ಪ್ರಜಾ ನಾಯಕ ಸುದ್ದಿ ದಾವಣಗೆರೆ -: ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 17 ರಂದು ಜಿಲ್ಲೆಯ 7 ಕ್ಷೇತ್ರಗಳಿಂದ ಒಟ್ಟು 35 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಸಲ್ಲಿಕೆಯಾದ ನಾಮಪತ್ರಗಳಲ್ಲಿ ಜಗಳೂರು 3, ಹರಿಹರ 2, ದಾವಣಗೆರೆ ಉತ್ತರ 8, ದಕ್ಷಿಣ 5, ಮಾಯಕೊಂಡ 11, ಚನ್ನಗಿರಿ 3 ಮತ್ತು ಹೊನ್ನಾಳಿ 3 ನಾಮಪತ್ರಗಳು ಸೇರಿವೆ.
ನಾಮಪತ್ರಗಳ ವಿವರ; 103.ಜಗಳೂರು ಪ.ಪಂ ಮೀಸಲು ಕ್ಷೇತ್ರ ಬಿಜೆಪಿ ಯಿಂದ ಎಸ್.ವಿ.ರಾಮಚಂದ್ರ 2 ನಾಮಪತ್ರ, ಬಿಜೆಪಿ ಇಂದಿರಾ ಎಸ್.ಆರ್ 1 ನಾಮಪತ್ರ ಸಲ್ಲಿಕೆ. 105. ಹರಿಹರ ಸಾಮಾನ್ಯ ಕ್ಷೇತ್ರದಿಂದ ಜಾತ್ಯಾತೀತ ಜನತಾದಳದಿಂದ ಹೆಚ್.ಎಸ್ ಶಿವಶಂಕರ್ 2 ನಾಮಪತ್ರ, 106.ದಾವಣಗೆರೆ ಉತ್ತರ ಸಾಮಾನ್ಯ ಎಂ.ಜಿ.ಶ್ರೀಕಾಂತ್ ಪಕ್ಷೇತರ, ನಾಗಾರ್ಜುನ್ ಜಿ.ಆರ್. ಉತ್ತಮ ಪ್ರಜಾಕೀಯ ಪಕ್ಷ, ಎಸ್.ಎಸ್.ಮಲ್ಲಿಕಾರ್ಜುನ್ ಭಾರತೀಯ ಕಾಂಗ್ರೇಸ್ ಪಕ್ಷ 2 ನಾಮಪತ್ರ, ಕೆ.ಮಲ್ಲಣ್ಣ ಕರ್ನಾಟಕ ರಾಷ್ಟ್ರ ಸಮಿತಿಯಿಂದ 2 ನಾಮಪತ್ರ, ಕೆ.ಹೆಚ್.ನಾಗರಾಜ್ ಭಾರತೀಯ ಜನತಾ ಪಾರ್ಟಿ, ಮಲ್ಲಿಕಾರ್ಜುನಪ್ಪ ಕೆ.ಎಂ. ಪಕ್ಷೇತರ ಸೇರಿ 8 ನಾಮಪತ್ರಗಳು.
107.ದಾವಣಗೆರೆ ದಕ್ಷಿಣ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಶಾಮನೂರು ಶಿವಶಂಕರಪ್ಪ 2 ನಾಮಪತ್ರ, ಜೆ.ಡಿ.ಎಸ್ ನಿಂದ ಎಂ.ರಾಜಾಸಾಬ್, ಬಿ.ಜೆ.ಪಿ.ಯಿಂದ ಅಜಯಕುಮಾರ್ ಬಿ.ಜಿ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಇಸ್ಮಾಯಿಲ್ ಜಬೀವುಲ್ಲಾ ಸೇರಿದಂತೆ 5 ನಾಮಪತ್ರಗಳು ಸಲ್ಲಿಕೆಯಾಗಿವೆ.
108.ಮಾಯಕೊಂಡ ಪ.ಜಾ.ಮೀಸಲು ಪಕ್ಷೇತರರಾಗಿ ವಾಗೀಶ್ ಬಿ.ಎಂ. 2 ನಾಮಪತ್ರ, ಲೋಕೇಶ್ ಪಿ.ಡಿ ಪಕ್ಷೆತರ, ಎಂ.ಬಸವರಾಜನಾಯ್ಕ ಬಿಜೆಪಿ, ಸವಿತಾಬಾಯಿ ಮಲ್ಲೇಶನಾಯ್ಕ ಪಕ್ಷೇತರ, ಸವಿತಾಬಾಯಿ ಮಲ್ಲೇಶನಾಯ್ಕ ಜೆಡಿಎಸ್, ಸೋಮಶೇಖರ್ ಬಿ. ಕರ್ನಾಟಕ ರಾಷ್ಟ್ರ ಸಮಿತಿ, ಹೆಚ್.ಆನಂದಪ್ಪ ಜೆಡಿಎಸ್, ಜಿ.ಎಸ್.ಶ್ಯಾಮ್ ಬಿ.ಜೆ.ಪಿ., ಚೇತನ್ಕುಮಾರ್ ನಾಯ್ಕ ಉತ್ತಮ ಪ್ರಜಾಕೀಯ, ಕೆ.ಎಸ್.ಬಸವರಾಜ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸೇರಿದಂತೆ ಇದುವರೆಗೆ 11 ನಾಮಪತ್ರಗಳು ಸಲ್ಲಿಕೆಯಾಗಿವೆ.
109.ಚನ್ನಗಿರಿ ಪಕ್ಷೇತರ ಎಂ.ವಿ.ಮಲ್ಲಿಕಾರ್ಜುನ, ಬಿ.ಜೆ.ಪಿ. ಹೆಚ್.ಎಸ್.ಶಿವಕುಮಾರ್, ಬಿ.ಎಸ್.ಪಿ.ಯಿಂದ ಪ್ರವೀಣ್ ಹೆಚ್ ಸೇರಿ 3, 110. ಹೊನ್ನಾಳಿ ಸಾಮಾನ್ಯ ಕ್ಷೇತ್ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಿಂದ ಶಾಂತನಗೌಡ ಡಿ.ಜಿ, ಬಿ.ಜೆ.ಪಿ.ಯಿಂದ ಎಂ.ಪಿ ರೇಣುಕಾಚಾರ್ಯ, ಉತ್ತಮ ಪ್ರಜಾಕೀಯ ಪಕ್ಷದಿಂದ ಗಣೇಶ್ ಬಿ.ಎ ಒಟ್ಟು 3 ನಾಮಪತ್ರಗಳು ಸಲ್ಲಿಕೆಯಾಗಿವೆ.