ಪ್ರಜಾ ನಾಯಕ ಸುದ್ದಿ ಜಗಳೂರು :- ವಿಧಾನಸಭಾ ಕ್ಷೇತ್ರದ ಮಾದಿಹಳ್ಳಿ ಗ್ರಾಮದಲ್ಲಿ ಆಂಜನೇಯ ಸ್ವಾಮಿ ರಥೋತ್ಸವದ ಮರುದಿನ ಮುಳ್ಳು ಗದ್ದುಗೆ ಉತ್ಸವ ವೈಭವದಿಂದ ಜರುಗಿತು.
ಬೆಳಿಗ್ಗೆ 10 ಗಂಟೆಗೆ ಬನ್ನಿಕಾಳಿಕಾಂಭ ಮಂಟಪದ ಬಳಿ ನೂರಾರು ಭಕ್ತ ಸಮೂಹದ ದೇವರ ಜಯಘೋಷಗಳ ಮಧ್ಯೆ,ವಾಧ್ಯ ಶಬ್ದಗಳ ಮಧ್ಯೆ ಮುಳ್ಳುಗದ್ದುಗೆ ಮೇಲೆ ಮಲಗಿದ ದಾಸಪ್ಪನು ಸತತ ಮೂರು ಗಂಟೆಗಳ ಕಾಲ ಮುಳ್ಳಿನಮೇಲೆ ಕುಣಿಯುತ್ತಾ ಗ್ರಾಮದ ಪ್ರಮುಖ ಬೀದಿಯ ಮೂಲಕ ಆಂಜನೇಯ ದೇವಸ್ಥಾನ ತಲುಪುವುದು ದಶಕಗಳಿಂದ ನಡೆದು ಬಂದ ದೈವಭಕ್ತಿಯ ಪ್ರತೀಕವಾಗಿದೆ.
ದಾಸಪ್ಪನ ಉಪವಾಸ ವ್ರತ:- ರಥೋತ್ಸವದ ದಿನದಿಂದ ಮುಳ್ಳುಗದ್ದುಗೆ ಉತ್ಸವ ಮುಕ್ತಾಯವಾಗುವವರಿಗೆ ಉಪವಾಸ ವ್ರತಾಚರಣೆ ಮಾಡುತ್ತಾರೆ.ಮುಳ್ಳುಗದ್ದುಗೆ ಉತ್ಸವದ ಹಿಂಬಾಗ ಆಂಜನೇಯನ ಉತ್ಸವ ಮೂರ್ತಿ ಮೆರವಣಿಗೆ ಸಾಗುತ್ತದೆ .ದೈವಭಕ್ತಿ ಹೊಂದಿದ ದಾಸಪ್ಪನು ಮುಳ್ಳಿನ ಮೇಲೆ ಕುಣಿದರೂ ,ಎದ್ದು ನಿಂತರೂ ಮಲಗಿದರೂ ಯಾವುದೇ ರಕ್ತವಿಲ್ಲದೆ .ನೋವಿಲ್ಲದೆ ಉತ್ಸವ ನಡೆಯುವುದು ವಾಡಿಕೆಯಾಗಿದೆ.
ರಸ್ತೆಯುದ್ದಕ್ಕೂ ಉತ್ಸವದಲ್ಲಿ ಸಮಾಳ,ಡೊಳ್ಳುಕುಣಿತ, ಹಲಗೆ, ಕಹಳೆ,ವಾದ್ಯವೃಂದ,ನಂದಿಕೋಲು ಕುಣಿತಗಳು ಕಳೆಗಟ್ಟಿದವು.
ವೀರಭದ್ರನ ಭಕ್ತ ಮೌನೇಶ್ ಆಚಾರ್ ಮತ್ತೊಬ್ಬ ಭಕ್ತನ ಅಂಗೈ ಯಲ್ಲಿ ತೆಂಗಿನಕಾಯಿ ಇಟ್ಟು ವೀರಾಗಸೆ ನೃತ್ಯದ ಮೂಲಕ ತೆಂಗಿನ ಕಾಯಿಯನ್ನು ತುಂಡರಿಸುವುದು ಭಕ್ತರ ಮೈ ರೊಮಾಂಚನ ಗೊಳಿಸಿತು.