ಪ್ರಜಾ ನಾಯಕ ಸುದ್ದಿ ಜಗಳೂರು :-ಮೀಸಲಾತಿ ಅನುಭವಿಸುವ ಎಲ್ಲಾ ವರ್ಗದ ಪ್ರತಿ ಮನೆಗಳಲ್ಲೂ ದೇಶದ ಶ್ರೇಷ್ಠ ಧರ್ಮ ಗ್ರಂಥ ಸಂವಿಧಾನ ಪರಿಪಾಲಿಸಿ ಎಂದು ಚಿತ್ರದುರ್ಗ ಛಲವಾದಿ ಪೀಠದ ಶ್ರೀ ಬಸವನಾಗಿದೇವ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮ ದಲ್ಲಿ ಅವರು ಆಶೀರ್ವಾಚನ ನೀಡಿದರು.
ಬಾಬಾ ಸಾಹೇಬರು ಹೇಳಿದಂತೆ ಚುನಾವಣೆ ಸಂದರ್ಭದಲ್ಲಿ ಮತದಾರರು ಮತದಾನದ ಹಕ್ಕನ್ನು ಚಲಾಯಿಸಬೇಕು.ಹಣ ಆಮಿಷಕ್ಕೊಳಗಾಗಿ ಮಾರಾಟವಾಗಬಾರದು.ಒಂದು ವೇಳೆ ಪವಿತ್ರವಾದ ಮತ ಮಾರಾಟವಾದರೆ ತಮ್ಮ ಕುಟುಂಬದ ಮಹಿಳೆಯರು ಮಾರಾಟವಾದಂತೆ ಎಂದು ಸಾಮ್ಯತೆ ನೀಡಿದರು.
ಸಾತ್ವಿಕತೆ,ನಿಸ್ವಾರ್ಥ ರಾಜಕಾರಣಿಗಳು ಸಮಾಜ ಮುಖಿ ಇಚ್ಛಾಶಕ್ತಿ ಹೊಂದಿರುತ್ತಾರೆ.ನಾಲ್ಕು ದಶಕಗಳ ಹೊರಾಟ ಫಲವಾಗಿ ಜಗಳೂರಿ ನಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಗೊಳ್ಳು ಕಾರಣೀಭೂತರಾದ ಶಾಸಕ ಎಸ್.ವಿ.ರಾಮಚಂದ್ರ ಅವರ ಸೇವೆ ಶ್ಲಾಘನೀಯ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನನ್ನನ್ನು ವಿಧಾನ ಸಭಾ ಎಸ್.ಟಿ ಮೀಸಲು ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನನ್ನಾಗಿ ಆಯ್ಕೆಮಾಡಿದ ಪರಿಶಿಷ್ಠ ಸಮುದಾಗಳ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿರುವೆ.ಅಲ್ಲದೆ ಪರಿಶಿಷ್ಠ ಸಮುದಾಯಗಳ ಋಣ ತೀರಿಸಲು ಪಟ್ಟಣದಲ್ಲಿ ವಿಶ್ವಮಾನವ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಹಾಗೂ ಮಹರ್ಷಿ ವಾಲ್ಮೀಕಿ ಮಹಾನೀಯರ ಪ್ರತಿಮೆ ನಿರ್ಮಿಸಿದ ಪುಣ್ಯ ನನಗಿದೆ.ಮುಂದಿನ ದಿನಗಳಲ್ಲಿ ಭಕ್ತಿ ಭಂಡಾರಿ ಬಸವೇಶ್ವರ ಸೇರಿದಂತೆ ಕೆಲ ಮಹಾನೀಯರ ಪುತ್ಥಳಿ ನಿರ್ಮಿಸಲಾಗುವುದು ಎಂದು ಭರವಸೆ ನೀಡಿದರು.
ಮೂರು ನೀರಾವರಿ ಯೋಜನೆಗಳ ಸಕಾರ:- ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆ ತುಂಬಿಸುವ ಯೋಜನೆ ಸಕಾರ ಗೊಂಡು ವಾರದೊಳಗೆ 4 ಕೆರೆಗಳು ಭರ್ತಿಯಾಗಲಿವೆ.
ಭದ್ರಾಮೇಲ್ದಂಡೆ ಯೋಜನೆಗೆ ಮಾರ್ಚ್ 18 ರಂದು ಭೂಮಿ ಪೂಜೆ ನೆರವೇರಿಸಲಾಗುವುದು.₹482 ಕೋಟಿ ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಗುವುದು ಬಿಜೆಪಿ ಆಡಳತಾವಧಿಯಲ್ಲಿ ಬರದನಾಡಿಗೆ ಮೂರು ಯೋಜನೆ ಗಳನ್ನು ಜಾರಿಗೊಳಿಸಿರುವೆ ಹಸಿರು ನಾಡನ್ನಾಗಿಸುವೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಮಾತನಾಡಿ ಶಿಕ್ಷಣ ಸಂಘಟನೆ ಹೊರಾಟದ ಕಿಚ್ಚು ಹಚ್ಚಿದ ಮಹಾನ್ ನಾಯಕ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ನಮಗೆ ಆದರ್ಶವಾಗಬೇಕಿದೆ.ಮೀಸಲು ಕ್ಷೇತ್ರ ದಲ್ಲಿ ನಾನು ಕಳೆದ ಚುನಾವಣೆಯಲ್ಲಿ ಜೆಡಿಎಸ್ ಪರಾಜಿತ ಅಭ್ಯರ್ಥಿಯಾಗಿರುವೆ.ನನ್ನ ಪುತ್ರ ಐ.ಎ.ಎಸ್ ಅಧಿಕಾರಿಯಾಗಿ ರುವುದು ಸಂವಿಧಾನದ ಬಿಕ್ಷೆಯಿಂದ ಎಂದು ಸ್ಮರಿಸಿದರು.ಮೀಸಲಾತಿ ವಿರೋಧಿಸುವವರು ಪ್ರಸಕ್ತವಾಗಿ ಮೀಸಲಾತಿ ಪಾತ್ರೆ ಹಿಡಿದು ಹೊರಟಿರುವುದು ಸಮಾಜಕ್ಕೆ ಅಂಬೇಡ್ಕರ್ ಅವರ ಸಂವಿಧಾನ ಬದ್ದ ಹಕ್ಕುಗಳ ಸಾಕ್ಷೀಕರಿಸುತ್ತಿದೆ ಎಂದರು.
ಅಂಬೇಡ್ಕರ್ ಪುತ್ಥಳಿ ಸಮಿತಿಯ ಸದಸ್ಯರು ವಕೀಲ ಹನುಮಂತಪ್ಪ ಹಾಗೂ ಅಧ್ಯಕ್ಷ ಪೂಜಾರಿ ಸಿದ್ದಪ್ಪ ಮಾತ ನಾಡಿ,ದಶಕಗಳ ಕನಸಿನ ಆಸೆಯಂತೆ ಇಂದು ಜಗಳೂರು ಪಟ್ಟಣದಲ್ಲಿ ಭಾರತ ರತ್ನ.ಮಹಾ ನಾಯಕ.ವಿಶ್ವಚೇತನ. ವಿಶ್ವಜ್ಞಾನಿ. ದಲಿತರ ಸೂರ್ಯ. ಡಾ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಯನ್ನು ಅನಾವರಣ ಗೊಳಿಸಲು ಸಹಕರಿಸಿದ ಶಾಸಕರಿಗೂ ಹಾಗೂ ಅಧಿಕಾರಿಗಳಿಗೆ ಸಹೋದರ ಸಮಾಜದ ಬಂಧುಗಳಿಗೆ ಅಬಿನಂದನೆ ಸಲ್ಲಿಸಿದರು.
ಬೆಳಿಗ್ಗೆ ಈ ಕಾರ್ಯಕ್ರಮದ ಮೆರವಣಿಗೆ ತಹಶೀಲ್ದಾರ್ ಸಂತೋಷ್ ಕುಮಾರ್ ಜಿ. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ ಸೇರಿದಂತೆ ವಿವಿಧ ಜನಾಂಗದ ಮುಖಂಡರು ಚಾಲನೆ ನೀಡಿದರು
ಪ್ರವಾಸಿ ಮಂದಿರದಿಂದ ಡಾ. ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ಅವರ ಭಾವಚಿತ್ರವನ್ನು ಬೆಳ್ಳಿರಥದಲ್ಲಿ ಕೂರಿಸಿಕೊಂಡು.ಆರ್ಕೆಸ್ಟ್. ಡೊಳ್ಳು ಕುಣಿತ . ಗೊಂಬೆ ಕುಣಿತ. ಮತ್ತು ಮಹಿಳೆ ಯರು ತಮಟೆ ಬಾರಿಸುವುದು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕು ತ್ತಿರುವ ಅಪಾರ ಜನಸಂಖ್ಯೆಯ ಸಾರ್ವಜನಿಕರು ಮತ್ತು ಮುಖಂಡರ ಕುಣಿತ ವಿಶೇಷವಾಗಿತ್ತು.
” ನಂತರ ಡಾ ಬಿ.ಆರ್ ಅಂಬೇಡ್ಕರ್ ಅವರ 8 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಶಾಸಕ ಎಸ್ ವಿ ರಾಮಚಂದ್ರ ತಹಶೀಲ್ದಾರ್ ಜಿ ಸಂತೋಷ್ ಕುಮಾರ್. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ ಮಹೇಶ್ವರಪ್ಪ. ಚೀಪ್ ಆಫೀಸರ್ ಲೋಕ್ಯ ನಾಯ್ಕ್. ಪ.ಪಂ ಅಧ್ಯಕ್ಷರಾದ ವಿಶಾಲಾಕ್ಷಿ ಓಬಳೇಶ್.ಉಪಾಧ್ಯಕ್ಷೆ ನಿರ್ಮಲ ಕುಮಾರಿ.ಸದಸ್ಯರು ಸೇರಿದಂತೆ ಜನಪ್ರತಿನಿಧಿಗಳು ಮುಖಂಡರು ಪ್ರತಿಮೆಯನ್ನು ಅನಾವರಣಗೊಳಿಸಿದರು “
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂತೋಷ್ ಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ,ಪ.ಪಂ ಅಧ್ಯಕ್ಷೆ ವಿಶಾಲಾಕ್ಷಿ ಓಬಳೇಶ್, ಉಪಾಧ್ಯಕ್ಷೆ ನಿರ್ಮಲ ಹನುಮಂತಪ್ಪ,ಸದಸ್ಯರಾದ ಲಲಿತಾ ಶಿವಣ್ಣ , ದೇವರಾಜ್ ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಟಿಹೆಚ್ಓ ನಾಗರಾಜ್. ಪುತ್ತಳಿ ಸಮಿತಿ ಅಧ್ಯಕ್ಷ ಪೂಜಾರಿ ಸಿದ್ದಪ್ಪ ಪದಾಧಿಕಾರಿಗಳಾದ ಶಿವಣ್ಣ ಗೋಪಾಲಪುರ ಮಹೇಶ್, ನಾಗರಾಜ್, ಹನುಮಂತಪ್ಪ, ಗೌರಿಪುರ ಕುಬೇರಪ್ಪ,ಸಿದ್ದಪ್ಪ, ಹನುಮಂತಪುರ ಸತೀಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ. ಪತ್ರಕರ್ತರ ಸಂಘದ ಅಧ್ಯಕ್ಷ ಚಿದಾನಂದಪ್ಪ, ವಕೀಲ ಸಂಘದ ಅಧ್ಯಕ್ಷ ಓಂಕಾರೇಶ್ವರಪ್ಪ, ವಿಶೇಷ ಉಪನ್ಯಾಸ ಕರ ಸಿ.ಕೆ ಮಹೇಶ್,ಎನ್ ಮುಖಂಡರಾದ ಪಲ್ಲಾಗಟ್ಟೆ ಮಹೇಶ್. ಸೊಕ್ಕೆ ನಾಗರಾಜ್. ಜೆ.ಸಿ ಓಬಳೇಶ್. ರಮೇಶ್.ಸಾಹಿತಿ ಎರ್ರಿಸ್ವಾಮಿ,ರಾಜಪ್ಪ .ಗೊಲ್ಲರಹಟ್ಟಿ ತಿಪ್ಪೇಸ್ವಾಮಿ ರಂಗಪ್ಪ.ರಾಜನಟ್ಟಿ ಚಂದ್ರಪ್ಪ ಸತೀಶ್.ಅಳವದಂಡಿ ವೆಂಕಟೇಶ್ ಮಾಲೆ ಮಾಚಿಕೆರೆೆ. ಗುತ್ತಿಗೆದಾರರಾದ ತಿಪ್ಪೇಸ್ವಾಮಿ. ಮಾರುತಿ. ಕುಬೇಂದ್ರಪ್ಪ ಸೇರಿದಂತೆ ವಿಧದ ಗ್ರಾಮಗಳಿಂದ ಆಗಮಿಸಿದ ಮಹಿಳೆಯರು ಮತ್ತು ಪುರುಷರು ಸಾರ್ವಜನಿಕರಿದ್ದರು