ಪ್ರಜಾ ನಾಯಕ ಸುದ್ದಿ ಜಗಳೂರು -: ಪಟ್ಟಣದ ಕೆನರಾ ಬ್ಯಾಂಕ್ ಮೊದಲನೆ ಮಹಡಿಯ ಮೇಲೆ ಬಿಜೆಪಿ ಪಕ್ಷದ ಚುನಾವಣಾ ನೂತ ನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿ ನಂತರ ಸಂಸದ ಜಿ ಸಿದ್ದೇಶ್ವರ ಅವರು ಮಾತನಾಡಿ
ಚುನಾವಣೆಗೆ ಸಹಕಾರಿಯಾಗಲಿ ಎಂದು ಪಕ್ಷದ ವತಿಯಿಂದ ಕಚೇರಿಯನ್ನು ತೆರೆಯಲಾಗಿದ್ದು ಕಾರ್ಯಕರ್ತರು ಮತ್ತು ಪದಾಧಿ ಕಾರಿಗಳಿಗೆ ಅನುಕೂಲವಾಗಲಿದೆ ಎಂದರು.
ಜಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಯಾಗಿರುವ ರಾಮಚಂದ್ರ ಸುಮಾರು 3500 ಕೋಟಿ ಅನುದಾನ ದ ತಂದು ಅಭಿವೃದ್ದಿಪಡಿಸಿದ್ದಾರೆ ಮತ್ತು 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ನೀರಾವರಿ ಯೋಜನೆ ಯ ಕಾಮಗಾರಿಗಳು ಪ್ರಗತಿಯಲ್ಲಿವೆ. 424 ಕೋಟಿ ರೂ ವೆಚ್ಚದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಾಗಿದೆ ಮುಂದಿನ ದಿನಗಳಲ್ಲಿ ಈ ಮೂರು ಯೋಜನೆಗಳು ಸಂಪೂರ್ಣ ವಾಗಿ ಕಾರ್ಯರೂಪಕ್ಕ ಬರಲಿವೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹಲವಾರು ಜನಪರ ಯೋಜಗಳನ್ನು ಜಾರಿಗೆ ತಂದು ದೇಶವನ್ನು ಅಭಿವೃದ್ದಿಪಡಿಸಿದರೆ ರಾಜ್ಯದಲ್ಲಿ ಮುಖ್ಯ ಮಂತ್ರಿ ಬೋಮ್ಮಯಿ ಸಾಕಷ್ಟು ಅಭಿವೃದ್ದಿ ಪಡಿಸಿ ದ್ದಾರೆ ಇವರ ಯೋಜನೆಗಳೆ ಪ್ರತಿಯೊಂದು ಕ್ಷೇತ್ರಕ್ಕೂ ಶ್ರೀರಕ್ಷೆ ಯಾಗಿದ್ದು ರಾಜ್ಯದಲ್ಲಿ 150 ಸ್ಥಾನ ಗೆದ್ದು ಮತ್ತೆ ಅಧಿಕಾರದ ಚುಕ್ಕಣಿ ಹಿಡಿಯಲಿದ್ದೇವೆ ಎಂದು ಹೇಳಿದರು.
” ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ ಕ್ಷೇತ್ರದಲ್ಲಿ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು ಕ್ಷೇತ್ರದ ಜನತೆ ನನ್ನ ನ್ನು ಕೈ ಬಿಡುವುದಿಲ್ಲ ನಾನು ಈ ಗಾಗಲೆ ಮೂರು ಭಾರಿ ಗೆದ್ದಿದ್ದೆನೆ ನಾಲ್ಕನೆ ಭಾರಿಯು ನಾನೇ ಗೆದ್ದೇ ಗೆಲ್ಲುತ್ತೇನೆ ಎಂದು ವಿರೋಧ ಪಕ್ಷದ ಅಭ್ಯರ್ಥಿಗಳಿಗೆ ಸವಾಲಾಕಿದರು”
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಪಲ್ಲಾಗಟ್ಟೆ ಮಹೇಶ್, ಜಿಲ್ಲಾ ಉಪಾಧ್ಯಕ್ಷ ದಾಸಕರಿಯಪ್ಪ, ಪ್ರಧಾನ ಕಾರ್ಯದರ್ಶಿ ನಾಗರಾಜ್. ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ಆರುಂಡಿ ನಾಗರಾಜ್. ಶಾಸಕರ ಪತ್ನಿ ಇಂದಿರಾ ರಾಮಚಂದ್ರ ಮಾಜಿ ಜಿ.ಪಂ ಸದಸ್ಯರಾದ ಜಯಲಕ್ಷ್ಮಿ ಮಹೇಶ್, ರಶ್ಮಿ ರಾಜ್ಪಪ, ಎಸ್.ಕೆ. ಮಂಜುನಾಥ್, ಸಂಸದರ ಪುತ್ರ ಅನಿತ್ ಕುಮಾರ್, ಮುಖಂಡ ರಾದ ಸೊಕ್ಕೆ ನಾಗರಾಜ್,ಜೆ.ವಿ.ನಾಗರಾಜ್,ಗಡಿಮಾಕುಂಟೆ ಸಿದ್ದೇಶ್, ರಾಜೇಶ್, ಪಣಿಯಾಪುರ ಲಿಂಗರಾಜ್, ಬಿಸ್ತವಳ್ಳಿ ಬಾಬು ,ಕುಬೇರಪ್ಪ , ಸತೀಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.