ಪ್ರಜಾ ನಾಯಕ ಸುದ್ದಿ ದಾವಣಗೆರೆ -: ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುತ್ತಿದ್ದು ಏಪ್ರಿಲ್ 21 ರಂದು ನಡೆಸಿದ ನಾಮಪತ್ರಗಳ ಪರಿಶೀಲನೆಯಲ್ಲಿ ಜಿಲ್ಲೆಯ 7 ಕ್ಷೇತ್ರಗಳಿಂದ 106 ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಏಪ್ರಿಲ್ 13 ರಿಂದ 20 ರ ವರೆಗೆ ಒಟ್ಟು 164 ನಾಮಪತ್ರಗಳನ್ನು ಸ್ವೀಕರಿಸಲಾಗಿತ್ತು. ಇದರಲ್ಲಿ 153 ಪುರುಷ ಹಾಗೂ 11 ಮಹಿಳೆ ಯರಿಂದ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ನಂತರ 99 ಪುರುಷ, 7 ಮಹಿಳಾ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಒಟ್ಟು ಕ್ರಮಬದ್ದ ನಾಮಪತ್ರಗಳಲ್ಲಿ ಬಿಜೆಪಿ 7, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 7, ಆಮ್ ಅದ್ಮಿ 6, ಬಿಎಸ್ಪಿ 4, ಜೆಡಿಎಸ್ 7, ಇತರೆ ಪಕ್ಷಗಳು 20 ಹಾಗೂ 55 ಪಕ್ಷೇತರ ಅಭ್ಯರ್ಥಿಗಳ ನಾಮಪತ್ರಗಳು ಕ್ರಮಬದ್ದವಾಗಿವೆ.
ಕ್ಷೇತ್ರವಾರು ಕ್ರಮಬದ್ದ ನಾಮಪತ್ರಗಳನ್ವಯ ಜಗಳೂರು ಬಿಜೆಪಿ 1, ಕಾಂಗ್ರೆಸ್ 1, ಜೆಡಿಎಸ್ 1, ಇತರೆ ಪಕ್ಷ 1 ಮತ್ತು ಪಕ್ಷೇತರ 8 ಅಭ್ಯರ್ಥಿಗಳು ಸೇರಿ 12, ಹರಿಹರ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಬಿಎಸ್ಪಿ 1, ಜೆಡಿಎಸ್ 1, ಇತರೆ ಪಕ್ಷ 2, ಪಕ್ಷೇತರ 5 ಸೇರಿ 12, ದಾವಣಗೆರೆ ಉತ್ತರ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಜೆಡಿಎಸ್ 1, ಇತರೆ ಪಕ್ಷ 3, ಪಕ್ಷೇತರ 9 ಸೇರಿ 16, ದಾವಣಗೆರೆ ದಕ್ಷಿಣ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಬಿಎಸ್ಪಿ 1, ಜೆಡಿಎಸ್ 1, ಇತರೆ ಪಕ್ಷ 5, ಪಕ್ಷೇತರ 13 ಸೇರಿ 23, ಮಾಯಕೊಂಡ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಜೆಡಿಎಸ್ 1, ಇತರೆ ಪಕ್ಷ 4, ಪಕ್ಷೇತರ 9 ಸೇರಿ 17, ಚನ್ನಗಿರಿ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಬಿಎಸ್ಪಿ 1, ಜೆಡಿಎಸ್ 1, ಇತರೆ ಪಕ್ಷ 3, ಪಕ್ಷೇತರ 6 ಸೇರಿ 14, ಹೊನ್ನಾಳಿ ಬಿಜೆಪಿ 1, ಕಾಂಗ್ರೆಸ್ 1, ಆಮ್ ಆದ್ಮಿ 1, ಬಿಎಸ್ಪಿ 1, ಜೆಡಿಎಸ್ 1, ಇತರೆ ಪಕ್ಷ 2, ಪಕ್ಷೇತರ 5 ಸೇರಿ ಒಟ್ಟು 12 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ದವಾಗಿವೆ.
ತಿರಷ್ಕೃತ; 9 ನಾಮಪತ್ರಗಳು ತಿರಷ್ಕೃತವಾಗಿದ್ದು ಇದರಲ್ಲಿ ಹರಿಹರ 1, ಮಾಯಕೊಂಡ 7, ಚನ್ನಗಿರಿ 1 ಸೇರಿವೆ ಎಂದು ಅವರು ತಿಳಿಸಿದ್ದಾರೆ.