ಪ್ರಜಾ ನಾಯಕ ಸುದ್ದಿ ಜಗಳೂರು :- ವಿಧಾನಸಭಾ ಕ್ಷೇತ್ರದ ಬಿದರಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿದರಿಕೆರೆ ಗೊಲ್ಲರಹಟ್ಟಿ ಪವಿತ್ರ ವೀರೇಶ್ ಅವಿರೋಧವಾಗಿ ಪ್ರೇಮಲೀಲಾ ಅವರು ರಾಜಿನಾಮೆ ಸಲ್ಲಿಸಿದ್ದ ರಿಂದ ತೆರವಾದ ಸಾಮಾನ್ಯ ಮಹಿಳೆ ಮೀಸಲು ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಯಲ್ಲಿ ಒಬ್ಬರೇ ನಾಮ ಪತ್ರ ಸಲ್ಲಿಸಿದ್ದು .ನಾಮಪತ್ರ ಸಿಂಧುವಾಗಿದ್ದು.
ಒಟ್ಟು 16 ಜನ ಸದಸ್ಯರಿದ್ದು.ಸರ್ವ ಸದಸ್ಯರ ಸರ್ವಾನುಮತ ದಿಂದ ಅವಿರೋಧ ವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ತಹಶೀಲ್ದಾರ್ ಸಂತೋಷ್ ಕುಮಾರ್.ಜಿ ಘೋಷಿಸಿದರು.
ನಂತರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪವಿತ್ರ ವೀರೇಶ್ .ಮಾತ ನಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರತಿ ಹಳ್ಳಿಗಳಿಗೂ ಮೂಲ ಸೌಕರ್ಯ ಒದಗಿಸಲು ಹಾಗೂ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವೆ ಗ್ರಾಮಪಂಚಾಯಿತಿ ಅನುದಾನ ಸಮರ್ಪಕ ಅನು ಷ್ಠಾನಗೊಳಿಸಲು ಸದಾ ಬದ್ದನಾಗಿರುವೆ. ನನಗೆ ಸರ್ವ ಸದಸ್ಯರು ಸಹಕರಿಸ ಬೇಕು ಎಂದರು.
ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮರಳು ಸಿದ್ದಪ್ಪ .ಉಪಾಧ್ಯಕ್ಷರಾದ ಪ್ರೇಮ ಕೆಂಚಪ್ಪ.ಮಾಜಿ ಅಧ್ಯಕ್ಷರಾದ ಪ್ರೇಮಲೀಲಾ. ಸದಸ್ಯರಾದ ನಾಗರಾಜ್.ಶಿವಲಿಂಗಮ್ಮ. ರತ್ನಮ್ಮ. ಮಹಾಂತೇಶ್. ಚಂದ್ರಶೇಖರಪ್ಪ. ಗೌರಮ್ಮ. ತಿಪ್ಪೇಶ. ರಾಧಾಕೃಷ್ಣ. ಶಿವರುದ್ರಪ್ಪ. ಪ್ರಸನ್ನಕುಮಾರ. ಮಂಗಳಮ್ಮ. ಮುನಿಯಪ್ಪ. ಗಿರಿಜಮ್ಮ ಬಿಜೆಪಿ ಮುಖಂಡರಾದ ರವಿಕುಮಾರ್ ಬಿದರಿಕೆರೆ. ತಾ.ಪಂ ಮಾಜಿ ಸದಸ್ಯ ಬಸವರಾಜ್. ಗುತ್ತಿಗೆದಾರರಾದ ಬಾಲರಾಜ್. ವೀರೇಶ್. ಸೇರಿದಂತೆ ಸಿಬ್ಬಂದಿಗಳು ಸಾರ್ವಜನಿಕರು ಹಾಜರಿದ್ದರು