ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ದಲಿತ ಸಮುದಾಯದ ಯುವಕರು ಚರಂಡಿ ಸ್ವಚ್ಛತೆ ಗೊಳಿಸುವಾಗ ಸಾವನ್ನಪ್ಪಿದ್ದು.ನವ ಸಂವತ್ಸರದ ಕಾಲ ಪ್ರವೇಶದ ವೇಳೆ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಶವದ ವಾಹನ ನಿಲ್ಲಿಸಿ ಕುಟುಂಬಸ್ಥರು ಅಂತ್ಯ ಸಂಸ್ಕಾರ ನಿರಾಕರಿಸಿ ಪ್ರತಿಭಟನೆ ನಡೆಸಿದರು.
ಹೌದು ಗ್ರಾಮಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯ ವೋ, ಜನ ಪ್ರತಿನಿಧಿಗಳ ದುರಾಡಳಿತವೋ,ಅಥವಾ ಬಡಕೂಲಿಕಾರ್ಮಿಕ ವರ್ಗದವರ ಹೊಟ್ಟೆಪಾಡಿನ ಅಂತರಾಳವೋ ಗೊತ್ತಿಲ್ಲ,ಆದರೆ ಎರಡು ಜೀವಿಗಳನ್ನು ಚರಂಡಿ ಸ್ವಚ್ಛತೆ ವೇಳೆ ಬಲಿತೆಗೆದು ಕೊಂಡಿ ರುವುದು ಘನ ಘೋರ ಘಟನೆಯಾಗಿದೆ.
ಗ್ರಾಮದ ಸತ್ಯಪ್ಪ(45),ಮೈಲಪ್ಪ (42) ವರ್ಷದ ಕಾರ್ಮಿಕರನ್ನು ಗ್ರಾಮಪಂಚಾಯಿತಿ ಅಧ್ಯಕ್ಷರು ,ಹಾಗೂ ಪಿಡಿಓ ಶಶಿಧರ ಪಟೇಲ್ ಅವರು ಚಂರಂಡಿ ಸ್ವಚ್ಛತೆಗೆ ಯಾವುದೇ ಸುರಕ್ಷಿತ ಕಿಟ್ ಗಳಿಲ್ಲದೆ ಇಳಿಸಿದ್ದಾರೆ.ಇದರಿಂದ ವಿಷಪೂರಿತ ವಸ್ತು,ಕಲುಷಿತ, ನೀರಿನ ದುರ್ವಾಸನೆ ಸೇವನೆಯಿಂದ ಅಸ್ವಸ್ಥ ಗೊಂಡಿದ್ದು. ಕೂಡಲೇ ಆಸ್ಪತ್ರೆಗೆ ರವಾನಿಸಲಾಗಿದೆ.ಆದರೆ ಅರಸೀಕೆರೆ ಸಾರ್ವಜನಿಕ ಆಸ್ಪತ್ರೆಯಿಂದ ದಾವಣಗೆರೆ ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೆಲ ಗಂಟೆಗಳ ಅಂತರದಲ್ಲಿ ಮೃತಪಟ್ಟಿರುವ ಹಿನ್ನೆಲೆ ಕಂಡು ಬಂದಿದೆ.
ಪಿಡಿಓ ಬಗ್ಗೆ ಉದಾಸೀನತೆ ಸಲ್ಲದು:- ಕಾರ್ಮಿಕರ ಸೇವಾ ಷರತ್ತು ಕಾಯ್ದೆ 1996 ರನ್ವಯ ಪಿಡಿಓ ಯಾವುದೇ ಸುರಕ್ಷಿತ ಕಿಟ್ ವಿತರಿಸದೆ ಹಕ್ಕುಗಳ ಉಲ್ಲಂಘನೆ ಮಾಡಿದ್ದು.ಕರ್ತವ್ಯ ನಿರ್ಲಕ್ಷ್ಯ ಕ್ಕೆ ಕಾರಣವಾಗಿದೆ ಆದರೆ ದಲಿತಪರ, ಸಮಾಜ ಸಂಘಟನೆ ಮುಖಂಡರ ಹೊತ್ತಾಯಕ್ಕೆ ಮಣಿದು,
ಅಧಿಕಾರಿಗಳು ಜನ ಪ್ರತಿನಿಧಿಗಳು ಹಲವು ಭರವಸೆಗಳನ್ನು ಶಿಫಾರಸ್ಸು ಮಾಡಿದ್ದು.ಮೃತ ಕುಟುಂಬಕ್ಕೆ ತಲಾ ₹6 ಲಕ್ಷ ಪರಿ ಹಾರ,ವಸತಿಗೆ ಮನೆ,ಕುಟುಂಬದ ಸದಸ್ಯರೊಬ್ಬರಿಗೆ ಉದ್ಯೋಗ ಕಲ್ಪಿಸುವುದಕ್ಕೆ ಮಾತ್ರ ಸೀಮಿತವಾಯಿತು.ಆದರೆ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ಪಿಡಿಓ ಹಾಗೂ ಜವಾಬ್ದಾರಿ ಮರೆತ ಅಧ್ಯಕ್ಷರ ಬಗ್ಗೆ ಉನ್ನತ ಅಧಿಕಾರಿಗಳಿಗಿರುವ ಉದಾಸೀನತೆ ಖಂಡಿಸಿ ಕಾರ್ಮಿಕ ಪರ ದಲಿತ ಪರ ಹೊರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಂತ್ರೋಪಕರಣಗಳ ಬಳಕೆ ಅಗತ್ಯ:- ಆಧುನಿಕ ತಂತ್ರಜ್ಞಾನ ಯುಗದಲ್ಲಿಯೂ ಮನುಷ್ಯರನ್ನು ಹಾನಿ,ಅನಾರೋಗ್ಯ ಕ್ಕೊಳ ಗಾಗುವ ಸ್ಥಳಗಳಲ್ಲಿ ಕೆಲಸಕ್ಕೆ ನಿಯೋಜನೆ ಮಾಡುತ್ತಿರುವುದು ಖಂಡನೀಯ.
ತೀರದ ಪರೋಕ್ಷ ಅಸ್ಪೃಶ್ಯತೆ:- ಮೇಲ್ವರ್ಗದ ಸಮುದಾಯದ ಅಧಿಕಾರಿ ವರ್ಗದವರು ಹಸಿವು ನೀಗಿಸಿಕೊಳ್ಳುವ ಅಸ್ಪೃಶ್ಯ ಸಮುದಾಯದವರನ್ನೇ ಟಾರ್ಗೆಟ್ ಮಾಡಿ ಚರಂಡಿ ಸ್ವಚ್ಛತೆಗೆ ಇತರೆ ಕೀಳುಮಟ್ಟದ ಶ್ರಮದಾನಕ್ಕೆ ಹಣದ ಆಮಿಷೆಯಿಂದ ಬಲವಂತವಾಗಿ ಸ್ವಚ್ಛತೆಗೆ ಇಳಿಸಿರುವುದು ಕಾನೂನಿನಡಿ ಅಕ್ಷಮ್ಯ ಅಪರಾಧ.ಇನ್ನೂ ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆ ಜೀವಂತ ವಾಗಿರುವುದು ಬೇಸರದ ಸಂಗತಿಯಾಗಿದೆ ಎನ್ನುತ್ತಾರೆ ದಲಿತ ಸಮಾಜದ ಮುಖಂಡರುಗಳು.
ಇದನ್ನು ಮನಗಂಡ ಅಧಿಕಾರಿಗಳು ಕೂಡಲೇ ಜಾಗೃತರಾಗಿ ಮರಣೋತ್ತರ ಪರೀಕ್ಷೆ ವರದಿಯನ್ವಯ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು.ಇಲ್ಲವಾದರೆ ಅಸಂಘಟಿತವಲಯ ಕಾರ್ಮಿಕರ ಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿದ್ದಾರೆ ಎಂಬುದು ಮೂಲ ಗಳಿಂದ ತಿಳಿದು ಬಂದಿದೆ.
ಈ ಪ್ರಕರಣದ ಸಂಬಂಧ ಜಗಳೂರು ತಾಲೂಕಿನ ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
” ಬಸವನಕೋಟೆ ಕಾರ್ಮಿಕರ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಕ ವರದಿಯನ್ನು ನಮ್ಮ ಮೇಲಾಧಿಕಾರಿಗಳಿಗೆ ಕಳಿಸಿ ಕೊಟ್ಟಿದ್ದೇನೆ ಮೃತರ ಕುಟುಂಬ ವರ್ಗದವರಿಗೆ ಗ್ರಾಮ ಪಂಚಾ ಯಿತಿ ಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ತುಂಬಿ ಕೊಳ್ಳುತ್ತೇವೆ ಅವರಿಗೆ ಮೃತರ ಕುಟುಂಬಕ್ಕೆ ಪರಿಹಾರ ನೀಡುತ್ತೇವೆ ಈ ಘಟನೆ ಯುಗಾದಿ ಹಬ್ಬ ಅಮಾವಾಸ್ಯೆ ದಿನದಂದು ಆಗಿರುವುದು ತುಂಬಾ ವಿಷಾದ ನೀಯ ಹೆಚ್ಚಿನ ದಾಗಿ ನಮ್ಮ ಸಿಇಓ ಅವರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ವಿರುದ್ಧ ಕ್ರಮ ಕೈ ಗೊಳ್ಳುತ್ತಾರೆ “
ವೈ ಎನ್.ಚಂದ್ರಶೇಖರ್.ಇ.ಓ ತಾಲೂಕು ಪಂಚಾಯಿತಿ ಜಗಳೂರು
” ಬಸವನಕೋಟೆ ಗ್ರಾಮದ ಕೂಲಿ ಕಾರ್ಮಿಕರಾದ ಸತ್ಯಪ್ಪ ಮತ್ತು ಮೈಲಪ್ಪ ರವರ ಸಾವಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿಗಳೆ ನೆರವಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರು ಕಾರಣವಾಗಿದ್ದು .ಈಗ ಅವರ ಸಾವಿಗೆ ಪರಿಹಾರವಾಗಿ ತಲಾ 10 ಲಕ್ಷ ರೂಪಾಯಿಗಳು ಪರಿಹಾರ ಮತ್ತು ಅವರ ಕುಟುಂಬದವರಿಗೆ ಗ್ರಾಮ ಪಂಚಾಯತಿಯ ನೌಕರಿ ಕೊಡುವುದಾಗಿ ಭರವಸೆ ಯನ್ನು ನೀಡಿರುತ್ತಾರೆ. ಕೆಲವೇ ದಿನ ಗಳಲ್ಲಿ ಆ ಭರವಸೆಯನ್ನು ಈಡೇರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಗಳೂರು ತಾಲೂಕು ಪಂಚಾಯಿತಿಗೆ ಮುತ್ತಿಗೆ ಹಾಕು ವ ಮುಖಾಂತರ ಬೃಹತ್ ಹೋರಾಟವನ್ನು ನಡೆಸ ಲಾಗುವುದು.”
ಸತೀಶ್. ಬಿ.ಮಲೆಮಾಚಿಕೆರೆ ತಾಲೂಕು ಸಂಚಾಲಕ.ಕರ್ನಾಟಕ ದಲಿತ ಸಂಘರ್ಷ ಸಮಿತಿ.ಜಗಳೂರು
” ಬಡ ಕೂಲಿಕಾರ್ಮಿಕರ ಸಾವಿನ ಮೇಲೆ ರಾಜಕಾರಣ ಸಲ್ಲದು ಅಧಿಕಾರಿಗಳು ಗ್ರಾಮಪಂಚಾಯಿತಿ ಆಡಳಿತ ವೈಫಲ್ಯ,ನಿರ್ಲಕ್ಷ್ಯದ ಸತ್ಯಾಸತ್ಯತೆ ಮನಗಂಡು ಮೃತ ಕುಟುಂಬಕ್ಕೆ ನ್ಯಾಯ ಒದಗಿಸ ಬೇಕು.ಇಲ್ಲವಾದರೆ ಕಾರ್ಮಿಕ ಸಂಘಟನೆ ಯಿಂದ ಪ್ರತಿಭಟನೆ ನಡೆಸಲಾಗುವುದು”
—– ಮಾದಿಹಳ್ಳಿ ಮಂಜುನಾಥ್ ಎಐಟಿಯುಸಿ ಸಂಘಟನೆ ತಾಲೂಕು ಪ್ರಧಾನ ಕಾರ್ಯದರ್ಶಿ