ಪ್ರಜಾ ನಾಯಕ ಸುದ್ದಿ ಜಗಳೂರು-: ಕೆ.ಪಿ ಪಾಲಯ್ಯ ಅವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿದ್ದಕ್ಕೆ ಅವರ ಅಭಿಮಾನಿ ಬಳಗದ ವತಿಯಿಂದ ಅನುಪಮಾಚಾರಿಕ ಸಭೆಯನ್ನು ಇಂದು ಮಧ್ಯಾಹ್ನ ಬಗ್ಗೆನಳ್ಳಿ ಹತ್ತಿರವಿರುವ ತೋಟದ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದರು
ಪ್ರಾಸ್ತವಿಕವಾಗಿ ಉಚ್ಚಂಗಿಪುರದ ಯು.ಸಿ ರವಿ ಮಾತನಾಡಿ ಜಗಳೂರು ತಾಲೂಕಿನಲ್ಲಿ ಪ್ರತಿನಿತ್ಯ ಜನರಿಗೆ ಸಿಗುವ ವ್ಯಕ್ತಿ ಎಂದರೆ ನಮ್ಮ ಕೆ.ಪಿ ಪಾಲಯ್ಯ ಅವರು ಹಾಗೂ ಜಗಳೂರು ಕ್ಷೇತ್ರದ ಜನರ ನಾಡಿ ಮಿಡಿತವನ್ನು ಅರಿತಿರುವ ವ್ಯಕ್ತಿ ಎಂದರೆ ನಮ್ಮ ಕೆ.ಪಿ.ಪಿ ಅವರು ಪ್ರತಿನಿತ್ಯ ಅವರ ನಡವಳಿಕೆಗಳನ್ನು ಸಾರ್ವಜನಿಕರು ಗಮನಿಸುತ್ತಿರುತ್ತಾರೆ ಜಗಳೂರು ಮತ್ತು ಬೆಂಗಳೂರಿಗೆ ರಾಜ್ಯ ಪ್ರವಾಸ ಮತ್ತು ಪ್ರತಿ ಹಳ್ಳಿ ಹಳ್ಳಿಗಳಿಗೆ ಸಾರ್ವಜನಿಕರ ಕಷ್ಟ ಸುಖಗಳಿಗೆ ಹೋಗುವ ಕಾರಿನ ಇಂಧನದ ವೆಚ್ಚ ಸುಮಾರು ಒಂದು ಕೋಟಿ ರೂಪಾಯಿ ಆಗಿರಬಹುದು ಆದರೆ ಅಂತ ವ್ಯಕ್ತಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಟಿಕೆಟ್ ಕೈತಪ್ಪಿಸಿರುವುದು ನಮಗೆಲ್ಲ ತುಂಬಾ ದುಃಖವಾಗಿದೆ ಅವರಿಗೆ ಪಕ್ಷಾತೀತವಾಗಿ ಪ್ರಾಮಾಣಿಕ ವಾಗಿ ಸದಾ ಜಗಳೂರು ಕ್ಷೇತ್ರದ ಜನ ಬೆಂಬಲಿಸುತ್ತಾರೆ ಎಂದರು
ನಂತರ ಕೆಪಿಸಿಸಿ ಎಸ್.ಟಿ.ಘಟಕದ ರಾಜ್ಯಾಧ್ಯಕ್ಷ ಮಾತನಾಡಿ ಅವರು ಆರಂಭದಲ್ಲಿ ನಿನ್ನೆ “ಕಾಂಗ್ರೆಸ್ ಪಕ್ಷದ ಟಿಕೆಟ್ ಕೈತಪ್ಪಿಸಿರು ವುದನ್ನು ನೆನೆದು ಗಳಗಳನೆ ಅತ್ತರು ” ನನ್ನನ್ನು ನಂಬಿರುವ ಅಭಿಮಾನಿಗಳಿಗೆ ಯಾವುದೇ ರೀತಿ ನೋವಾಗಬಾರದು ಎಂಬ ಉದ್ದೇಶದಿಂದ ಈ ಸಭೆಯನ್ನು ಕರೆಯಲಾಗಿದೆ
ಎಲ್ಲರೂ ಕಾಂಗ್ರೆಸ್ ಪಕ್ಷದಲ್ಲಿ ಯಾರಿಗೆ ಟಿಕೆಟ್ ಸಿಕ್ಕಿರುವ ಅಭ್ಯರ್ಥಿ ಗೆ ನಿಷ್ಪಕ್ಷಪಾತ ವಾಗಿ ದುಡಿಯುವಂತಾಗಬೇಕು ಪ್ರತಿನಿತ್ಯ ಕ್ಷೇತ್ರದ ಜನತೆಯ ಜೊತೆಗೆ ನಾನು ಇರುತ್ತೇನೆ ಕ್ಷೇತ್ರದ ನನ್ನ ಅಭಿಮಾನಿ ಗಳು ಯಾರು ನೋವು ಮಾಡಿ ಮಾಡಿಕೊಂಡು ಗಳಗಳನೆ ಅಳುತ್ತಿ ದ್ದಾರೆ ಕಾಂಗ್ರೆಸ್ ಪಕ್ಷಕ್ಕೆ ನಾವೆಲ್ಲರೂ ಒಗ್ಗಟ್ಟಾಗಿ ದುಡಿಯೋಣ ಈಗ ಹೈಕಮಾಂಡ್ ಕೊಟ್ಟಿರುವ ಟಿಕೆಟ್ ಆಕಾಂಕ್ಷಿಯನ್ನು ಗೆಲ್ಲಿಸೋಣ
” ನಾನು ಕಳೆದ 25 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಮಾಡುತ್ತಾ ಬಂದಿರುವಂತಹ ವ್ಯಕ್ತಿ ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ನಾನು ಆಯ್ಕೆಯಾಗಿದ್ದೇನೆ ನನ್ನಂತ ನಿಷ್ಠಾವಂತ ವ್ಯಕ್ತಿಗೆ ಟಿಕೆಟ್ ತಪ್ಪಿಸಿರುವುದು ತುಂಬಾ ನೋವಿನ ಸಂಗತಿ ಅದನ್ನು ನೆನೆದು ಕಣ್ಣೀರಿಟ್ಟರು ಹಾಗೂ ಕಾಂಗ್ರೆಸ್ ಪಕ್ಷ ಗೆದ್ದು ಅಧಿಕಾರಕ್ಕೆ ಬಂದರೆ ನಾವು ತಿನ್ನುವ ಆಹಾರ ದಿನಸಿಗಳ ಬೆಲೆ ಮತ್ತು ಡೀಸೆಲ್ ಪೆಟ್ರೋಲ್ ಗ್ಯಾಸ್. ಕಡಿಮೆ ಮಾಡುತ್ತದೆ ಎಂಬುದು ನನ್ನ ಭಾವನೆ ಹಾಗೂ ಜನ ಸಾಮಾನ್ಯರೆಲ್ಲರಿಗೂ ಒಳ್ಳೆಯದಾಗುತ್ತದೆ ಅದಕ್ಕೆ ನೀವು ತಮ್ಮ ವೈಯಕ್ತಿಕ ಎಲ್ಲ ಬಿಟ್ಟು ಕಾಂಗ್ರೆಸ್ ಪಕ್ಷದಲ್ಲಿ ಒಟ್ಟಾಗಿ ಜಗಳೂರು ಕ್ಷೇತ್ರದಲ್ಲಿ ಗೆಲ್ಲಿಸೋಣ ಎಂದರು “
ಕೆಲಸ ಸಾರ್ವಜನಿಕರಿಗೆ ಹೈಕಮಾಂಡ್ ಎಂದರೇನು? ಟಿಕೆಟ್ ಎಂದರೆ ಗೊತ್ತಿಲ್ಲ ಎಲ್ಲ. ನೀವು ಪ್ರಜ್ಞಾವಂತರಾಗಿದ್ದೀರಿ ಎಲ್ಲರೂ ಅವರಿಗೆ ಧೈರ್ಯ ಹೇಳುವ ಕರ್ತವ್ಯವಾಗಬೇಕು ಈಗಾಗಲೇ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ನಮ್ಮ ವರಿಷ್ಠ ಘೋಷಣೆ ಮಾಡಿರುವಂತಹ ವ್ಯಕ್ತಿಗೆ ನಾವೆಲ್ಲ ದುಡಿಯೋಣ ಎಂದರು
ನಿಮ್ಮ ಏನೇ ಸಮಸ್ಯೆಗಳಿದ್ದರೆ ನನಗೆ ತಿಳಿಸಿ ನಾನು ಕಾಂಗ್ರೆಸ್ ಅಭ್ಯರ್ಥಿಯ ಹತ್ತಿರ ಮಾತನಾಡಿ ನಿಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುತ್ತೇನೆ ನಿಮಗೆ ಮುಂದೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದರು
ಈ ಸಭೆ ಬಂಡಾಯದ ಸಭೆಯ ಅಲ್ಲ.ಪಕ್ಷದ ವಿರುದ್ಧವೂ ಅಲ್ಲ ಇನ್ನೊಬ್ಬ ವ್ಯಕ್ತಿಯನ್ನು ಎತ್ತಿ ಕೊಟ್ಟುವ ಸಭೆಯು ಅಲ್ಲ. ಪಕ್ಷದ ಪರವಾಗಿ ಹೋಗು ವಂತಹ ಸಭೆ. ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಇದು ಅವರನ್ನು ಗೆಲ್ಲಿಸುವ ಮಹತ್ವದ ಸಭೆ ಎಂದರು
ಈ ಹಿಂದಿನ ಕಾಂಗ್ರೆಸ್ ಪಕ್ಷ ನಿಷ್ಠೆಗೆ ಮತ್ತು ದುಡಿದವರಿಗೆ ಟಿಕೇಟ್ ನೀಡುತ್ತಿತ್ತು, ಪ್ರಸ್ತುತ ಕಾಂಗ್ರೆಸ್ ಕೈ ವ್ಯಾಪಾರದಲ್ಲಿ ತೊಡಗಿ ತನ್ನ ಸಿದ್ಧಾಂತವನ್ನು ಕಳೆದು ಕೊಳ್ಳುತ್ತಿದೆ. ಪಕ್ಷಕ್ಕೆ ದುಡಿದಂತ ವ್ಯಕ್ತಿಗಳಿಗೆ ನೇರವಾಗಿ ಟಿಕೆಟ್ ಹಂಚಿಸುವ ಹಂಚಬೇಕು ಕಾಂಗ್ರೆಸ್ ಪಕ್ಷ ಇದು ರಾಷ್ಟ್ರೀಯ ಪಕ್ಷ ಬಡ ಜನತೆಯ ಪರವಾಗಿರುವಂತಹ ಪಕ್ಷ ಆಗಿದೆ ಈ ಪಕ್ಷದ ಮೇಲೆ ನಮಗೆ ತುಂಬಾ ಅಪಾರವಾದ ನಂಬಿಕೆ ಇದೆ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ವರಿಷ್ಠರು ಎಚ್ಚೆತ್ತು ಕೊಳ್ಳಬೇಕು
–ಕೆ ಪಿ ಪಿ ಅಭಿಮಾನಿ ಬಳಗದ ಯುವಕರು
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಎಸ್.ಸಿ ಘಟಕದ ತಾಲೂಕು ಅಧ್ಯಕ್ಷ ಮಾಳಮ್ಮನಹಳ್ಳಿ ವೆಂಕಟೇಶ್. ಪ್ರಥಮ ದರ್ಜೆ ಗುತ್ತಿಗೆದಾರ ರಾದ ಸುಧೀರ್ ರೆಡ್ಡಿ. ಪಲ್ಲಾಗಟ್ಟೆ ಬಸವರಾಜ್.ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗುತ್ತಿದುರ್ಗ ಪ್ರಕಾಶ್.ಗುತ್ತಿದುರ್ಗಾ ಶಿವಣ್ಣ. ಸರ್ಕಲ್ ಕಾಟಪ್ಪ.ಗುತ್ತಿದುರ್ಗ ಮಾಜಿ ಅಧ್ಯಕ್ಷರಾದ ಬಸವನಗೌಡ್ರು. ಮಾರಪ್ಪ. ನಂಜುಂಡಸ್ವಾಮಿ. ನಾಗರಾಜ್ ಕಾಂಗ್ರೆಸ್ ಪಕ್ಷದ ಎನ್.ಎಸ್.ವಿ ಘಟಕದ ತಾಲೂಕು ಅಧ್ಯಕ್ಷ ಅಕ್ಷಯ್ ಕುಮಾರ್. ಕಾಂಗ್ರೆಸ್ ಕಾರ್ಮಿಕ ಘಟಕದ ಜಂಟಿ ರಾಜ್ಯ ಕಾರ್ಯದರ್ಶಿ ಗುತ್ತಿದುರ್ಗ ರುದ್ರೇಶ್. ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಗುಡ್ಡದ ನಿಂಗನ ಹಳ್ಳಿ ನಾಗರಾಜ್. ಮಾಜಿ ಗ್ರಾ.ಪಂ ಉಪಾಧ್ಯಕ್ಷ ರಾದ ನಜೀರ್ ಅಹ್ಮದ್. ಕಾಂಗ್ರೆಸ್ ಯುವ ಅಧ್ಯಕ್ಷರಾದ ವಿಜಯ ಕೆಂಚೋಳ್. ಗೊಲ್ಲರಟ್ಟಿ ರಮೇಶ್ ಸಾಹುಕಾರ್. ಮುಸ್ಟೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ಪ್ರಕಾಶ್.ಕೆಂಚಪ್ಪ. ಗಣೇಶ್ ವೆಂಕಟೇಶ್. ಮಹಬೂಬ್ ಸೇರಿದಂತೆ ಕೆ.ಪಿ.ಪಿ ಅಭಿಮಾನಿಯ ಬಳಗದ ಆಪ್ತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು