾರ್ಯಕರ್ತರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ನಾಯಕರಗಿಂತ ಕಾರ್ಯಕರ್ತರ ಶಕ್ತಿ ಬಹಳ ದೊಡ್ಡದು. ಪಕ್ಷದ ತಿಮರ್ಾನವೇ ಅಂತಿಮ ತಿಮರ್ಾನ ಎಂಬ ಸಿದ್ದಾಂತದಲ್ಲಿರುವ ನಾನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದೆ.ಕ್ಷೇತ್ರದಲ್ಲಿ ಬೂತ್ ಮಟ್ಟದ ಕಮಿಟಿ ಮಾಡಬೇಕಾಗಿದೆ ಈ ಕಮಿಟಿಯವರು ಶೇ.50 ರಷ್ಟು ಮತಗಳನ್ನು ಪಡೆದು ಕೊಂಡರೆ ಮಾಡಿದರೆ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಲಿದೆ ಎಂದರು.
ಶಾಸಕರೇ ಏಕೈಕ ಬಿಜೆಪಿ ಅಭ್ಯರ್ಥಿ :-
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೊಕ್ಕೆ ನಾಗರಾಜ್ ಮಾತನಾಡಿ ಯಾರೋ ಸರಕಾರಿ ನೌಕರ ನಿವೃತ್ತಿ ನೀಡಿ ಕೊಟಿ ಗಟ್ಟಲೇ ಹಣ ಲೂಟಿ ಬಂದವರಿಗೆ ಯಾರು ಒತ್ತು ನೀಡುವುದಿಲ್ಲ. ನೀಡಬೇಡಿ ಪಕ್ಷದ ಸಭೆಯಲ್ಲಿ ಹೊರಗಿನಿಂದ ಬಂದವರಿಗೆ ಟಿಕೇಟ್ ನೀಡಬಾರದು ಮತ್ತು ಪಕ್ಷ ಸಂಘಟನೆ ಮಾಡಿದವರಿಗೆ ಆದ್ಯತೆ ನೀಡಬೇಕು ಎಂದು ಹೇಳುವ ಮೂಲಕ ಪರೋಕ್ಷವಾಗಿ ಕಲ್ಲೇಶಪ್ಪ ಅವರ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ, ಮಾಜಿ ಜಿ.ಪಂ ಸದಸ್ಯ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ದಿದ್ದಿಗಿ ಬಸವರಾಜ್, ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾ, ಶಿವಕುಮಾರ್ ಸ್ವಾಮಿ ಬಿಸ್ತುವಳ್ಳಿ ಬಾಬು , ಸಿದ್ದೇಶ್, ಆರ್.ತಿಪ್ಪೇಸ್ವಾಮಿ, ಪಾಪಲಿಂಗ, ಎಸ್ಸಿ ಮೋರ್ಚಾದ ತಾಲೂಕು ಅಧ್ಯಕ್ಷ ರಾಜೇಶ್, ಮುಖಂಡ ಓಬಳೇಶ್ ಸೇರಿದಂತೆ ಇತರರು ಇದ್ದರು.