ಪ್ರಜಾ ನಾಯಕ ಸುದ್ದಿ ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟ ದ ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘದಲ್ಲಿ ಖಾಲಿ ಇರುವ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಸಿಸ್ಟೆಂಟ್ ಮ್ಯಾನೇಜರ್, ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ಒಟ್ಟು 219 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 17 ರೊಳಗೆ ಈ ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಬಯಸುವ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ತುಮಕೂರು ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧಿಕೃತ ವೆಬ್ಸೈಟ್ tumul.coop ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ-:
ಸಹಾಯಕ ವ್ಯವಸ್ಥಾಪಕ – 28 ಹುದ್ದೆಗಳು
ವೈದ್ಯಕೀಯ ಅಧಿಕಾರಿ- 1 ಹುದ್ದೆ
ಆಡಳಿತ ಅಧಿಕಾರಿ- 1 ಹುದ್ದೆ
ಖರೀದಿ/ಸ್ಟೋರ್ಕೀಪರ್- 3 ಹುದ್ದೆಗಳು
MIS/ಸಿಸ್ಟಮ್ ಅಧಿಕಾರಿ- 1 ಹುದ್ದೆ
ಲೆಕ್ಕಪತ್ರ ಅಧಿಕಾರಿ- 2 ಹುದ್ದೆಗಳು
ಮಾರ್ಕೆಟಿಂಗ್ ಅಧಿಕಾರಿ- 3 ಹುದ್ದೆಗಳು
ತಾಂತ್ರಿಕ ಅಧಿಕಾರಿ- 14 ಹುದ್ದೆಗಳು
ತಂತ್ರಜ್ಞ- 1 ಹುದ್ದೆ
ವಿಸ್ತರಣಾಧಿಕಾರಿ- 22 ಹುದ್ದೆ
MIS ಸಹಾಯಕ ಗ್ರೇಡ್I- 2 ಹುದ್ದೆಗಳು
ಆಡಳಿತ ಸಹಾಯಕ ಗ್ರೇಡ್ 2- 13 ಹುದ್ದೆಗಳು
ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್2- 12 ಹುದ್ದೆಗಳು
ಮಾರ್ಕೆಟಿಂಗ್ ಸಹಾಯಕ ಗ್ರೇಡ್2- 18 ಹುದ್ದೆಗಳು
ಖರೀದಿ ಸಹಾಯಕ ಗ್ರೇಡ್2 – 6 ಹುದ್ದೆಗಳು
ರಸಾಯನಶಾಸ್ತ್ರಜ್ಞ ಗ್ರೇಡ್2- 4 ಹುದ್ದೆಗಳು
ಜೂನಿಯರ್ ಸಿಸ್ಟಮ್ ಆಪರೇಟರ್- 10 ಹುದ್ದೆಗಳು
ಕೋ-ಆರ್ಡಿನೇಟರ್ (ರಕ್ಷಣೆ)- 2 ಹುದ್ದೆಗಳು
ದೂರವಾಣಿ ನಿರ್ವಾಹಕ- 2 ಹುದ್ದೆಗಳು
ಜೂನಿಯರ್ ತಂತ್ರಜ್ಞ- 64 ಹುದ್ದೆಗಳು
ಚಾಲಕರು- 8 ಹುದ್ದೆಗಳು
ಲ್ಯಾಬ್ ಸಹಾಯಕ- 2 ಹುದ್ದೆಗಳು
ವಯೋಮಿತಿ:KMF ತುಮಕೂರು ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳ ಒಳಗಿರಬೇಕು. ಇನ್ನು ಮೀಸಲಾತಿ ವರ್ಗಗಳಿಗೆ ಸರ್ಕಾರಿ ನಿಯಮದಂತೆ ವಯೋಮಿತಿ ಸಡಿಲಿಕೆ ನೀಡಲಾಗಿದೆ. ವೇತನ:ಈ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆಗೆ ಅನುಗುಣವಾಗಿ ವೇತನ ನಿಗದಿ ಮಾಡಲಾಗುತ್ತದೆ. ಅಂದರಂತೆ ಕನಿಷ್ಠ 21 ಸಾವಿರದಿಂದ ಗರಿಷ್ಠ 97 ಸಾವಿರದವರೆಗೆ ವೇತನ ಸಿಗಲಿದೆ.