ಪ್ರಜಾ ನಾಯಕ ಸುದ್ದಿ ಜಗಳೂರು :- ಸರಕಾರಿ ನೌಕರರ ನ್ಯಾಯ ಯುತಹಕ್ಕುಗಳಿಗಾಗಿ ಸಂಘಟಿತ ಹೊರಾಟ ಅಗತ್ಯ. ವ್ಯಾಪಕವಾಗಿ ಬೆಂಬಲಿಸಿ ಎಂದು ಸರಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಕರೆ ನೀಡಿದರು.
ಪಟ್ಟಣದ ತರಳಬಾಳು ಭವನದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ವಾಣಿಜ್ಯಮಳಿಗೆಗಳ ಶಂಕುಸ್ಥಾಪನೆ,ವಿಚಾರ ಸಂಕಿರಣ, ಮಹಿಳಾ ದಿನಾಚರಣೆ,ಸೇವಾ ರತ್ನ ಪುರಸ್ಕಾರ ಪ್ರಧಾನ,ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ ದಶಕಗಳಿಂದ ಅನೇಕಬಾರಿ ಮುಷ್ಕರ ನಡೆಸಿದರೂ ಯಾವು ದೇ ಪ್ರಯೋಜನವಾಗಿಲ್ಲ.ನನ್ನ ಅಧ್ಯಕ್ಷತೆಯ ನಂತರ ರಾಜ್ಯವ್ಯಾಪಿ ಸಂಚರಿಸಿ ಸರಕಾರಿ ನೌಕರರ ಸಮಸ್ಯೆಗಳ ಆಲಿಸಿ ನಂತರ ಸಮ ಯೋಚಿತವಾಗಿ ಮುಷ್ಕರಕ್ಕೆ ಕರೆ ನೀಡಿದ್ದಕ್ಕೆ. ಸಂಘಟನೆ ಶಕ್ತಿಗೆ ಸ್ಪಂದಿಸಿದ ಆಡಳಿತ ಸರಕಾರ 22 ಆದೇಶ ಗಳನ್ನು ಹೊರಡಿಸಿದೆ.7 ನೇ ವೇತನ ಪರಿಷ್ಕರಣೆ ಬೇಡಿಕೆಗೆ ಶೇ.17 ರಷ್ಟು ಮಧ್ಯಂತರ ವೇತನ ಜಾರಿಗೊಳಿಸಿದೆ.ಏಪ್ರಿಲ್ 23 ರ ವೇಳೆಗೆ ಶೇ.40 ರಷ್ಟು ಹೆಚ್ಚಿಸುವ ನಿರೀಕ್ಷೆಯಿದೆ.
ಎನ್.ಪಿ.ಎಸ್ ರದ್ದತಿಗೂ ಶಿಫಾರಸ್ಸುಮಾಡಿದೆ.ಇದು ನನ್ನ ಸೇವೆ ಯಾಗಿದ್ದು.ಸಂಘಟನೆ ದಿಕ್ಕು ತಪ್ಪಿಸುವ ವದಂತಿಗಳಿಗೆ ಕಿವಿಗೊಡ ಬೇಡಿ ನಂಬಿಕೆಯಿಟ್ಟು ಕೈಜೋಡಿಸಿ ನಿಮ್ಮ ಧ್ವನಿ ಯಾಗಿರುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆಗಳನ್ನು ಒಡೆದಾಳುವ ಸರಕಾರಗಳು:- ಪ್ರಸಕ್ತವಾಗಿ ಆಡಳಿತ ಸರಕಾರಗಳು ನೌಕರರ ಸಂಘಟನೆಗಳನ್ನು ಒಡೆದಾಳು ತ್ತವೆ.ಇದಕ್ಕೆ ಕೆಎಸ್ ಆರ್ ಟಿಸಿ ನೌಕರರ ಹೊರಾಟವೇ ಸಾಕ್ಷಿ ಯಾಗಿದೆ.ತಮಿಳುನಾಡಿನಲ್ಲಿ ಆಡಳಿತಸರಕಾರ ಎಸ್ಮಾ ಜಾರಿ ಗೊಳಿಸಿ ಸರಕಾರಿ ನೌಕರರ ಹೊರಾಟವನ್ನು ಹತ್ತಿಕ್ಕಿದೆ.ಆದರೆ ನಮ್ಮ ರಾಜ್ಯದ ಎಲ್ಲಾ ಇಲಾಖೆಗಳ ನೌಕರರ ಒಕ್ಕೋರಲಿನ ಸಹಕಾರ ದಿಂದ ಹೊರಾಟ ಯಶಸ್ವಿಯಾಗುತ್ತಿವೆ.ನಾನು ಮುಖ್ಯ ಮಂತ್ರಿಗಳಿಗೆ ಆತ್ಮೀಯನಾಗಿರುವೆ ಯಾವುದೇ ಒಪ್ಪಂದ ರಹಿತ ದಿಟ್ಟ ಹೋರಾಟ ನನ್ನದು ನಾನು ಸಂಘಟನೆಗೆ ವೈಯಕ್ತಿಕ ವೃತ್ತಿ ಕಳೆದಕೊಳ್ಳಲು ಸಿದ್ದನಾಗಿರುವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ಸಂಘಟನೆಯ ನಿರಂತರ ಒತ್ತಡಕ್ಕೆ ಮಣಿದು ಸರಕಾರ ₹1500 ಕೋಟಿ ವೆಚ್ಚದಲ್ಲಿ ಸರಕಾರಿ ನೌಕರರ 30 ಲಕ್ಷ ಕುಟುಂಬಗಳಿಗೆ ನಗದುರಹಿತ ಸ್ಮಾರ್ಟ್ ಕಾರ್ಡ್ ವಿತರಿಸಿ,ರಾಜ್ಯದ ಪ್ರತಿಷ್ಠಿತ ಆಸ್ಪತ್ರೆ ಗಳಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ.ಅಲ್ಲದೆ ಕೆಜಿಇಡಿ ಸಾಲದ ಮೊತ್ತ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುತ್ತಿದೆ. ಮಹಿಳಾ ನೌಕರರಿಗೆ 6ತಿಂಗಳು ವೇತನ ಸಹಿತ ಶಿಶು ಪಾಲ ನಾ ರಜೆ ಘೋಷಿಸಿದೆ ಮುಂದಿನ ದಿನಗಳಲ್ಲಿ ಮರಣ ಹೊಂದಿದ ನೌಕರನ ಶವ ಸಂಸ್ಕಾರಕ್ಕೆ ಒಂದು ಕೋಟಿ ಪರಿಹಾರಕ್ಕೆ ಆಗ್ರಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಸರಕಾರಿ ನೌಕರನಿಗೆ ಪವಿತ್ರ ವೃತ್ತಿಗೌರವಿದೆ:- ಸಮಾಜದಲ್ಲಿ ಸರ ಕಾರಿ ನೌಕರನ ವೃತ್ತಿಗೆ ಪವಿತ್ರವಾದ ಗೌರವವಿದೆ.ಕೋವಿಡ್ ನಲ್ಲಿ ಲಾಕ್ ಡೌನ್ ಸಂಕಷ್ಟ ವೇಳೆ ಸರಕಾರಿ ನೌಕರರು ಮನೆಯಲ್ಲಿ ದ್ದರೂ ವೇತನ ಪಾವತಿಸಿದೆ.ಆದ್ದರಿಂದ ತಾವುಗಳು ಆತ್ಮಸಾಕ್ಷಿ ಯಿಂದ ದಿನದ 24 ಗಂಟೆಗಳ ಕಾಲ ಕಾಯಕದಲ್ಲಿ ತೊಡಗಿ ತಮ್ಮ ಜವಾಬ್ದಾರಿ ಮೆರೆಯಬೇಕು ಎಂದು ಕಿವಿಮಾತು ಹೇಳಿದರು.
ಸರಕಾರಿ ನೌಕರರ ದೇಣಿಗೆ ಅಪಾರ:- ನೆರೆ ಸಂತ್ರಸ್ಥರಿಗೆ, ಕೋವಿಡ್ ಸಂದರ್ಭದಲ್ಲಿ ಪರಿಹಾರಕ್ಕೆ ಲಕ್ಷಾಂತರ ರೂಪಾಯಿ ಹಾಗೂ ಗೋಶಾಲೆಗಳಲ್ಲಿ ಅಶಕ್ತ ಹಸುಗಳ ಪೋಷಣೆಗೆ ಸರಕಾರ ಜಾರಿ ಗೊಳಿಸಿದ ಪುಣ್ಯಕೋಟಿ ಯೋಜನೆಗೆ ₹40 ಲಕ್ಷ ದೇಣಿಗೆ ನೀಡಿದ್ದು.ಸರಕಾರಿ ನೌಕರರ ದೇಣಿಗೆ ಕಂಡು ಸರಕಾರ ವೇ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ಸರಕಾರಿ ನೌಕರರು ಆಡಳಿತ ವ್ಯವಸ್ಥೆಗೆ ಬೆನ್ನೆಲುಬಾಗಿದ್ದು.ರಾಜ್ಯಾಧ್ಯಕ್ಷ ಷಡಕ್ಷರಿ ನೇತೃತ್ವ ದಲ್ಲಿ ಇಲಾಖೆಗಳ ಅಭಿವೃದ್ದಿ ಕೆಲಸಗಳಿಗೆ ಕುಂಠಿತ ವಾಗದಂತೆ ಆರೋಗ್ಯಕರವಾಗಿ ಹೊರಾಟ ನಡೆಸಿರುವುದು ಶ್ಲಾಘನೀಯ ಎಂದರು.
ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಬದ್ದ:- ಪಟ್ಟಣದಲ್ಲಿ 10 ಲಕ್ಷ ವೆಚ್ಚದ ವಾಣಿಜ್ಯ ಮಳಿಗೆಗೆಳ ಕಟ್ಟಡಕ್ಕೆ ಅನುದಾನ ಒದಗಿಸಿದ್ದು. ಅಲ್ಲದೆ ಲೊಕೋಪಯೋಗಿ ಇಲಾಖೆಯಡಿ 5 ಕೋಟಿ ವೆಚ್ಚದ ಸರಕಾರಿ ನೌಕರರ ಭವನ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ .ಮೂರು ಬಾರಿ ಶಾಸಕನನ್ನಾಗಿಸಲು ಸಹಕರಿಸಿದ ತಮಗೆ ಚಿರ ಋಣಿಯಾಗಿರುವೆ,ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಆಶೀರ್ವಾದಿಸ ಬೇಕು.ನಾನೊಬ್ಬ ಶಾಸಕನಾಗಿ ಸರಕಾರಿ ವೇತನ ಪಡೆಯುವ ನೌಕರನಾಗಿರುವೆ.ತಾಲೂಕಿನ ಸರಕಾರಿ ನೌಕರರ ಶ್ರೇಯೊಭಿವೃದ್ದಿಗೆ ಸದಾ ಬದ್ದನಾಗಿರುವೆ ಎಂದು ಭರವಸೆ ನೀಡಿದರು.
ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ,ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಿ. ಸಿದ್ದಬಸಪ್ಪ,ಉಪಾಧ್ಯಕ್ಷ ಎಸ್.ಬಸವರಾಜ್,ಮಾತನಾಡಿದರು.
ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಆರ್ ಚಂದ್ರಪ್ಪ ಕಾರ್ಯ ಕ್ರಮ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ವಿವಿಧ ಇಲಾಖೆಗಳ ಸಾಧಕ ರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ ಆರ್ ಚಂದ್ರಪ್ಪ. ಕಾರ್ಯದರ್ಶಿ ತಿಪ್ಪೇಸ್ವಾಮಿ. ಖಜಾಂಚಿ ನಾಗರಾಜ್. ತಾ.ಪಂ ಇ.ಓ ವೈ ಎನ್ ಚಂದ್ರಶೇಖರ್ ದಾವಣಗೆರೆ ದಕ್ಷಿಣ ವಲಯ ಬಿಇಓ ದಾರುಕೇಶ, ಕೇಂದ್ರ ಸಂಘದ ರಾಜ್ಯ ಉಪಾಧ್ಯಕ್ಷರಾದ ಸಿದ್ದೇಶ್,ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್, ಶಿವಮೊಗ್ಗ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ ,ಲೊಕೋಪಯೋಗಿ ಎಇಇ ರುದ್ರಪ್ಪ, ತಾಲೂಕು ಸರಕಾರಿ ನೌಕರ ರ ಸಂಘದ ಮಾಜಿ ಅಧ್ಯಕ್ಷರಾದ ಅಜ್ಜಪ್ಪ ನಾಡಿಗರ್,ರವಿಕುಮಾರ್, ಕುಮಾರ್, ಶಶಿಧರ್, ತಿಪ್ಪೇಸ್ವಾಮಿ,ಗುರುಮೂರ್ತಿ,ದ್ವಾರಕೇಶ್,ಡಿಡಿ ಹಾಲಪ್ಪ, ನಿವೃತ್ತ ನೌಕರರ ಸಂಘದ ಪಾಲಯ್ಯ, ,ರುದ್ರೇಶ್, ತಿಪ್ಪೇಸ್ವಾಮಿ, ಸತೀಶ್, ರುದ್ರೇಶ್, ವೀರೇಶ್, ಹನುಮಂತೇಶ್ ಸೇರಿದಂತೆ ನೂರಾರು ಸರ್ಕಾರಿ ನೌಕರರು ಇದ್ದರು.