ಪ್ರಜಾ ನಾಯಕ ಸುದ್ದಿ ಬೆಂಗಳೂರು -: ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಇಂದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಸದಾಶಿವನಗರದಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಅವರು ಕೈ ಪಾಳಯಕ್ಕೆ ಸೇರಿಕೊಂಡಿದ್ದಾರೆ. ಆದರೀಗ ಚುನಾವಣಾ ಹೊಸ್ತಿಲಲ್ಲಿ ನಡೆದ ಈ ಬೆಳವಣಿಗೆಯಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಚಿಂತೆ ಶುರುವಾಗಿದೆ.
ಹೌದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾತ್ರಿ ರಾಜೀನಾಮೆ ನೀಡುವ ಮೂಲಕ ಬಾಬುರಾವ್ ಚಿಂಚನಸೂರ್ ಬಿಜೆಪಿಗೆ ಗುಡ್ಬೈ ಹೇಳಿದ್ದರು. ಬಳಿಕ ಅವರು ಕಾಂಗ್ರೆಸ್ಗೆ ಮರಳುವ ಮಾತುಗಳು ಕೇಳಿ ಬಂದಿದ್ದು, ಅದರಂತೆ ಇಂದು ಅವರು ಪಕ್ಷ ಬದಲಾಯಿಸಿದ್ದಾರೆ.
ಬಾಬುರಾವ್ ಚಿಂಚನಸೂರ್ ಗುರುಮಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಹೀಗಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ.
ಇನ್ನು ಚುನಾವಣಾ ಹೊಸ್ತಿಲಲ್ಲಿ ಬಾಬುರಾವ್ ಚಿಂಚನಸೂರ್ ಕಾಂಗ್ರೆಸ್ಗೆ ಸೇರ್ಪಡೆಯಾಗಿರುವುದು ಗುರುಮಠಕಲ್ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳನ್ನು ಆತಂಕಕ್ಕೀಡು ಮಾಡಿದೆ.
ಜಾಹೀರಾತು
ಹೌದು ಈಗಾಗಲೇ ಗುರುಮಠಕಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಪಡೆಯಲು 8 ನಾಯಕರು ಅರ್ಜಿ ಸಲ್ಲಿಸಿದ್ದರು. ಟಿಕೆಟ್ ಪಡೆದು ಈ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಬೇಕೆಂಬ ಕನಸು ಇವರದ್ದಾಗಿತ್ತು. ಆದರೀಗ ಈ ಎಲ್ಲಾ ಕನಸುಗಳು ಭಗ್ನವಾಗುವ ಸುಳಿವು ಸಿಗಲಾರಂಭಿಸಿದೆ.
ಜಾಹೀರಾತು
ಹೌದು ಬಾಬುರಾವ್ ಚಿಂಚನಸೂರ್ ಗುರುಮಠಕಲ್ ಟಿಕೆಟ್ ಫೈನಲ್ ಬಗ್ಗೆ ಮಾತನಾಡಿಕೊಂಡು ಕಾಂಗ್ರೆಸ್ ಸೇರಿದ್ದಾರೆನ್ನಲಾಗಿದೆ. ಚಿಂಚನಸೂರ್ ಈ ನಡೆಯಿಂದ ಆಕಾಂಕ್ಷಿಗಳ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ
ಕಾಂಗ್ರೆಸ್ನಿಂದ ಗುರುಮಠಕಲ್ 4ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರಿಗೆ ಟಿಕೆಟ್ ಆದ್ಯತೆ ಸಿಗುತ್ತದೆ ಎಂಬ ವಿಶ್ವಾಸದಲ್ಲಿ ಆಕಾಂಕ್ಷಿಗಳಿದ್ದರು. ಆದರೀಗ ಕೈ ಪಾಳಯ ಇವೆಲ್ಲಕ್ಕೂ ತದ್ವಿತರುದ್ಧವಾಗಿ ಸ್ಥಳೀಯರಲ್ಲದ ಬಾಬುರಾವ್ ಚಿಂಚನಸೂರ್ಗೆ ಗಾಳ ಹಾಕಿದೆ.
ಚಿಂಚನಸೂರ್ ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ ನಲ್ಲಿರುವ ಚಿಂಚನಸೂರ ವಿರೋಧಿ ಬಣದಲ್ಲಿ ಭುಗಿಲೇಳುವ ಅಸಮಾಧಾನ ಸಾಧ್ಯತೆ ಇದೆ.
ಅತ್ತ ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ಬಾಬುರಾವ್ ಚಿಂಚನಸೂರ್, ನಾನು ಅವಕಾಶವಾದಿ ರಾಜಕಾರಣಿ ಅಲ್ಲ. 2023ರಲ್ಲಿ ಚಿಂಚನಸೂರ್ ಸಾಮರ್ಥ್ಯ ಏನು ಅಂತಾ ಗೊತ್ತಾಗುತ್ತದೆ. ಇಂದಿಗೆ ಬಿಜೆಪಿ ಮುಗಿದ ಅಧ್ಯಾಯ. ನಾನು ಡಿ.ಕೆ.ಶಿವಕುಮಾರ್ ಬಗ್ಗೆ ಎಲ್ಲೂ ಚಕಾರ ಎತ್ತಿಲ್ಲ. ನಾನು ಡಿ.ಕೆ.ಶಿವಕುಮಾರ್ ಋಣ ತೀರಿಸಬೇಕಿದೆ. ಹೀಗಾಗಿ ಟಿಕೆಟ್ ನೀಡುವುದು ಕಾಂಗ್ರೆಸ್ ಹೈಕಮಾಂಡ್ಗೆ ಬಿಟ್ಟ ವಿಚಾರ ಎಂದರು.