ಜಗಳೂರು ಸುದ್ದಿ ಜಗಳೂರು :- ಏಪ್ರಿಲ್ 20 ರಂದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಬಿಫಾರಂ ನೊಂದಿಗೆ ನಾಮಪತ್ರ ಸಲ್ಲಿಸ ಲಾಗುವುದು.ಪಟ್ಟಣದ ಈಶ್ವರ ದೇವಸ್ಥಾನದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು ಎಂದು ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬಿ.ದೇವೇಂದ್ರಪ್ಪ ಅವರ ನಾಮಪತ್ರ ಸಲ್ಲಿಕೆಯ ಕುರಿತು ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ ದರು.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಶಕ್ತಿ ನನಗೆ ಆತ್ಮ ಸ್ಥೈರ್ಯ ತುಂಬಿದೆ.ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ.
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನದ ಕೊಡುಗೆ ಯಾಗಿ ರುವ ಪವಿತ್ರವಾದ ತಮ್ಮ ಮತ ಕೇವಲ ದೇವೇಂದ್ರಪ್ಪ ಗೆಲುವಿಗೆ ಮಾತ್ರವಲ್ಲ ರಾಜ್ಯದಲ್ಲಿ ಬಡ ಶ್ರಮಿಕ ವರ್ಗದ ಸಾಮಾಜಿಕ ನ್ಯಾಯ ಕಲ್ಪಿಸಲು ಕಾಂಗ್ರೆಸ್ ಪಕ್ಷದ ಆಡಳಿತಕ್ಕೆ ಸಾಕ್ಷಿಯಾಗಬೇಕು ಎಂದರು.
ವರಿಷ್ಠರಿಗೆ ನಾನು ಚಿರ ಋಣಿ:- ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಗುರುತಿಸಿ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಿದ್ದು.ಪಕ್ಷ ಸಿದ್ದಾಂತಗಳಿಗೆ ಬದ್ದನಾಗಿರುವೆ.ಅವಕಾಶ ಕಲ್ಪಿಸಿದ ವರಿಷ್ಠರಿಗೆ ಚಿರ ಋಣಿಯಾಗಿ ರುವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಕೆಪಿಸಿಸಿ ಎಸ್ ಟಿ ಘಟಕದ ಅಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ 25 ವರ್ಷ ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕನಾಗಿದ್ದು.ಈ ಬಾರಿ ಪ್ರಬಲ ಆಕಾಂಕ್ಷಿಯಾಗಿ ಅರ್ಜಿಸಲ್ಲಿಸಿದ್ದೆ ಆದರೆ.ಟಿಕೇಟ್ ಸಿಕ್ಕಿಲ್ಲ ಎಂಬ ನೋವಿದೆ.ಆದರೆ ವ್ಯಕ್ತಿ ಮುಖ್ಯವಲ್ಲ,ಪಕ್ಷ ಮುಖ್ಯ ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ಶ್ರಮಿಸುವೆ.ದೇಶದ ಸುಭೀಕ್ಷೆಗೆ ಜಾತ್ಯಾತೀತ ಸಾಮರಸ್ಯದ ಬದುಕಿಗೆ ಕಾಂಗ್ರೆಸ್ ಆಡಳಿತ ಅವಶ್ಯಕವಾಗಿದೆ ಎಂದರು.ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ,ಪಕ್ಷೇತರ ಅಭ್ಯರ್ಥಿ ಎಂದು ಘೋಷಿಸಿರುವ ಮಾಜಿ ಶಾಸಕ ಎಚ್.ಪಿ. ರಾಜೇಶ್ ಇಬ್ಬರೂ ಕಾಂಗ್ರೆಸ್ ಪಕ್ಷದಿಂದ ಗೆಲುವು ಸಾಧಿಸಿದ್ದರು ಅವರನ್ನು ಸಮರ್ಥವಾಗಿ ಅಚ್ಚುಕಟ್ಟಿನಿಂದ ಸಮರ್ಥವಾಗಿ ಚುನಾವಣೆ ಎದುರಿಸಬೇಕಿದೆ.ದೇಶದಲ್ಲಿ ಬಿಜೆಪಿ ಪಕ್ಷದ ಆಡಳಿತಕ್ಕೆ ಮುಕ್ತಿನೀಡಬೇಕು.ಬೂತ್ ಮಟ್ಟದಿಂದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಗೆಲ್ಲುವವರೆಗೆ ನಿದ್ರೆಗೆಡಬೇಕಿದೆ ಎಂದು ಕರೆ ನೀಡಿದರು.
ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತ ನಾಡಿ,ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತದಾರರ ವ್ಯಾಪಕ ಬೆಂಬಲ ವಿದೆ.2023ರ ವಿಧಾನಸಭಾ ಚುನಾವಣೆಯಲ್ಲಿ 150 ಕ್ಕೂ ಅಧಿಕ ಸೀಟುಗಳ ಗೆಲುವಿನೊಂದಿಗೆ ಆಡಳಿತಕ್ಕೆ ಬರುವುದು ನಿಶ್ಚಿತ ಕಾರ್ಯಕರ್ತರು ವೈಮನಸ್ಸು ತೊರೆದು ಪಕ್ಷದ ಗೆಲುವಿಗೆ ಕೈಜೋಡಿಸಿ ಎಂದರು.
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಷಂಷೀರ್ ಅಹಮ್ಮದ್,ಎಸ್.ಮಂಜುನಾಥ್,ವಕೀಲ ಪ್ರಕಾಶ್, ಗುರುಸಿದ್ದಪ್ಪ ಮಹೇಶ್,ಸಿ.ತಿಪ್ಪೇಸ್ವಾಮಿ,ಪಲ್ಲಾಗಟ್ಟೆ ಶೇಖರಪ್ಪ,ಸಾವಿತ್ರಮ್ಮ, ಓಮಣ್ಣ,ಗೋಡೆ ಪ್ರಕಾಶ್, ರಮೇಶ್ ರೆಡ್ಡಿ .ಐಸಿಸಿ ಯುವ ಕಾಂಗ್ರೆಸ್ ಅಧ್ಯಕ್ಷ ನಿಶಾನ್,ಅಹಮ್ಮದ್ ಅಲಿ,ಶಕೀಲ್ ಅಹಮ್ಮದ್ ,ಬಸವನಗೌಡ ಸೇರಿದಂತೆ ಸಾವಿರಾರು ಕಾರ್ಯಕರ್ತರು ಇದ್ದರು.