ಪ್ರಜಾ ನಾಯಕ ಜಗಳೂರು ಸುದ್ದಿ -:ಪಟ್ಟಣದ ಬಯಲು ರಂಗಮಂದಿರದಲ್ಲಿ ₹1.20 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಕನ್ನಡ ಭವನ ಹಾಗೂ ಪರಿಕರಗಳನ್ನು ಅಭಿವೃದ್ದಿಪಡಿಸುವೆ.ಮುಂದಿನ ವರ್ಷದಲ್ಲಿ ಜಿಲ್ಲಾಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಗಳೂರಿನಲ್ಲಿಯೇ ಆಯೋಜಿಸಲು ಅವಕಾಶ ಕೊಡಿ ಯಾವುದೇ ಆಡಳಿತ ಪಕ್ಷದವರು ಮುಖ್ಯಮಂತ್ರಿ ಯಾದರೂ ಸಮ್ಮೇಳನಕ್ಕೆ ಆಹ್ವಾನಿಸುವೆ ನಾನು ಮತ್ತೊಮ್ಮೆ ಶಾಸಕ ನಾಗಿ ಆಯ್ಕೆ ಯಾಗುವುದು ನಿಶ್ಚಿತ ಎಂದು ಎಸ್.ವಿ.ರಾಮಚಂದ್ರ ಎಂದು ತಿಳಿಸಿದರು
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಕಸಾಪದಿಂದ ಆಯೊಜಿಸಿದ್ದ ಅನುಭಾವ ಕವಿ ಮಹಾಲಿಂಗರಂಗ ವೇದಿಕೆಯಲ್ಲಿ ಕನ್ನಡಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಸಾಹಿತ್ಯ ಕೇವಲ ದಾವಣಗೆರೆ ಜಿಲ್ಲೆಯ ಕೆಲ ತಾಲೂಕು ಗಳಿಗೆ ಮಾತ್ರ ಸೀಮಿತವಲ್ಲ ಗಡಿನಾಡು ಜಗಳೂರಿನಲ್ಲಿಯೂ ಕನ್ನಡ ಸಾಹಿತ್ಯ ಆಸಕ್ತಿ ಅಪಾರವಾಗಿದೆ.ಕನ್ನಡ ಭಾಷಾ ಭಿಮಾನಿಗಳಿಗೆ ಸಮ್ಮೇಳನದಲ್ಲಿ ಕನ್ನಡ ದಿಗ್ವಿಜಯರಿಂದ ಕನ್ನಡದ ಕಂಪು ಸೂಸಿ ತಾಲೂಕಿನಲ್ಲಿ ಸಾಹಿತ್ಯ ಲೋಕಶ್ರೀಮಂತಗೊಳಿಸುವೆ.ರಾಜ್ಯಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಗಳನ್ನು ಯಶಸ್ವಿಗೊಳಿಸಿದ ಹೃದಯ ಶ್ರೀಮಂತಿಕೆಯ ಜನರ ಬೆಂಬಲ ನಮಗಿದೆ ಎಂದು ಹೇಳಿದರು.
ಭದ್ರಾಮೇಲ್ದಂಡೆ ಯೋಜನೆಗೆ ಮುಂದಿನ ವಾರ ಶಂಕುಸ್ಥಾಪನೆ:-ಬರದನಾಡಿಗೆ ಭದ್ರಾಮೇಲ್ದಂಡೆ ಯೋಜನೆಯ ಪರಿಕಲ್ಪನೆ ಪರಿಚಯಿಸಿದ ಹೊರಾಟಗಾರ ತೋರಣಗಟ್ಟೆ ತಿಪ್ಪೇಸ್ವಾಮಿ ಅವರ ಪರಿಶ್ರಮ ಹಾಗೂ ಬಿಜೆಪಿ ಆಡಳಿತ ಸರಕಾರದ ಸಹಕಾರದಿಂದ ಯೋಜನೆ ಸಕಾರಗೊಂಡಿದ್ದು.ಮುಂದಿನ ವಾರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ ಶೀಘ್ರ 10 ಕೆರೆಗಳಿಗೆ ನೀರು ಭರ್ತಿಮಾಡಲಾಗುವುದು.ಬಿಜೆಪಿ ಪಕ್ಷದ ಕೊಡುಗೆ ಯಾಗಿ ತಾಲೂಕಿನ ಹಳ್ಳಿಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ನಳಗಳ ಮೂಲಕ ಮನೆಬಾಗಿಲಿಗೆ ಕುಡಿಯುವ ನೀರು ಹರಿಸುವೆ.ನೀರಿನ ಸಮಸ್ಯೆಯಿದ್ದ ಜಗಳೂರು ತಾಲೂಕಿಗೆ ಹೆಣ್ಣು ಕೊಡಲು ಹಿಂಜರಿ ಯುತ್ತಿದ್ದವರಿಗೆ ಬರದನಾಡು ಹಸಿರು ನಾಡನ್ನಾಗಿಸಿ ತೋರಿಸುವೆ ಎಂದು ಸವಾಲು ಹಾಕಿದರು.
ಜಾನಪದ ವಿದ್ವಾಂಸ ಡಾ.ಎಂ.ಜಿ.ಈಶ್ವರಪ್ಪ ಸಮ್ಮೇಳನ ಉದ್ಘಾಟಿಸಿ ಮಾತನಾಡಿ,ಅನುಭಾವ ಕವಿ ಮಹಾಲಿಂಗ ರಂಗ ನಡೆದಾಡಿದ ಭೂಮಿಯಲ್ಲಿ ಇಂದಿನ ತಾಲೂಕು ಸಮ್ಮೇಳನ ಅರ್ಥಪೂರ್ಣವಾಗಿ ಅವಿಸ್ಮರಣೀಯವಾಗಿದೆ.ಮನುಷ್ಯನಿಗೆ ಶ್ರೇಷ್ಠವಾದದ್ದು ದೊರೆಯಲು ಪರಿಶ್ರಮ ದ ಅಗತ್ಯವಿದೆ ಹಿಮಾಲಯ ಪರ್ವತಾರೋಹಿಯಾಗುವಂತೆ ಸರ್ವ ಶಕ್ತಿಯನ್ನು ಸಾಹಿತ್ಯ ಕೊಡುತ್ತದೆ.ಹಿಂದೆ ಕಾವ್ಯಗಳನ್ನು ರಚಿಸಿದ ಕವಿಗಳು ಮಹಾರಾಜರನ್ನು ಮೆಚ್ಚಿಸಲು ಆಸ್ಥಾನದಲ್ಲಿದ್ದರು ಎಂದು ನಿದರ್ಶನನೀಡಿದರು.
ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿದ್ದುಕೊಂಡು ಸಾಹಿತ್ಯ ಲೋಕಕ್ಕೆ ಪಾದಾರ್ಪಣೆಮಾಡಿ ಬುದ್ದ ಬಸವ ಅಂಬೇಡ್ಕರ್ ಅವರ ಆಶಯಗಳಂತೆ ಸಾಮಾಜಿಕ ಬದಲಾವಣೆಗಾಗಿ 36 ಕೃತಿ ರಚಿಸಿರುವ ಪ್ರೋ.ಲಿಂಗಪ್ಪ ಅವರ ಅಧ್ಯಕ್ಷತೆ ಸ್ವಾಗತರ್ಹ ಇಂತಹರ ಅಗತ್ಯ ಕನ್ನಡ ಸಾಹಿತ್ಯ ಲೋಕಕ್ಕಿದೆ.ಪ್ರಸಕ್ತವಾಗಿ ಸಂಸ್ಕಾರ ಮರೆತು ಸಮಾಜದಲ್ಲಿ ಅಸಹಿಷ್ಣತೆ,ಅಶ್ಲೀಲಪದಗಳ ವಾಚನ,ನಾಗರಿಕರಿಗೆ ಅಸಹ್ಯವಾಗುವಂತಿವೆ.ಜ್ಞಾನಪೀಠ ಪ್ರಶಸ್ತಿ ವಿಜೇತ ಕವಿಗಳ ಪರಿಚಯ,ಕನಕದಾಸರ ಕೀರ್ತನೆಗಳು, ಗ್ರಾಮೀಣ ಭಾಗದ ಅನಕ್ಷರಸ್ಥ ಜಾನಪದ ಮಹಿಳಾ ಕವಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತು. ಗೋಷ್ಠಿಗಳ ಮೂಲಕ ಕನ್ನಡ ಭಾಷೆ ಆರಾಧನೆ ಅಗತ್ಯವಿದೆ ಎಂದು ಸಲಹೆ ನೀಡಿದರು.
ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ,ಚಿತ್ರದುರ್ಗ ಜಿಲ್ಲೆಯಿಂದ ದಾವಣಗೆರೆಜಿಲ್ಲೆಗೆ ಸೇರ್ಪಡೆಯ ನಂತರ ಮೊದಲನೇ ತಾಲೂಕು ಸಮ್ಮೇಳನ ಅದ್ದೂರಿಯಾಗಿ ನಡೆಯುತ್ತಿದೆ.ಚನ್ನಗಿರಿ ತಾಲೂಕಿನಲ್ಲಿ ಜಿಲ್ಲಾ ಸಮ್ಮೇಳನವನ್ನು ಮಾರ್ಚ್ ತಿಂಗಳಲ್ಲಿ ಆಯೋಜಿಸಲಾಗಿದೆ. ಬರದನಾಡಿನಲ್ಲಿ ಕನ್ನಡದ ಮನಸ್ಸುಗಳು ಶ್ರೀಮಂತವಾಗಿವೆ ಕನ್ನಡ ನುಡಿ ಹಬ್ಬವನ್ನು ಜಾತ್ಯಾತೀತವಾಗಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.
ಕ.ಸಾ.ಪ ವತಿಯಿಂದ ಅದ್ದೂರಿ ಮೆರವಣಿಗೆ:- ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ಪರಿಷತ್ತಿನ ಧ್ವಜಾರೋಹಣ ಕಾರ್ಯಕ್ರಮ,ಹಾಗೂ ಸಮ್ಮೇಳನದ ಅಧ್ಯಕ್ಷರಾದ ಪ್ರೋ.ಲಿಂಗಪ್ಪ ಅವರನ್ನು ಬೆಳ್ಳಿ ಸಾರೋಟಿನಲ್ಲಿ ವಿವಿಧ ಕಲಾತಂಡಗಳೊಂದಿಗೆ, ನಂದಿಕೋಲು ಕುಣಿತ,ವಾಧ್ಯವೃಂದಗಳೊಂದಿಗೆ ಪಟ್ಟಣದ ಅಂಬೇಡ್ಕರ್ ವೃತ್ತ,ಮಹಾತ್ಮಗಾಂಧಿ ವೃತ್ತ,ಪ್ರವಾಸಿಮಂದಿರದಿಂದ ವೇದಿಕೆಗೆ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ವಿವಿಧ ಮಹಾದ್ವಾರಗಳ ಉದ್ಘಾಟನೆ:ಇದೇ ವೇಳೆ ಜೆ.ಎಂ. ಇಮಾಂ ಟ್ರಸ್ಟ್ ನ ಹಾಜಿ ಜೆ.ಕೆ.ಹುಸೇನ್ ಮಿಯ್ಯಾಸಾಬ್ ಚಂದ್ರಶೇಖರ ಶಾಸ್ತ್ರಿ ಮಂಟಪವನ್ನು,ವಾಲಿಬಾಲ್ ತಿಮ್ಮಾರೆಡ್ಡಿ,ಜೆ.ಎಂ.ಇಮಾಂ ಮಹಾದ್ವಾರ ವನ್ನು, ಡಾ.ಜಿ.ಸಿದ್ದಪ್ಪ ಭೀಮಪ್ಪನಾಯಕ ಮಹಾದ್ವಾರವನ್ನು ಉದ್ಘಾಟಿಸಿದರು.
” ಸರ್ವ ಸಮನ್ವಯವಾಗಿ ಸುಭದ್ರವಾದ ನಾಡನ್ನು ಕಟ್ಟ ಬೇಕಾದರೆ ಸಮಾಜದ ವ್ಯಕ್ತಿಗಳನ್ನು ಸುಂಸ್ಕೃತರನ್ನಾಗಿಸ ಬೇಕು. ವಿದ್ಯಾರ್ಥಿ ಗಳನ್ನು ಮೊಬೈಲ್ ನಿಂದ ದೂರ ಉಳಿಸಿ ಸಾಹಿತ್ಯ,ಗ್ರಂಥಗಳನ್ನು ಪರಿಚಯಿಸಬೇಕು.ಮೂಲ ಸಂಸ್ಕೃತಿ ಶಿಕ್ಷಣಕ್ಕೆ ಆಡಳಿತ ಸರಕಾರಗಳು ಹಾಗೂ ಪೋಷಕರು ಕಲಿಸಬೇಕಿದೆ “
——-ಷ.ಬ್ರ.ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಓಂಕಾರೇಶ್ವರ ಹುಚ್ಚನಾಗಲಿಂಗ ಸ್ವಾಮಿ ದಾಸೋಹ ಮಠ.ಮುಸ್ಟೂರು.
ಸಂದರ್ಭದಲ್ಲಿ ಇಂದಿರಾ ರಾಮಚಂದ್ರ,ತಹಶೀಲ್ದಾರ್ ಜಿ. ಸಂತೋಷ್ ಕುಮಾರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ,ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್,ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಚಂದ್ರಪ್ಪ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಓಂಕಾರೇಶ್ವರಪ್ಪ, ಕಾರ್ಯ ನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದಪ್ಪ ,ಜಯಲಕ್ಷ್ಮಿ ಮಹೇಶ್,ಡಿ.ಸಿ ಮಲ್ಲಿಕಾರ್ಜುನ್, ನಿವೃತ್ತ ನೌಕರ ಸಂಘದ ಅಧ್ಯಕ್ಷ ಪಾಲಯ್ಯ,ಭದ್ರಾಮೇಲ್ದಂಡೆ ಹೊರಾಟಗಾರ ತಿಪ್ಪೇಸ್ವಾಮಿ,ಎನ್ ಟಿ ಎರ್ರಿಸ್ವಾಮಿ,ಪ್ರಭಾಕರ್ ಲಕ್ಕೋಳ್.ಕಸಾಪ ತಾಲೂಕು ಅಧ್ಯಕ್ಷ ಸುಜಾತಮ್ಮ.ಕಾರ್ಯದರ್ಶಿ ಗೀತಾ ಮಂಜು. ಮಾರನಾಯಕ ಕೋಶ ಅಧ್ಯಕ್ಷರಾದ ಬೆಲ್ಲದ ಬಸವರಾಜ್ ಸಂಘಟನಾ ಕಾರ್ಯದರ್ಶಿ ಕೆ ಕೃಷ್ಣಮೂರ್ತಿ ಕಾರ್ಯಕಾರಿ ಸಮಿತಿ ಸದಸ್ಯರಾದ. ಪವನ್ ಭಾರತ್ ಗ್ಯಾಸ್ ಮಾಲೀಕರಾದ ಓಬಣ್ಣ ಪ್ರಾಂಶುಪಾಲ ನಾಗಲಿಂಗಪ್ಪ, ವಕೀಲರಾದ ಆರ್.ಓಬಳೇಶ್. ಮುಖ್ಯ ಶಿಕ್ಷಕಿ ಶಿವಮ್ಮ.ಗೌರಮ್ಮ ಕಾರ್ಯಕ್ರಮ ಆಯೋಜಕರಾದ ಓ. ಮಂಜಣ್ಣ. ಎಚ್ಎಮ್ ಹೊಳೆ ಮಹಲಿಂಗಪ್ಪ. ಅನಂತ್. ಕುಮಾರ್ . ವ್ಯಾಸಗೊಂಡನಹಳ್ಳಿ ರಾಜಪ್ಪ. ಅಂಜಿನಪ್ಪ. ಸತೀಶ್. ಮಾದಿಹಳ್ಳಿ ಮಂಜುನಾಥ್. ನಿಂಗಪ್ಪ. ರಾಕೇಶ್. ಸಂದೀಪ್. ಜೀವನ್. ಸೇರಿದಂತೆ ಇತರರಿದ್ದರು