ಪ್ರಜಾ ನಾಯಕ ವಿಶೇಷ ಸುದ್ದಿ :- ಜಗಳೂರು ವಿಧಾನ ಸಭಾ ಎಸ್. ಟಿ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಪಕ್ಷದಿಂದ ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಅವರಿಗೆ ಇತ್ತೀಚೆಗೆ ಹೈಕಮಾಂಡ್ ಬಿಡುಗಡೆಗೊಳಿಸಿ ದ ಪಟ್ಟಿಯಲ್ಲಿ ಬಿಫಾರಂ ಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ.ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಆಯ್ಕೆಪಟ್ಟಿ ಗೊಂದಲದ ಗೂಡಾಗಿದ್ದು.ಮತ ದಾರ ಪ್ರಭುಗಳ ಚಿತ್ತ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯತ್ತ ಕುತೂಹಲ ಮೂಡಿಸಿರುವುದು ಅಕ್ಷರಶಃ ಸತ್ಯವಾಗಿದೆ.
ಹೌದು ಬಿಜೆಪಿ ಪಕ್ಷದಿಂದ ಶಾಸಕ ಎಸ್.ವಿ.ರಾಮಚಂದ್ರ ಅವರ ಹೆಸರನ್ನು ಹೊರತುಪಡಿಸಿ ಬೇರೊಬ್ಬ ಸ್ಪರ್ಧಾಳು ಇಲ್ಲದೆ ಹೈ ಕಮಾಂಡ್ ನ ಸ್ಪಷ್ಟ ನಿರ್ಧಾರಕ್ಕೆ ಸಾಕ್ಷಿಯಾಗಿದೆ.ಕ್ಷೇತ್ರದಲ್ಲಿ ಕೆಲ ದಿನ ಗಳಿಂದ ನಾನೊಬ್ಬ ಬಿಜೆಪಿ ಪಕ್ಷದ ಆಕಾಂಕ್ಷಿ ಎಂದು ತಮ್ಮದೇ ಚೌಕಟ್ಟಿನಲ್ಲಿ ಪ್ರಚಾರ ಸಭೆ ಸಮಾರಂಭಗಳಿಗೆ ಮುಂದಾಗಿದ್ದ ನಿವೃತ್ತ ಡಿವೈಎಸ್ ಪಿ ತಮಲೇಹಳ್ಳಿ ಕಲ್ಲೇಶಪ್ಪ ಅವರು ಸಂಚಲನ ಮೂಡಿಸಿದ್ದರು ಆದರೆ ಬಿಜೆಪಿ ವರಿಷ್ಠರ ಲೆಕ್ಕಾಚಾರದಂತೆ ಅವರ ಪ್ರಯತ್ನಕ್ಕೆ ಮಣಿಹಾಕದೆ ಕ್ಲೀನ್ ಸ್ವಿಪ್ ನೀಡಿರುವುದು ಕೆಲ ಅಭಿ ಮಾನಿಗಳನ್ನು ದಿಗ್ಭ್ರಾಂತಿಗೊಳಿಸಿದೆ.
ಶಾಸಕ ಎಸ್.ವಿ.ಆರ್ ಬಗ್ಗೆ ಮತದಾರನ ನಿಲುವು:- ಕ್ಷೇತ್ರದಲ್ಲಿ ಅರಸೀಕೆರೆ ಹೋಬಳಿ 7 ಗ್ರಾಮಪಂಚಾಯಿತಿಗಳನ್ನೊಳ ಗೊಂಡಂತೆ 29 ಗ್ರಾಮಪಂಚಾಯಿತಿಗಳು ಹಾಗೂ 1 ಪಟ್ಟಣ ಪಂಚಾಯಿತಿ ವ್ಯಾಪ್ತಿ ಮತದಾರರು.ಶಾಸಕ ಎಸ್.ವಿ. ರಾಮಚಂದ್ರ ಸಾಧು ಸ್ವಭಾವ,ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಸೇವೆ ಗೈದ ರಾಜಕಾರಣ ತೃಪ್ತಿ ತಂದಿದೆ.ಅಲ್ಲದೆ ಅವರ ಉತ್ಸಾಹಭರಿತ ಭಾಷಣಗಳು,ಮೂರು ಶಾಶ್ವತ ನೀರಾವರಿ ಯೋಜನೆಗಳು ಸಾಕಾರ ಗೊಳ್ಳಲು ನಡೆಸಿದ ಹೊರಾಟ,ರಸಮಂಜರಿ ಕಾರ್ಯಕ್ರಮಗಳ ಹಾಗೂ ಕ್ರೀಡಾಭಿಮಾನಿಗಳ ಕಣ್ಮನ ಸೆಳೆದ ರಾಜ್ಯ ಮಟ್ಟದ ಕ್ರೀಡಾ ಆಯೋಜನೆ,ಅಭಿವೃದ್ದಿ ಕಾಮಗಾರಿಗಳು,ವಾಲ್ಮೀಕಿ ನಿಗಮದಿಂದ ಕ್ಷೇತ್ರಕ್ಕೆ ತಂದಿರುವ ಅನುದಾನಗಳು ಮತದಾರರಲ್ಲಿ ಮತ್ತೊಮ್ಮೆ ಎಸ್ ವಿ ಆರ್ ಶಾಸಕರಾಗಿ ಸಚಿವಸಂಪುಟ ಸೇರಬೇಕಿದೆ ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ.
ರಾಜ್ಯ ಮತ್ತು ಕೇಂದ್ರದಲ್ಲಿನ ಬಿಜೆಪಿ ಪಕ್ಷದ ಆಡಳಿತ ಕಂಡ ಜನತೆ ಕಮಲ ತೊರೆದು ಕೈ ಹಿಡಿಯುವ ಮನಸ್ಸಿನೊಂದಿಗೆ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಜನಪರ ಯೋಜನೆ ಗಳ ನ್ನು ಸ್ಮರಿಸಿಕೊಂಡು,ಗ್ಯಾರಂಟಿ ಕಾರ್ಡ್ ಪ್ರಣಾಳಿಕೆಗಳ ಆಶಾದಾಯ ಕ ಭಾವನೆಯಲ್ಲಿ ಕ್ಷೇತ್ರದಿಂದಲೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯನ್ನುಕೈಹಿಡಿಯುವ ಮುನ್ಸೂಚನೆಗಳು ಕಂಡುಬರುತ್ತಿವೆ.
ಚರುಷ್ಕೋನ ಸ್ಪರ್ಧೆಯಲ್ಲಿ ಯಾರಿಗೆ ಟಿಕೇಟ್ -: ಹೌದು ಕಾಂಗ್ರೆಸ್ ಪಕ್ಷದಿಂದ ಪ್ರಬಲ ಆಕಾಂಕ್ಷಿಗಳಾಗಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್,ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಕೆಪಿ ಪಾಲಯ್ಯ, ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ,ರವಿಚಂದ್ರ ಬಸವಪುರ. ಹನುಮಂತಪ್ಪ.ಮಹಿಳಾ ಖೋಟಾದಲ್ಲಿ ಪುಷ್ಪ ಲಕ್ಷ್ಮಸ್ವಾಮಿ,ಅವರು ರೇಸ್ ನಲ್ಲಿದ್ದು.6 ಜನರಲ್ಲಿ ಕಾಂಗ್ರೆಸ್ ಪಕ್ಷದ ಬಿಡುಗಡೆಗೊಳಿಸುವ ಅಂತಿಮ ಪಟ್ಟಿಯಲ್ಲಿ ಯಾರ ಅದೃಷ್ಟವಿದೆ ಎಂಬುದು ಮಾತ್ರ ಕ್ಷೇತ್ರದ ಮತದಾರರ,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ನಿದ್ರೆಗೆಡಿಸಿದೆ.
ಮಾಜಿ ಶಾಸಕ ಎಚ್.ಪಿ ರಾಜೇಶ್ ಅವರು ನನಗೆ ಹೈಕಮಾಂಡ್ ಟಿಕೆಟ್ ಕೊಡುತ್ತಾರೆ :- ತಮ್ಮ ಆಡಳಿತಾವಧಿ ಯಲ್ಲಿ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕಾಮ ಗಾರಿ ಕೈಗೊಂಡಿರುವ ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ಕಳೆದ ಎರಡು ದಿನಗಳ ಹಿಂದೆ ವಿಧಾನ ಸಭಾ ಕ್ಷೇತ್ರದಲ್ಲಿನ ಐತಿಹಾಸಿಕ,ಹಾಗೂ ಪ್ರತಿಷ್ಠಿತ ದೇವಾಲಯಗಳ ಮೊರೆ ನೂರಾರು ಕಾರ್ಯಕರ್ತ ರೊಂದಿಗೆ ದೇವರಿಗೆ ವಿಶೇಷ ದರ್ಶನ ಪಡೆದು.ದೈವ ಕೃಪೆಯಿಂದ ಟಿಕೇಟ್ ಲಭಿಸುವ ನಿರೀಕ್ಷೆಯಲ್ಲಿದ್ದಾರೆ.ಟೆಂಪಲ್ ರನ್ ಕಾರ್ಯಕ್ರಮ ಕಾಂಗ್ರೆಸ್ ಹೈಕಮಾಂಡ್ ಗೆ ಹೊಸ ಸಂದೇಶ ರವಾನಿಸಿದ್ದು. ವರ್ಕೌಟ್ ಆಗುವುದೇ ಕಾದು ನೋಡಬೇಕಿದೆ.
ಕೆ.ಪಿ.ಪಾಲಯ್ಯ ಒಬ್ಬ ಪಕ್ಷದ ನಿಷ್ಠಾವಂತ ಪ್ರಬುದ್ದ ರಾಜಕಾರಣಿ:– ಕಳೆದ ಮೂರು ದಶಕಗಳಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾ ವಂತ ಕಾರ್ಯಕರ್ತರಾಗಿ,ಎರಡು ಬಾರಿ ಜಿಲ್ಲಾಪಂಚಾಯತ್ ಸದಸ್ಯ ರಾಗಿ ಸೇವೆಗೈದಿದ್ದು. ಪ್ರತಿ ಹಳ್ಳಿಯ ಮನೆಮನೆಗೂ ಚಿರಪರಿಚಿತ ವಾಗಿ ಎಲ್ಲಾ ವರ್ಗದ ಜನರ ಸಭೆ ಸಮಾರಂಭಗಳಿಗೆ ತೆರಳಿ ಶುಭಕೋರಿದ್ದಾರೆ.ಅಲ್ಲದೆ ನೊಂದವರಿಗೆ ಧ್ವನಿಯಾಗಿ ಕಷ್ಟಕಾರ್ಪಣ್ಯಗಳಿಗೆ ಬೆನ್ನೆಲುಬಾಗಿ ನಿಂತು ಸಾಂತ್ವಾನ ಹೇಳುವ ಹೃದಯ ವೈಶಾಲ್ಯತೆ ಕೆ.ಪಿ.ಪಾಲಯ್ಯ ಅವರದ್ದಾಗಿದ್ದು ಅವರೊಬ್ಬ ಪಕ್ಷ ಸಂಘಟನೆಗೆ ಪ್ರಾಮಾಣಿಕ ಪ್ರಬುದ್ದ ರಾಜಕಾರಣಿಯಾಗಿದ್ದಾರೆ.
ಸಾಹುಕಾರ್ ಸತೀಶ್ ಜಾರಕಿಹೊಳೆ ಮತ್ತು ಎಸ್ ಎಸ್ ಮಲ್ಲಣ್ಣ ರವರ ಆಪ್ತರು:-ಮಾನವ ಬಂಧುತ್ವ ವೇದಿಕೆಯಂತಹ ವೈಚಾರಿಕತೆ ಸಂಘಟನೆ ಅಂಬೇಡ್ಕರ್ ವಿಚಾರಧಾರೆಗಳನ್ನು ಮೈಗೂಡಿಸಿ ಕೊಂಡು ಬೆಳಗಾವಿ ಜಿಲ್ಲೆಯ ಮುತ್ಸದ್ದಿ ಸರಳ ಸಜ್ಜನಿಕೆಯ ವೈಚಾರಿಕ ರಾಜಕಾರಣಿ ಸಾಹುಕಾರ್ ಸತೀಶ್ ಜಾರಕಿಹೊಳೆ ಮತ್ತು ದಾವಣಗೆರೆಯ ಮಾಜಿ ಸಚಿವರು ಹಾಗೂ ಉದ್ಯಮಿಗಳಾದ ಎಸ್ ಎಸ್ ಮಲ್ಲಣ್ಣನವರ ಮಾರ್ಗದರ್ಶನದಲ್ಲಿ ಬೆಳೆದವರು.ತಮ್ಮದೇ ಆಪ್ತತೆ ಹೊಂದಿದ್ದು. ಟಿಕೇಟ್ ಗೆ ಸರ್ವರ ಬೆಂಬಲವಿದೆ.ನನ್ನನ್ನು ಗುರುತಿಸಿ ಹೈಕ ಮಾಂಡ್ ಟಿಕೇಟ್ ನೀಡುವಲ್ಲಿ ವಿಶ್ವಾಸ ವಿದೆ ಎಂದು ನಿರಾಳತೆ ಯಿಂದ ಪಕ್ಷ ಸಂಘಟನೆಯಲ್ಲಿದ್ದಾರೆ.
ಅಂತಿಮ ಪಟ್ಟಿಯಲ್ಲಿ ನನ್ನದೇ ಹೆಸರು ಭರವಸೆ ಬಿ.ದೇವೇಂದ್ರಪ್ಪ :- ನಾನೊಬ್ಬ ಜೆಡಿಎಸ್ ಪಕ್ಷದ ಪರಾಜಿತ ಅಭ್ಯರ್ಥಿಯಾಗಿದ್ದೆ ಕಾಂಗ್ರೆಸ್ ಪಕ್ಷದ ವರಿಷ್ಠರ ಸಲಹೆಯಂತೆ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ,ಸಲೀಂ ಅಹಮ್ಮದ್,ಎಂ.ಬಿ.ಪಾಟೀಲ್ ಅವರ ಹಾಗೂ ಜಿಲ್ಲೆಯ ಎಸ್ ಎಸ್ ಮಲ್ಲಿಕಾರ್ಜುನ್ ಅವರ ಸಹಕಾರ ದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಕ್ಷೇತ್ರದಲ್ಲಿ ಜನಪರ ಸೇವೆಗೆ ಮುಂದಾಗಿ ರುವೆ.ಅಧಿಕಾರ ರಹಿತವಾಗಿರುವ ನಾನು ಪಲಾಪೇಕ್ಷೆಯಿಲ್ಲದೆ ಸದಾ ಸಂಕಷ್ಟದಲ್ಲಿರುವವರಿಗ ನೆರವಾಗಿ ರುವೆ.ಗ್ರಾಮೀಣ ಭಾಗದಲ್ಲಿ ಸಭೆ ಸಮಾರಂಭ ಕ್ರೀಡೆ ,ಸಾಂಸ್ಕೃತಿಕ ಕಾರ್ಯಕ್ರಗಳಲ್ಲಿ ಭಾಗಿಯಾಗಿ ಪ್ರೋತ್ಸಾಹಿ ಸಿರುವೆ.ಅಲ್ಲದೆ ಕಳೆದ ಬಾರಿ ವಿಧಾನಸಭಾ ಚುನಾವಣೆ ಯಲ್ಲಿ ಜೆಡಿಎಸ್ ಪಕ್ಷದಿಂದ ನಿರೀಕ್ಷೆಗೂ ಮೀರಿ ಮತಗಳಿಸಿರುವೆ ಇದನ್ನು ಗುರುತಿಸಿ ನನಗೆ ಟಿಕೇಟ್ ಕೊಡುವ ಭರವಸೆ ಯಿದೆ ಎಂದು ಕಾದುಕುಳಿತಿದ್ದಾರೆ.
ಮಹಿಳಾ ಖೋಟಾದಲ್ಲಿ ನನಗೂ ಅವಕಾಶ ಪುಷ್ಪ ಲಕ್ಷ್ಮಣ ಸ್ವಾಮಿ :- ಕಳೆದ ಬಾರಿ ಟಿಕೇಟ್ ನೀಡಿ ಪುನಃ ಕಸಿದುಕೊಂಡಿದ್ದರು.ಅಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿರುವೆ.ಈ ಬಾರಿ ಮಹಿಳಾ ಖೋಟಾದಲ್ಲಿ ನನಗೆ ಅವಕಾಶ ನೀಡುವ ವಿಶ್ವಾಸ ನನಗಿದೆ ಎಂದು ಎ.ಎಲ್. ಪುಷ್ಪ ಲಕ್ಷ್ಮಣಸ್ವಾಮಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ.
ಒಟ್ಟಾರೆಯಾಗಿ ಬಿಜೆಪಿ ಪಕ್ಷದ ಮಾದರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯನ್ನು ಶೀಘ್ರದಲ್ಲಿ ಸ್ಪಷ್ಟಪಡಿಸಿ.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನದಲ್ಲಿನ ಗೊಂದಲಕ್ಕೆ ತೆರೆ ಎಳೆಯಬೇಕು ಎಂಬುದು ಕ್ಷೇತ್ರದ ಮತದಾರರ ಅಭಿಲಾಷೆ.ಪ್ರಜಾ ನಾಯಕ ಪತ್ರಿಕೆಯ ಆಶಯ ವಾಗಿದೆ.