ಪ್ರಜಾ ನಾಯಕ ಜಗಳೂರು ಸುದ್ದಿ:- ನಾನು ಶಾಸಕನಾಗಿದ್ದ ಆಡಳಿತಾವಧಿಯಲ್ಲಿ ಕೈಗೊಂಡಿರುವ ವಿವಿಧ ಇಲಾಖೆಗಳ ಅಭಿವೃದ್ದಿ ಕಾಮಗಾರಿಗಳನ್ನು ಇನ್ನು 15 ದಿನದೊಳಗಾಗಿ ಪೂರ್ಣಗೊಳಿಸಬೇಕು ನಿರ್ಲಕ್ಷ್ಯ ವಹಿಸಿದರೆ ತಾಲೂಕಿನಿಂದ ಕೋಕ್ ನೀಡಲಾಗುವುದು ಎಂದು ತಾಲೂಕು ಮಟ್ಟದ ಅನುಷ್ಠಾನ ಅಧಿಕಾರಿಗಳಿಗೆ ಶಾಸಕ ಎಸ್.ವಿ.ರಾಮಚಂದ್ರ ಖಡಕ್ ಎಚ್ಚರಿಕೆ ನೀಡಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಭದ್ರಾಮೇಲ್ದಂಡೆ ಯೋಜನೆ ಶಂಕುಸ್ಥಾಪನೆಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ,ಹಾಗೂ ಸಚಿವರುಗಳು ಆಗಮಿಸುವದ ರಿಂದ ಕೈಗೊಂಡ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ, ಲೊಕಾರ್ಪಣೆಗೊಳ್ಳಬೇಕು ಎಂದು ಹೇಳಿದರು.
ಇದು ಮಹತ್ವದ ಸಭೆಯಾಗಿದ್ದು.ಇಂದಿನ ತ್ರೈಮಾಸಿಕ ಸಭೆಗೆ ಕೆಲ ತಾಲೂಕು ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಗೈರಾಗಿದ್ದು.ಸಭೆಗೆ ಆಗಮಿಸಿಲ್ಲ ಮತ್ತೊಂದು ಬಾರಿ ಕಡ್ಡಾಯವಾಗಿ ಅಧಿಕಾರಿಗಳನ್ನು ಸಭೆಗೆ ಕರೆಯಲು ಪ್ರಭಾರಿ ತಾ.ಪಂ ಇ.ಓ ಚಂದ್ರಶೇಖರ್ ಗೆ ತಾಕೀತು ಮಾಡಿದರು.
ಅಧಿಕಾರಿಗಳಿಗೆ ರಾಜಕಾರಣ ಬೇಡ:-ನನ್ನ ಆಡಳಿತಾವಧಿಯಲ್ಲಿ ಅಧಿಕಾರಿಗಳು ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಉತ್ತಮ ಸಹಕಾರ ನೀಡಿದ್ದು.ತಮಗೆ ಚಿರ ಋಣಿಯಾಗಿರುವೆ.ಜನಪ್ರತಿನಿಧಿಗಳು ಇಲ್ಲದವೇಳೆ ಚುನಾವಣೆ ಮುಕ್ತಾಯದವರೆಗೆ ತಾವುಗಳು ಇದೇ ರೀತಿಯಲ್ಲಿ ಸಾರ್ವಜನಿಕರಿಗೆ,ಕೂಲಿಕಾರ್ಮಿಕ,ರೈತಾಪಿ ವರ್ಗಕ್ಕೆ ಅಲೆದಾಡಿಸದೆ ಸೌಲಭ್ಯ ಕಲ್ಪಿಸಬೇಕು.ಅಲ್ಲದೆ ಚುನಾವಣೆಯಲ್ಲಿ ಯಾರೊಬ್ಬ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸದೆ ಶಾಂತಿ ಯುವ ಚುನಾವಣೆ ನಡೆಸಬೇಕು ಎಂದು ಸಲಹೆ ನೀಡಿದರು.
ಬರದನಾಡು ಮುಕ್ತಕ್ಕೆ ಸಂಕಲ್ಪ:- ನನ್ನ ಆಡಳಿತಾವಧಿಯಲ್ಲಿ ಸಿರಿಗೆರೆ ಶ್ರೀಗಳ ಸಹಕಾರದಿಂದ ಹಾಗೂ ಬಿಜೆಪಿ ಪಕ್ಷದ ಆಡಳಿತಾವಧಿಯಲ್ಲಿ ಎರಡು ಮಹತ್ತರ ನೀರಾವರಿ ಯೋಜನೆಗಳು ಸಕಾರಗೊಂಡಿವೆ.164 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆಮಾಡಲಾಗುವುದು.ಬರದನಾಡು ಮುಕ್ತ ನನ್ನ ಸಂಕಲ್ಪ ಎಂದರು.
” ತಾಲೂಕಿನ ವಿವಿದ ಇಲಾಖೆಗಳಲ್ಲಿ ಅಧಿಕಾರಿಗಳು ಎಸ್.ಇ.ಪಿ ಟಿ.ಎಸ್.ಪಿ ಅನುದಾನ ವಾಪಸ್ಸಾಗದಂತೆ ನೋಡಿಕೊಂಡು, ಮಾರ್ಚ್ 10ರ ಒಳಗಾಗಿ ಸಂಪೂರ್ಣ ಬಳಕೆಮಾಡಿದ ವರದಿ ನೀಡಬೇಕು. ಇಲ್ಲವಾದರೆ ಅಟ್ರಸಿಟಿ ಕೇಸ್ ನಿಮ್ಮ ಮೇಲೆ ಬೀಳುತ್ತದೆ ಅಲ್ಲದೆ ತಾಲೂಕಿನಲ್ಲಿ ಅಂಬೇಡ್ಕರ್ ಭವನ ಕಟ್ಟಡ ಗಳಿಗೆ ಕೇವಲ ಶೇ30 ರಷ್ಟು ಅನುದಾನ ಬಿಡುಗಡೆಯಾಗಿದೆ ಪೂರ್ಣ ಅನುದಾನ ಬಿಡುಗಡೆಗೆ ಶಾಸಕರ ಬಳಿ ಮನವಿ ಮಾಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ “
ಸಂದರ್ಭದಲ್ಲಿ ತಾ.ಪಂ ಪ್ರಭಾರಿ ಇಓ ಚಂದ್ರಶೇಖರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ, ಲೊಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ತೋಟಗಾರಿಕೆ ಇಲಾಖೆ ವೆಂಕಟೇಶ್ ಮೂರ್ತಿ.ಕೃಷಿ ಇಲಾಖೆ ಮಿಥುನ್ ಕೀಮಾವತ್. ಹಿಂದುಳಿದ ವರ್ಗಗಳ ಇಲಾಖೆ ಅಸ್ಮಾ ಬಾನು.ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.