ಪ್ರಜಾ ನಾಯಕ ಸುದ್ದಿ ಜಗಳೂರು :- ಚುನಾವಣೆ ಆಯೋಗದ ಮಾದರಿ ನೀತಿ ಸಂಹಿತೆ ಅನುಸಾರ ಶಾಂತಿಯುತ ಪಾರದರ್ಶಕ ಚುನಾವಣೆಗೆ ಸಕಲ ಸಿದ್ದತೆ ಕೈಗೊಳ್ಳಲಾಗಿದೆ ಎಂದು ಚುನಾವಣೆ ಅಧಿಕಾರಿ ಎಸ್.ರವಿ ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಕುರಿತು ಗುರುವಾರ ಕರ್ನಾಟಕ ವಿಧಾನ ಸಭಾ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ ಹೊರಡಿಸಿದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಸಿದ್ದತೆ ಕುರಿತು ನಡೆದ ರಾಜಕೀಯ ಸರ್ವಪಕ್ಷಗಳ,ಹಾಗೂ ಪ್ರಿಂಟಿಂಗ್ ಪ್ರೆಸ್ ಮಾಲಿಕರ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ ಚುನಾವಣಾ ಆಯೋಗ ನಿಗದಿಪಡಿಸಿರುವ ಚುನಾವಣೆ ವೇಳಾಪಟ್ಟಿ ಯಂತೆ ನಾಮಪತ್ರ ಸಲ್ಲಿಕೆಗೆ ದಿನಾಂಕ:13-4-2023 ಗುರುವಾರ ದಿಂದ ಆರಂಭವಾಗಿ ದಿನಾಂಕ:20-4-2023 ಗುರುವಾರ ಕೊನೆಯದಿನವಾಗಿರುತ್ತದೆ.ದಿನಾಂಕ:21-4-2023 ಶುಕ್ರವಾರ ಪರಿಶೀಲನೆಗೆ ಹಾಗೂ ದಿನಾಂಕ: 24-4-2023 ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ವಾಗಿರುತ್ತದೆ.ದಿನಾಂಕ:10-5-2023 ಬುಧವಾರ ಮತದಾನ ದಿನಾಂಕ:13-5-2023 ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿ ದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಪೂರ್ವದ ಹತ್ತು ದಿನದ ಮುಂಚಿತವಾಗಿ ದಿನಾಂಕ:10-4-2023 ರೊಳಗಾಗಿ ನಮೂನೆ -6 ಸಲ್ಲಿಸಿದ್ದಲ್ಲಿ ಅವಕಾಶವಿರುತ್ತದೆ ಎಂದು ಮಾಹಿತಿ ನೀಡಿದರು.
ಹಣ ಮದ್ಯ ಸಾಗಾಣಿಕೆಗೆ ಕಟ್ಟೆಚ್ಚರ:- ವಿಧಾನ ಸಭಾ ಕ್ಷೇತ್ರದಲ್ಲಿ 5ಕಡೆ ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ. ಎಸ್ಎಸ್ ಟಿ ಟೀಮ್ ಪೊಲೀಸ್ ಠಾಣಾ ಸರಹದ್ದುಗೆ ಅನುಸಾರವಾಗಿ ಮೂರು ಎಫ್.ಎಸ್.ಟಿ ಟೀಮ್ ರಚಿಸಲಾಗಿದೆ.ಕಂಟ್ರೋಲ್ ರೂಮ್ ನಿರ್ವಹಣೆ ಅಲ್ಲದೆ ಸಿ-ವಿಜಿಲ್ ತಂತ್ರಾಂಶದಲ್ಲಿ ದೂರು ದಾಖಲಿ ಸಲು ಅವಕಾಶವಿರುತ್ತದೆ.ಇದರಿಂದ ಅನಧಿಕೃತಹಣ ಮದ್ಯ ಸಾಗಾಣಿಕೆ ಹಾಗೂ ಅಕ್ರಮ ಚಟುವಟಿಕೆಗಳ ಬಗ್ಗೆ ಕಟ್ಟೆಚ್ಚರ ವಹಿಸಲಾಗಿದೆ.ಶಾಂತಿಯುತ ಚುನಾವಣೆ ನಡೆಸ ಲಾಗುವುದು ಎಂದು ಹೇಳಿದರು.
ವಿಶೇಷ ವಿಕಲಚೇತನರಿಗೆ ಹಾಗೂ 80 ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆಮತ ಮೂಲಕ ಮನೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗಿದೆ.ಮತಗಟ್ಟೆ ಮಟ್ಟದ ಅಧಿಕಾರಿಗಳ ಮೂಲಕ ನಮೂನೆ 12-ಡಿ ಯನ್ನು ಒದಗಿಸಲಾಗುವುದು ಇದನ್ನು ಮತಗಟ್ಟೆಗೆ ತೆರಳಲಾಗದ ವೃದ್ದಾಪ ವಿಕಲ ಚೇತನ ಮತದಾರರು ಸೌಲಭ್ಯ ಬಳಸಿಕೊಳ್ಳಬಹುದು ಎಂದರು.
ಆಯೋಗದ ನಿರ್ದೇಶನದಂತೆ ಒಬ್ಬ ಅಭ್ಯರ್ಥಿಗೆ ಒಟ್ಟು ₹40 ಲಕ್ಷದವರೆಗೆ ಚುನಾವಣೆವೆಚ್ಚ ನಿಗದಿಪಡಿಸಲಾಗಿದೆ.
ಚುನಾವಣೆ ಪ್ರಚಾರ ಸಭೆ-: ಸಮಾರಂಭಗಳಿಗೆ ಆನ್ ಲೈನ್ ನಲ್ಲಿ ಅನುಮತಿ ಪಡೆಯ ಬಹುದು.ಚುನಾವಣೆಯಲ್ಲಿ ಪಕ್ಷಗಳ ಲೆಕ್ಕ ಪತ್ರ ನಿರ್ವಹಣೆಗೆ ಮಾಹಿತಿ ನೀಡಲಾಗುವುದು.ಪ್ರಿಂಟಿಂಗ್ ಪ್ರೆಸ್ ನವರು ಚುನಾವಣೆ ಅಧಿಕಾರಿಗಳ ಮಾರ್ಗಸೂಚಿ ಯಂತೆ ಕರಪತ್ರ ಮುದ್ರಿಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಜಿ. ಸಂತೋಷ್ ಕುಮಾರ್, ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಷಂಷೀರ್ ಅಹಮ್ಮದ್,ಡಿ.ವಿ.ನಾಗಪ್ಪ,ಪಲ್ಲಾಗಟ್ಟೆ ಶೇಖರಪ್ಪ,ಲುಕ್ಮಾನ್ ಖಾನ್,ಡಿ.ವಿ ನಾಗಪ್ಪ ,ಕಟ್ಟಿಗೆಹಳ್ಳಿ ಮಂಜಣ್ಣ, ನಿಸಾರ್ ಅಹಮ್ಮದ್,ಪ್ರಿಂಟಿಂಗ್ ಪ್ರೆಸ್ ನ ಮಾಲಿಕರಾದ ತಿಪ್ಪೇಸ್ವಾ ಮಿ,ಸಂತೋಷ್,ಅರುಣಕುಮಾರ್ ಸೇರಿದಂತೆ ಇತರರಿದ್ದರು