✍️ ವರದಿ – ಬಾಬು.ಎಚ್ ಮರೇನಹಳ್ಳಿ
ವಿಶೇಷ ಸುದ್ದಿ ಪ್ರಜಾ ನಾಯಕ ಸುದ್ದಿ -: ಜಗಳೂರು ಪಟ್ಟಣದ ಬೆಸ್ಕಾಂ ಕಛೇರಿ ಹತ್ತಿರವಿರುವ ಅಂಬೇಡ್ಕರ್ ವೃತ್ತ ಬಳಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಅವರ 8 ಅಡಿ ಕಂಚಿನ ಪ್ರತಿಮೆಯ ಅನಾವರಣವನ್ನು ಇಂದು ಹಮ್ಮಿಕೊಂಡಿದ್ದು ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.
ಕಳೆದ ಸುಮಾರು ವರ್ಷದಿಂದ ಪ್ರತಿಮೆ ಅನಾವರಣ ಯಾವಾಗ ಎನ್ನುವ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿತ್ತು. ಈ ಹಿಂದೆ ಅಂಬೇಡ್ಕರ್ ವೃತ್ತ ಎಂದು ಹೆಸರಿಡಲಾಗಿತ್ತು ಅಷ್ಟೇ ಆದರೆ ಪ್ರತಿಮೆ ಇರಲಿಲ್ಲ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಸ್ಥಾಪಿಸುವಂತೆ ದಲಿತಪರ ಸಂಘಟನೆಗಳ ಮನವಿಗೆ ಮಣಿದ ಶಾಸಕ ಎಸ್. ವಿ ರಾಮಚಂದ್ರಪ್ಪ ಹಾಗೂ ಜನಪ್ರತಿನಿಧಿಗಳು. ಪಟ್ಟಣ ಪಂಚಾಯತಿ .ತಾಲೂಕು ಆಡಳಿತ. ಸಮಾಜ ಕಲ್ಯಾಣ ಇಲಾಖೆ.ಡಾ. ಬಿ ಆರ್ ಅಂಬೇಡ್ಕರ್ ಪುತ್ತಳಿ ಸಮಿತಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಕೊನೆಗೂ ಕಂಚಿನ ಪ್ರತಿಮೆಯನ್ನು ಈಗ ಸ್ಥಾಪನೆ ಮತ್ತು ಅನಾವರಣವನ್ನು ಮಾಡುತ್ತಿದ್ದಾರೆ
ಹೊಸ 8 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಹೈದರಾಬಾದ್ ಮೂಲದಿಂದ ಜಗಳೂರು ಪಟ್ಟಣಕ್ಕೆ ತಂದು ಸುಮಾರು ದಿನಗಳು ಕಳೆದರೂ ಪ್ರತಿಮೆಯ ಅನಾವರಣಕ್ಕೆ ಮುಹೂರ್ತ ಇದುವರೆಗೂ ಕೂಡಿ ಬಂದಿರಲಿಲ್ಲ.ಈಗಲಾದರೂ ಪ್ರತಿಮೆಯನ್ನು ಅನಾವರಣ ಮಾಡುತ್ತಿರುವುದು ಕಾಲ ಕೂಡಿ ಬಂದಿದೆ ಎಂದು ಸಾರ್ವಜನಿಕರು ಮತ್ತು ಹಿತಚಿಂತಕರು.ಬುದ್ದಿಜೀವಿಗಳು ಪದವೀಧರರು. ಸಾಹಿತಿ ಗಳು.ಸಮಾಜ ಸೇವಕರು ದಲಿತ ಪರ ಸಂಘಟನೆಯ ಹೋರಾಟ ಗಾರರು. ಸ್ವಾತಂತ್ರ್ಯ ಹೋರಾಟಗಾರರು ಸಂತಸದ ವಿಷಯವಾಗಿದೆ ಎನ್ನುತ್ತಾರೆ .
ಇಂದು ಅಂಬೇಡ್ಕರ್ ಪ್ರತಿಮೆ ಅನಾವರಣದ ಜೊತೆಗೆ ಪ್ರವಾಸಿ ಮಂದಿರ ದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದ ವರೆಗೆ ಬೆಳ್ಳಿರಥ ದಲ್ಲಿ ಅವರ ಭಾವಚಿತ್ರವನ್ನು ಇಟ್ಟು ಮೆರವಣಿಗೆ. ತಮಟೆ. ಡೊಳ್ಳು.ಆರ್ಕೆಸ್ಟ್ .ಗೊಂಬೆ ಕುಣಿತ. ವಿಧದ ವಾದ್ಯ ಮೇಳ ಗಳೊಂದಿಗೆ ದಲಿತಪರ ಸಂಘಟನೆಗಳು ಡಾ. ಬಿ.ಆರ್ ಅಂಬೇಡ್ಕರ್ ಅಭಿಮಾನಿಗಳು.ಸರ್ವ ಜನಾಂಗದ ನಾಯಕರು ಗಳು.ಹಾಲಿ ಜನಪ್ರತಿನಿಧಿಗಳು ಹಾಗೂ ಮಾಜಿ ಜನಪ್ರತಿನಿಧಿ ಗಳು.ಸಾರ್ವಜನಿಕ ರಿಂದ ಅದ್ದೂರಿಯಾಗಿ ಮೆರವಣಿಗೆ ನೆರವೇರಲಿದೆ
ನಂತರ ತಾಲೂಕು ಕಚೇರಿ ಆವರಣದಲ್ಲಿ ಆಯೋಜಿಸಲಾಗಿರುವ ವೇದಿಕೆ ಕಾರ್ಯಕ್ರಮದ ಉದ್ಘಾಟನೆ – : ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ರಾಜ್ಯ ಸಚಿವರು ಭಾರತ ಸರ್ಕಾರ ಹಾಗೂ ಚಿತ್ರದುರ್ಗ ಜಿಲ್ಲಾ ಸಂಸದರಾದ ಎ.ನಾರಾಯಣ ಸ್ವಾಮಿ ರವರು ಈ ವೇದಿಕೆ ಉದ್ಗಾಟಿಸಲಿದ್ದಾರೆ.
ದಿವ್ಯ ಸಾನಿದ್ಯ -: ಶ್ರೀ ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿ. ಹಾಗೂ ಆದಿಜಾಂಬವ ಪೀಠದ ಶ್ರೀ ಷಡಕ್ಷರಿ ಮುನಿ ಸ್ವಾಮಿಜಿ ಚಿತ್ರದುರ್ಗದ ಬಸವನಾಗಿದೇವ ಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.
ಬಾಬಾ ಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣವನ್ನು-: ಶಾಸಕ ಎಸ್.ವಿ ರಾಮಚಂದ್ರ ರವರ ಅಮೃತ ಅಸ್ತದಿಂದ ಲೋಕಾರ್ಪಣೆಗೊಳಿಸಲಿದ್ದಾರೆ
ಕಾರ್ಯಕ್ರಮದ ಗೌರವ ಉಪಸ್ಥಿತಿ -: ರಾಜ್ಯ ಸಚಿವರಾದ ಗೋವಿಂದ.ಎಂ ಕಾರಜೋಳ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ ಬೈರತಿ ಬಸವರಾಜ್.ದಾವಣಗೆರೆ ಜಿಲ್ಲಾ ಸಂಸದರಾದ ಜಿ.ಎಂ ಸಿದ್ದೇಶ್ವರ ಇವರು ವಹಿಸಿ ಕೊಳ್ಳಲಿದ್ದಾರೆ
ಮುಖ್ಯ ಅತಿಥಿಗಳಾಗಿ-:ಪ.ಪಂ ಅಧ್ಯಕ್ಷರಾದ ವಿಶಾಲಾಕ್ಷಿ ಒಬಳೇಶ್.ಉಪಾದ್ಯಕ್ಷರಾದ ನಿರ್ಮಲಕುಮಾರಿ ಹನುಮಂತಪ್ಪ ಹಾಗೂ ಪ. ಪಂ.ಸದಸ್ಯರು. ತಾಲ್ಲೂಕಿನ ವಿವಿಧ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ವಿವಿಧ ಜನಪ್ರತಿನಿಧಿಗಳು ಹಾಗೂ
ವಿಶೇಷ ಉಪನ್ಯಾಸ-: ಸಿ.ಕೆ ಮಹೇಶ್ ಚಿತ್ರದುರ್ಗ
ಸರ್ವರಿಗೂ ಆದರದ ಸುಸ್ವಾಗತ ಕೋರುವವರು -: ತಹಶೀಲ್ದಾರ್ ಜಿ ಸಂತೋಷ ಕುಮಾರ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ಎಂ.ಶ್ರೀನಿವಾಸ್. ಪ.ಪಂ ಚೀಪ್ ಆಫೀಸರ್ ಲೋಕ್ಯ್ ನಾಯ್ಕ.ತಾ. ಪಂ.ಇ. ಓ ವೈ.ಎಚ್ ಚಂದ್ರಶೇಖರ್ ಇವರು ಕಾರ್ಯಕ್ರಮಕ್ಕೆ ಪುತ್ತಳಿ ಸಮಿತಿ ಅಧ್ಯಕ್ಷ ಪೂಜಾರಿ ಸಿದ್ದಪ್ಪ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
” ಭಾರತ ರತ್ನ.ಸಂವಿಧಾನ ಶಿಲ್ಪಿ. ವಿಶ್ವ ನಾಯಕ ಡಾ. ಬಿ.ಆರ್ ಅಂಬೇಡ್ಕರ್ ಕೊಟ್ಟ ಭಾರತ ಸಂವಿಧಾನದ ಅಡಿಯಲ್ಲಿ ನಾವು ಬದುಕುತ್ತಿದ್ದೇವೆ ಅವರ ಪ್ರತಿಮೆ ನಿರ್ಮಾಣ ಮಾಡಲು ಸಂಪೂರ್ಣ ಖರ್ಚು ನನ್ನ ಕೈಯಿಂದಲೇ ನೀಡಿ ನನ್ನ ವಿಧಾನಸಭಾ ಕ್ಷೇತ್ರವಾದ ಜಗಳೂರು ಅಂಬೇಡ್ಕರ್ ವೃತ್ತದಲ್ಲಿ 8 ಅಡಿ ಕಂಚಿನ ಪ್ರತಿಮೆ ಅನಾವರಣ ಮಾಡುವ ಭಾಗ್ಯ ನನಗೆ ಸಿಕ್ಕಿದೆಯಲ್ಲ ಎಂದು ನನಗೆ ತುಂಬಾ ಸಂತೋಷವಾಗುತ್ತಿದೆ”
– ಎಸ್ ವಿ ರಾಮಚಂದ್ರ.ಶಾಸಕರು ಜಗಳೂರು ವಿಧಾನಸಭಾ ಕ್ಷೇತ್ರ
” ಆಸ್ಪಶ್ಯತೆ, ಜಾತಿ ಪದ್ಧತಿ, ಸಂವಿಧಾನ, ಆರ್ಥಿಕತೆ, ಪತ್ರಿಕೋದ್ಯಮ, ಪ್ರಜಾಮಭುತ್ವ, ಮಹಿಳಾ ಸುಧಾರಣೆ, ಕಾರ್ಮಿಕರ ಹಿತಚಿಂತನೆ, ವಿದೇಶಾಂಗ ನೀತಿ, ಕೃಷಿ, ನೀರಾವರಿ, ರಾಜಕೀಯ ಆಡಳಿತ ಸೇರಿದಂತೆ ಅಂಬೇಡ್ಕರ್ ಅವರ ಸಾಧನೆಗಳು ಮತ್ತು ವಿಚಾರಧಾರೆಗಳ ವ್ಯಾಪ್ತಿ ಜಗದಗ ಮುಗಿಲಗಲ ಚಾಚಿಕೊಂಡಿವೆ ಈ ಮಹಾನ್ ನಾಯಕನ ಪ್ರತಿಮೆಯನ್ನು ಇಂದು ತಾಲೂಕಿನಲ್ಲಿ ಅನಾವರಣ ಗೊಳಿಸುತ್ತಿ ರುವುದು ನನಗೆ ತುಂಬಾ ಖುಷಿಯಾಗುತ್ತಿದೆ “
– ಸಂತೋಷ್ ಕುಮಾರ್. ಜಿ ತಹಸಿಲ್ದಾರ್ ಹಾಗೂ ದಂಡಾಧಿಕಾರಿ ಗಳು ಜಗಳೂರು ತಾಲೂಕು
” ಜಗಳೂರು ತಾಲೂಕಿನ ಬಹು ಜನರ ಬಹುದಿನದ ಬೇಡಿಕೆ ಯಾದ ಮಹಾನ್ ನಾಯಕ ಅಂಬೇಡ್ಕರ್ ಪುತ್ಥಳಿ ಸ್ಥಾಪನೆ ಕನಸ್ಸು ಇಂದು ನನಸಾಗಿದೆ.ಜಗಳೂರು ತಾಲೂಕಿಗೆ ಇದೊಂದು ಐತಿಹಾಸಿಕ ದಾಖಲೆ ದಿನ ಮಾರ್ಚ್ 13 ರಂದು ಲೋಕರ್ಪಣೆ ಗೊಳ್ಳುತ್ತಿರುವುದು ನನಗೆ ಸಂತೋಷದ ಸಂಗತಿ ಯಾಗಿದೆ”
– ಬಿ.ಮಹೇಶ್ವರಪ್ಪ.ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಜಗಳೂರು