ಜಗಳೂರು ಸುದ್ದಿ:ಸಣ್ಣ ರೈತರು ರಾಗಿ ಖರೀದಿ ಕೇಂದ್ರ ಸದ್ಬಳಕೆಮಾಡಿಕೊಳ್ಳಬೇಕು ಅಲ್ಲದೆ ಗುಣಮಟ್ಟದ ರಾಗಿ ಮಾರಾಟ ಮಾಡಬೇಕು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.
ಪಟ್ಟಣದ ಎಪಿಎಂಸಿ ಕಛೇರಿ ಬಳಿ ರಾಗಿ ಖರೀದಿ ಕೇಂದ್ರಕ್ಕೆ ದಿಢೀರ್ ಬೇಟಿ ನೀಡಿ ರಾಗಿ ತೂಕ,ಗ್ರೇಡ್,ಗುಣಮಟ್ಟ ಪರೀಕ್ಷಿಸಿ ನಂತರ ಅವರು ಮಾತನಾಡಿದರು.
ಗೋಡನ್ ಮ್ಯಾನೇಜರ್ ಗೆ ಸೂಚನೆ :ಎ.ಪಿ.ಎಂ.ಸಿ ಮ್ಯಾನೇಜರ್ ಶಂಕರ್ ಅವರಿಗೆ ಹಾಗೂ ಅಧಿಕಾರಿಗಳಿಗೆ ಗ್ರೇಡ್ ಯಂತ್ರ,ಜರಡಿ ಬಳಸಿ ಸ್ವಚ್ಛತೆಯನ್ನು ಸಮರ್ಪಕ ಬಳಕೆಮಾಡಬೇಕು ಹಾಗೂ ರೈತರಿಂದ ಉತ್ತಮ ಗುಮಟ್ಟದ ರಾಗಿ ಖರೀದಿಸಿ ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು.ಸರಿಯಾಗಿ ತೂಕಯಂತ್ರ ನಿರ್ವಹಿಸಬೇಕು. ಅರ್ಹ ಸಣ್ಣರೈತ ರಿಂದ ಮಾತ್ರ ರಾಗಿ ಖರೀದಿಮಾಡಬೇಕು ಎಂದು ತರಾಟೆಗೆ ತೆಗದುಕೊಂಡರು.
ಜಿಲ್ಲಾಧಿಕಾರಿಗಳ ಆಗಮನದ ಹಿನ್ನೆಲೆ ಖರೀದಿ ಕೇಂದ್ರದಲ್ಲಿ ಅಧಿಕಾರಿಗಳು ಜಾಗೃತಿಯಿಂದ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿತು.
ಅಗತ್ಯ ದಾಖಲಾತಿಗಳನ್ನು ಪಡೆದು ಓಟಿಪಿ ಸಂಖ್ಯೆ ನಿರ್ವಹಣೆ ಇವೆಲ್ಲಾ ಸರಿಯಾಗಿ ನಿರ್ವಹಿಸಬೇಕು.ರೈತರಿಗೆ ಖರೀದಿಕೇಂದ್ರದಲ್ಲಿ ಕ್ವಿಂಟಾಲ್ ಗೆ ₹3500 ದರ ನಿಗದಿಯಾಗಿದ್ದು.ಹೊರಗಡೆ ಮಾರುಕಟ್ಟೆಗಿಂತ ಅಧಿಕವಾಗಿ ಎಪಿಎಂಸಿಯಲ್ಲಿ ಲಾಭಗಳಿಕೆ ಸಾಧ್ಯ ಎಂದು ಮಾಹಿತಿ ನೀಡಿದರು.
ಸಂದರ್ಭದಲ್ಲಿ ಉಪವಿಭಾಗ ಅಧಿಕಾರಿ ದುರ್ಗಾಶ್ರೀ,ತಹಶೀಲ್ದಾರ್ ಜಿ. ಸಂತೋಷ್ ಕುಮಾರ್, ಎಪಿಎಂಸಿ ಕಾರ್ಯದರ್ಶಿ ಗಿರೀಶ್ ನಾಯ್ಕ, ಗೋಡನ್ ಮ್ಯಾನೇಜರ್ ಶಂಕರ್ ಸೇರಿದಂತೆ ಇದ್ದರು.