ಪ್ರಜಾ ನಾಯಕ ಜಗಳೂರು ಸುದ್ದಿ -: ಪಟ್ಟಣದಲ್ಲಿ ವಾರದ ಸಂತೆ ಮತ್ತು ಖಾಸಗಿ ಬಸ್, ಕಸಾಯಿ ಖಾನೆ ಹಾಗೂ ಮೀನು ಮಾರಾಟಗಾರರ ಬಹಿರಂಗ ಹರಾಜ್ ನಿನ್ನೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ದಿನಾಂಕವನ್ನು ನಿಗದಿ ಮಾಡಿದ್ದರು.
ಹಣವನ್ನು ಕಟ್ಟಿರುವ ಬಿಡ್ಡುದಾರರು ಬಸ್ ಸ್ಟ್ಯಾಂಡ್ ನಲ್ಲಿ ಸರಿಯಾಗಿ ಸ್ವಚ್ಛತೆ ಇಲ್ಲ , ಸಾರ್ವಜನಿಕರಿಗೆ ರಾತ್ರಿ ವಿದ್ಯುತ್ ದೀಪದ ವ್ಯವಸ್ಥೆ, ನೀರಿನ ವ್ಯವಸ್ಥೆ ಇಲ್ಲದೆ ಪಟ್ಟಣಕ್ಕೆ 60 ಬಸ್ಸುಗಳು ಮಾತ್ರ ಸಂಚರಿಸುತ್ತಿವೆ. ನೀವು ಟೆಂಡರ್ ಅನ್ನು ಏಕಾಏಕಿ ಹೆಚ್ಚಿಸಿದರೆ ನಮಗೆ ಹೊರೆಯಾಗಲಿದೆ.ಇಷ್ಟೊಂದು ಹಣವನ್ನು ನಾವು ಏನು ಮಾಡಿ ಕಟ್ಟಬೇಕು ಎಂದು ಬಿಡ್ಡುದಾರರು ಹರಾಜು ಮಾಡದೆ ನಿರಾಕರಿಸಿದರು.
ವಾರದ ಸಂತೆ ನಡೆಯುವ ಸ್ಥಳದಲ್ಲಿ ಜಕಾತಿಯನ್ನು ಒಂದು ಚೀಲ ತರಕಾರಿ, ಒಂದು ಪುಟ್ಟಿ ಚೀಲ. ಕೈ ಗಂಟು. ಹಸಿತರಕಾರಿ. ಯಾವುದೇ ಒಂದೇ ಚೀಲವಿರಲಿ 10 ರೂ ಜಕಾತಿಯನ್ನು ಕೊಡಬೇಕು. ಹಾಗೇ ತೆಂಗಿನಕಾಯಿ ಒಣ ಕೊಬ್ಬರಿ ಒಂದು ಚೀಲಕ್ಕೆ ಹತ್ತು ರೂಪಾಯಿ ಜಕಾತಿ ಹೆಚ್ಚಿಸಿರುವುದರಿಂದ ರೈತರು ಹಿಂದೇಟು ಹಾಕುತ್ತಿದ್ದಾರೆ ಆದ್ದರಿಂದ ಯಾರೂ ಸಹ ಹರಾಜು ಕೂಗುವುದಿಲ್ಲ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಧಿಕಾರಿ ಲೋಕ್ಯ್ ನಾಯ್ಕ ಅವರು ಈ ಹರಾಜು ಪ್ರಕ್ರಿಯೆಯನ್ನು ಮುಂದಕ್ಕೆ ಹಾಕಲಾಗಿದೆ ಮುಂದಿನ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದರು
ಈ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್ ಸದಸ್ಯರಾದ ರಮೇಶ್ ಶಕೀಲ್ ಅಹಮದ್. ರವಿಕುಮಾರ್ ತಿಪ್ಪೇಸ್ವಾಮಿ.ಪಾಪಲಿಂಗಪ್ಪ. ದೇವರಾಜ್. ನವೀನ್. ಗೌರಿಪುರ ಶಿವಣ್ಣ.ಮಂಜಣ್ಣ ರಮೇಶ್ ಸೇರಿದಂತೆ ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು