ಪ್ರಜಾ ನಾಯಕ ಸುದ್ದಿ ಜಗಳೂರು :- ದಲಿತ ಬಾಲಕಿ ಕುಮಾರಿ ಪಲ್ಲವಿ ಶಿವಾನಂದ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾ ಚಾರ ಮತ್ತು ಕೊಲೆ ಮಾಡಿರುವ ಪ್ರಕರಣವನ್ನು ಪೊಲೀಸ್ ಇಲಾಖೆ ಯಿಂದ ಸಿಬಿಐಗೆ ವರ್ಗಾಯಿಸಿ ಅತ್ಯಾಚಾರ ಮಾಡಿರುವ ಆರೋಪಿ ಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಜಗಳೂರು ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಹೋರಾಟ ಪ್ರೊ. ಕೃಷ್ಣಪ್ಪ ಬಣದಿಂದ ಪಟ್ಟಣದ ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿಯವರಿಗೆ ಪ್ರತಿಭಟನೆ ನಡೆಸುವ ಮುಖಾಂತರ ತಹಸಿಲ್ದಾರ್ ಸಂತೋಷ್ ಕುಮಾರ್. ಜಿ ಇವರಿಗೆ ಮನವಿ ಸಲ್ಲಿಸಿದರು
ನಂತರ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಮಲೆ ಮಾಚಿಕೆರೆ ಸತೀಶ್.ಬಿ ಮಾತನಾಡಿ ಬೆಂಗಳೂರುನಲ್ಲಿ ವಾಸ ಮಾಡುತ್ತಿರುವ ಅಪ್ರಾಪ್ತ ದಲಿತ ಬಾಲಕಿ ಕುಮಾರಿ ಪಲ್ಲವಿ ಶಿವಾನಂದರವರು ಉತ್ತರ ಕರ್ನಾಟಕದ ಮೂಲದವರಾಗಿದ್ದು ಇವರ ತಂದೆ ಬೆಂಗಳೂರುನಲ್ಲಿ ಡ್ರೈವರ್ ಕೆಲಸ ಮಾಡುತ್ತಿದ್ದರು ಪಲ್ಲವಿ ಅಲ್ಲೇ ವಿದ್ಯಾಭ್ಯಾಸ ಮಾಡುತ್ತಿದ್ದರು
ಕುಮಾರಿ ಪಲ್ಲವಿ ಶಿವಾನಂದ್ ರವರು ಪ್ರಥಮ ಪಿಯುಸಿ ವಿದ್ಯಾ ಭ್ಯಾಸ ಮಾಡುತ್ತಿದ್ದರು ಎಂದಿನಂತೆ ದಿನಾಂಕ 25-3-2023 ಕಾಲೇಜ್ ಮುಗಿಸಿಕೊಂಡು ಮರಳಿ ಮನೆಗೆ ಬರುತ್ತಿರುವಾಗ ಆಪ್ತ ಸ್ನೇಹಿತರಿಂದಲೆ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿದೆ
ಮೃತ ಪಲ್ಲವಿ ಶಿವಾನಂದರವರ ಮೃತ ದೇಹವನ್ನು ತಾತಗುಣಿ ಎಸ್ಟೇಟ್ ಬಳಿ ಇರುವ ಕಾಡಿನಲ್ಲಿ ಶವವನ್ನು ಬಿಸಾಡಿ ಹೋಗಿರು ತ್ತಾರೆ ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತಾರ ವಾದ ನಂತರ ಸ್ಥಳೀಯ ಕಗ್ಗಲಿಪುರ ಠಾಣೆ ಪೊಲೀಸರು ಘಟನೆ ನಡೆದು ಮೂರು ನಾಲ್ಕು ದಿನಗಳ ನಂತರ ಆರೋಪಿ ಯನ್ನು ಪತ್ತೆ ಹಚ್ಚಿ ನಂತರ ಯಾವುದೇ ತನಿಖೆಯನ್ನು ಕ್ರಮ ಬದ್ಧವಾಗಿ ನಡೆಸಿ ರುವುದಿಲ್ಲ ಮತ್ತು ಆರೋಪಿಗಳು ತನಿಖಾಧಿಕಾರಿಗಳ ಮೇಲೆತಮ್ಮ ಆರ್ಥಿಕ ಮತ್ತು ರಾಜಕೀಯ ಪ್ರಭಾವವನ್ನು ಬೀರುತ್ತಿರುವುದು ಮೇಲ್ನೋಟಕ್ಕೆ ಸಂಶಯ ಉಂಟಾಗಿದೆ
ತನಿಖೆ ಇದೇ ರೀತಿ ಮುಂದುವರೆದರೆ ಮೃತ ಕುಮಾರಿ ಪಲ್ಲವಿ ಶಿವಾನಂದ ರವರ ಕುಟುಂಬ ವರ್ಗಕ್ಕೆ ಅನ್ಯಾಯವಾಗುವುದರಲ್ಲಿ ಯಾವುದೇ ಸಂಶಯವಿರುವುದಿಲ್ಲ ಮೃತ ಕುಮಾರಿ ಪಲ್ಲವಿ ಶಿವಾ ನಂದರವರ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಕರ್ನಾಟಕ ಪೊಲೀಸ್ ಇಲಾಖೆಯಿಂದ ಸಿಬಿಐಗೆ ವಹಿಸಿ ಆರೋಪಿ ಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಹೋರಾಟ ಮಾಡಲಾಗುತ್ತಿದೆ ಮುಂದಿನ ದಿನಗಳಲ್ಲಿ ಒಂದು ವೇಳೆ ಈ ಪ್ರಕರಣವನ್ನು ಸಿ.ಬಿ.ಐ.ಗೆ ವರ್ಗಾಯಿಸದೆ ಇದ್ದಲ್ಲಿ ಕರ್ನಾಟಕ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು
ಈ ಸಂದರ್ಭದಲ್ಲಿ ದಲಿತ ಮುಖಂಡ ರಾಜನಟ್ಟಿ ಚಂದ್ರಪ್ಪ. ಸಾಗಲಗಟ್ಟಿ ತಿಮ್ಮಣ್ಣ.ಉಮೇಶ್.ಹನುಮಂತಪ್ಪ.ಕೆಚ್ಚೆನಹಳ್ಳಿ ರಾಕೇಶ ಎಂ. ಮರೇನಹಳ್ಳಿ ಸಂದೀಪ್.ಜೀವನ.ಹುಚ್ಚುವನಹಳ್ಳಿ ಶಿವಕುಮಾರ್.ಬಸವರಾಜ್.ನಾಗರಾಜ.ನಾಗಪ್ಪ. ಆಸಗೋಡು ಪರಶುರಾಮ.ದೇವಿಕೆರೆ ಮಧು.ಕುರಿ ಜಯಣ್ಣ. ತಾನಾಜಿ ಗೋಸಾಯಿ.ಇತರರಿದ್ದರು