ಪ್ರಜಾ ನಾಯಕ ಸುದ್ದಿ ಜಗಳೂರು -: ಪಟ್ಟಣದಲ್ಲಿ ದಿನಾಂಕ 7-11-2022 ರಂದು ರಾತ್ರಿ ದೇವೇಗೌಡ ಬಡಾವಣೆಯಲ್ಲಿ ಮಂಜು ನಾಥ ಇವರ ಮನೆ ಯಲ್ಲಿ 260 ಗ್ರಾಂ ಬಂಗಾರ ಮತ್ತು 6 ಕೆಜಿ 328 ಗ್ರಾಂ ಬೆಳ್ಳಿ ಸಾಮಾನು ಗಳನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದರು ಈ ಬಗ್ಗೆ ಪಿರ್ಯಾದಿದಾರರು ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ಬಗ್ಗೆ ದೂರು ನೀಡಿದ್ದರು
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಪೋಲಿಸ್ ಅಧೀಕ್ಷಕರು ಹಾಗೂ ಹೆಚ್ಚುವರಿ ಪೊಲೀಸ ಅಧೀಕ್ಷಕರು ಮತ್ತು ಹೆಚ್ಚುವರಿ ಸಹಾಯಕ ಪೊಲೀಸ್ ಅಧೀಕ್ಷಕರಾದ ಕನ್ನಿಕಾ ಸಿಕ್ರಿ ವಾಲ್ (ಐ.ಪಿ.ಎಸ್) ಇವರ ಮಾರ್ಗದರ್ಶನದಲ್ಲಿ ಜಗಳೂರು ಪೋಲಿಸ್ ನಿರೀಕ್ಷಕರಾದ ಶ್ರೀನಿವಾಸ್ ರಾವ್ ಇವರ ನೇತೃತ್ವದ ತಂಡ ಹಾಗೂ ಗ್ರಾಮಾಂತರ ಉಪ ವಿಭಾಗದ ಅಪರಾಧ ತಂಡ ವನ್ನು ಪ್ರಕರಣ ಭೇದಿಸಲು ರಚನೆ ಮಾಡಲಾಗಿತ್ತು
ಜಗಳೂರು ಪೊಲೀಸ್ ಠಾಣೆಯ ಅಪರಾಧ ಸಿಬ್ಬಂದಿಗಳಾದ ಮಾರುತಿ ಮತ್ತು ಬಸವರಾಜ್ ಇವರು ಪಟ್ಟಣದ ಹೊರ ವಲಯ ದಲ್ಲಿ ಅನುಮಾನಸ್ಪದ ವ್ಯಕ್ತಿಯನ್ನು ಹಿಡಿದು ವಿಚಾರಣೆ ಮಾಡಿದಾಗ ಆ ವ್ಯಕ್ತಿ ಹಾಸನ ಜಿಲ್ಲೆ ಚನ್ನರಾಯ ಪಟ್ಟಣದ ಮಂಜುನಾಥ್ ಆಲಿ ಯಾಸ್ (ಚೂಟಿ ಮಂಜು) ಇವರು ಜಗಳೂರು ಪೊಲೀಸ್ ಠಾಣೆ ಯ ಮೇಲ್ಕಂಡ ಪ್ರಕರಣದಲ್ಲಿ ಮತ್ತು ಚಿತ್ರದುರ್ಗ ಜಿಲ್ಲೆ ಕೋಟೆ ಪೊಲೀಸ್ ಠಾಣೆ.ಹಾಗೂ ಚಿತ್ರದುರ್ಗ ಜಿಲ್ಲೆಯ ಬಡಾವಣೆ ಪೊಲೀಸ್ ಠಾಣೆ .ಚಿಕ್ಕಮಂಗಳೂರು ಜಿಲ್ಲೆಯ ಟೌನ್ ಪೊಲೀಸ್ ಠಾಣೆಯಲ್ಲಿ ಸುಮಾರು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದು ಬಂದಿರುತ್ತದೆ
ನಂತರ ಆರೋಪಿಯಿಂದ ಸುಮಾರು 25 ಲಕ್ಷ ಬೆಲೆ ಬಾಳುವ 503 ಗ್ರಾಂ ಬಂಗಾರದ ಆಭರಣಗಳನ್ನು ಜಫ್ತು ಪಡಿಸಿಕೊಂಡಿದ್ದು ಇನ್ನು ಉಳಿದ ಬಂಗಾರ ಮತ್ತು ಬೆಳ್ಳಿ ಪತ್ತೆಯಾಗ ಬೇಕಾಗಿರುತ್ತದೆ ಈ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬಿಸಿ ತನಿಖೆ ಮುಂದುವರಿ ಸುತ್ತಿದ್ದಾರೆ
ಈ ಕಾರ್ಯಚರಣೆಯಲ್ಲಿ ಜಗಳೂರು ಪೊಲೀಸ್ ಠಾಣೆಯ ನಿರೀಕ್ಷಕ ರಾದ ಶ್ರೀನಿವಾಸ್ ರಾವ್.ಎಂ. ಪೊಲೀಸ್ ಉಪ ನಿರೀಕ್ಷಕರಾದ ಎಸ್.ಡಿ ಸಾಗರ್.ಸಿಬ್ಬಂದಿಗಳಾದ ಎ.ಎಸ್.ಐ ವೆಂಕಟೇಶ್ . ಬಸವರಾಜ್. ಮಾರುತಿ. ನಾಗಭೂಷಣ.ಹನುಮಂತ ಕವಾಡಿ. ನಾಗರಾಜ್. ರಾಜಪ್ಪ. ವಸಂತ್ ರೆಡ್ಡಿ. ಉಮಾಪತಿ. ಮಾರಪ್ಪ. ರಮೇಶ್ ಗ್ರಾಮಾಂತರ ಉಪ ವಿಭಾಗ ಕಚೇರಿಯ ಅಪರಾಧ ತಂಡದ ಸಿಬ್ಬಂದಿಗಳಾದ ಯಾಸೀನ್ ಉಲ್ಲಾ.ಎ.ಎಸ್.ಐ ಸೈಯದ್ ಗಾಫರ್. ನಾಗರಾಜಯ್ಯ ಜಿಲ್ಲಾ ಗಣಕಯಂತ್ರ ವಿಭಾಗದ ಸಿಬ್ಬಂದಿ ಗಳಾದ ರಾಘವೇಂದ್ರ.ಶಾಂತ ಕುಮಾರ.ಇವರು ಭಾಗವಹಿಸಿದ್ದರು
ಈ ಕಾರ್ಯಾಚರಣೆಯನ್ನು ಮೆಚ್ಚಿ ಮಾನ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಬಿ.ರಿಷ್ಯಂತ್, ಅವರು ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿ ಅಭಿನಂದನೆಗಳು ಸಲ್ಲಿಸಿದ್ದಾರೆ