ಪ್ರಜಾ ನಾಯಕ ಸುದ್ದಿ ಜಗಳೂರು :- ಜಾತ್ಯಾತೀತ ರಾಷ್ಟವಾದ ಭಾರತಕ್ಕೆ ವಿಶ್ವಕ್ಕೆ ಮಾದರಿಯಾಗುವಂತ ಸಂವಿಧಾನವನ್ನು ರಚಿಸಿದ ಕೀರ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಹೇಳಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜನ್ಮದಿನಾಚರಣೆಯ ಅಂಗವಾಗಿ ದಲಿತ ಸಂಘರ್ಷ ಸಮಿತಿ ಯ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಗಳನ್ನು ಅರ್ಪಿಸಿದ ನಂತರ ಮಾತನಾಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ದಿoದಲೇ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸೌಭ್ಯ ಗಳು ದೊರೆಯುವಂತಾಗಿದೆ. ಅಂಬೇಡ್ಕರ್ರವರ ತತ್ವಾದರ್ಶ ಗಳನ್ನು ನಾವೆಲ್ಲರು ಅಳಡಿಸಿ ಕೊಳ್ಳಬೇಕಾಗಿದೆ ಎಂದರು.
ಪ್ರಾಂಶುಪಾಲರಾದ ನಾಗಲಿಂಗಪ್ಪ ಮಾತನಾಡಿ ಎಲ್ಲರ ಒಳಿತಿಗಾಗಿ ಇದೆ ಸಂವಿಧಾನದಿಂದ ಮಾತ್ರ ಈ ಈ ದೇಶು ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ ಆದ್ದರಿಂದ ಅಂಬೇಡ್ಕರ್ ಅವರ ಬರೆದಿರುವಂತಹ ಸಂವಿಧಾನವನ್ನು ಅಧ್ಯಯನ ಮಾಡುವುದು ಅವಶ್ಯ ಎಂದು ಹೇಳಿದರು.ಭಾರತದ ಕಾನೂನು ಅಸ್ಪೃಶ್ಯತೆ ನಿವಾರಣೆಯಾಗ ಬೇಕು.ಜನಸಾಮಾನ್ಯರಿಗೆ ಮೂಲಭೂತ ಕರ್ತವ್ಯ ಸಮಾನತೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷವೂ ಅಂಬೇಡ್ಕರ್ ಜಯಂತಿ ಯನ್ನು ಶಾಲಾ-ಕಾಲೇಜುಗಳು ಸರ್ಕಾರಿ ಖಾಸಗಿ ಕಚೇರಿಗಳಲ್ಲಿ ಆಚರಣೆ ಮಾಡಲಾಗುತ್ತದೆ ಎಂದರು.
ಉಪನ್ಯಾಸಕ ಬಿಎಂ ಸ್ವಾಮಿ ಮಾತನಾಡಿ, ಅಂಬೇಡ್ಕರ್ ಅಂದಿನ ಪರಿಸ್ಥಿತಿಯಲ್ಲಿ ಅವರು ಪಟ್ಟ ನೋವು ಕಷ್ಟ ವೇದನೆ ಯಾರು ಕೂಡ ಅನುಭವಿಸಿಲ್ಲ ಆದ್ದರಿಂದ ಅವರ ಶ್ರಮವು ಅರಿವು ಎಲ್ಲರಿಗೂ ಕೂಡ ತಿಳುವಳಿಕೆಯಾಗಬೇಕಾಗಿದೆ. ಜೀವನದ ಆರಂಭದಿಂದ ಮರಣದವರಿಗೂ ಅವಮಾನ ಅನುಭವಿಸಿ ಜನರಿಗೆ ಸುಖ ಶಾಂತಿ ಕೊಟ್ಟು ಮಹಾನ್ ತ್ಯಾಗಿ ಯಾಗಿದ್ದಾರೆ
ಈ ಸಂಧರ್ಭದಲ್ಲಿ ಬಿ.ಜೆ.ಪಿ ಯುವ ಮುಖಂಡ ,ಬಿಸ್ತುವಳ್ಳಿ ಬಾಬು,ದಲಿತ ಸಂಘರ್ಷ ಸಮಿತಿಯ ಸಂಚಾಲಕ ಮಲೆಮಾಚಿಕೆರೆ ಸತೀಶ್, ವಕೀಲರಾದ ಹನುಮಂತಪ್ಪ.ಆರ್.ಓಬಳೇಶ್,ಪತ್ರಕರ್ತ ದೊಡ್ಡಬೊಮ್ಮನಹಳ್ಳಿ ಸಿ.ಬಸವರಾಜ್ ಹೆಚ್.ಎಂ.ಹೊಳೆ, ಮಹಾಲಿಂಗಪ್ಪ, ಹನುಮಂತಪ್ಪ, ವೆಂಕಟೇಶ್, ವಿಜಯ್, ತಾಯಿ ಟೋಣಿ ಬಾಬು, ಅಣಬೂರು ರಾಜಶೇಖರ್, ಧನ್ಯಕುಮಾರ್, ತಿಪ್ಪೇಸ್ವಾಮಿ ಗೋಗುದ್ದು, ಸ್ವಾಮಿ, ನಾಗರಾಜ್, ರಸ್ತೆಮಾಚಿಕೆರೆ ಯಲ್ಲಪ್ಪ ಸೇರಿದಂತೆ ಇತರೇ ಮುಖಂಡರುಗಳು ಉಪಸ್ಥಿತರಿದ್ದರು