ಪ್ರಜಾ ನಾಯಕ ಸುದ್ದಿ ಜಗಳೂರು :- ರಾಜ್ಯದ 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ 140ಕ್ಕೂ ಅಧಿಕ ಬಿಜೆಪಿ ಅಭ್ಯರ್ಥಿ ಗಳು ಗೆಲುವು ನಿಶ್ಚಿತ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ವರೆಗೆ ಬಿಜೆಪಿ ಅಭ್ಯರ್ಥಿ ಎಸ್ ವಿ.ರಾಮಚಂದ್ರ ಅವರ ಪರ ಚುನಾವಣೆ ಪ್ರಚಾರ ರೋಡ್ ಶೋ ನಲ್ಲಿ ಭಾಗವಹಿಸಿ ಬಹಿರಂಗಸಭೆ ಯನ್ನುದ್ದೇಶಿಸಿ ಅವರು ಮಾತನಾಡಿದರು.
” ಜಗಳೂರಿನಲ್ಲಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿ ಕ್ಷೇತ್ರ ವನ್ನು ಅಭಿವೃದ್ದಿಪಡಿಸಿರುವ ಶಾಸಕ ಎಸ್.ವಿ.ರಾಮಚಂದ್ರ ಅವರು ಈ ಬಾರಿ 50000 ಕ್ಕೂ ಅಧಿಕ ಮತಗಳ ಅಂತರದಲ್ಲಿ ಗೆಲುವು ಖಚಿತ.ಇದಕ್ಕೆ ಬಿರು ಬಿಸಿಲನ್ನು ಲೆಕ್ಕಿಸದೆ ರೋಡ್ ಶೋ ನಲ್ಲಿ ಭಾಗ ವಹಿಸಿರುವ ಕಾರ್ಯಕರ್ತರ ಉತ್ಸಾಹವೇ ಸಾಕ್ಷಿಯಾಗಿದೆ ಎಂದು ಶ್ಲಾಘಿಸಿದರು “
ಪ್ರಧಾನಿ ಮೋದಿಜಿ ಅಮಿತ್ ಷಾ ಸೇರಿದಂತೆ ಸಾಮೂಹಿಕ ನಾಯಕತ್ವದ ಮುಂದೆ ಕಾಂಗ್ರೆಸ್ ಪಕ್ಷರ ರಾಹುಲ್ ಗಾಂಧಿ ಚುನಾವಣಾ ರಣತಂತ್ರ ಏನೂ ನಡೆಯದು.ಮತ್ತೊಮ್ಮೆ ದೇಶದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಪಕ್ಷ ಆಡಳಿತಕ್ಕೆ ಬರುತ್ತದೆ.ಕಮಲದ ಗುರುತಿಗೆ ಮತನೀಡಬೇಕು ಎಂದು ಮತಯಾಚಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ್ ಮಾತನಾಡಿ,ಪ್ರಧಾನಿ ನರೇಂದ್ರ ಮೋದಿಜಿ ಅವರ ಜನಪರ ಯೋಜನೆಗಳು ಹಾಗೂ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರು, ಬಡವರಿಗೆ ಸೂರು,ಒಳಚರಂಡಿ, ಅಭಿವೃದ್ದಿ ಕಾಮಗಾರಿಗಳನ್ನು ಮತದಾರರಿಗೆ ಜಾಗೃತಿ ಮೂಡಿಸಿ ಬೂತ್ ಮಟ್ಟದಿಂದ ಕಾರ್ಯ ಕರ್ತರು ಬಿಜೆಪಿ ಪಕ್ಷ ಕಮಲದ ಗುರುತಿಗೆ ಮತಚಲಾಯಿಸ ಬೇಕು.ಮತ್ತೊಮ್ಮೆ ಹೆಚ್ಚು ಮತಗಳ ಅಂತರದಿಂದ ಎಸ್ ವಿ.ರಾಮ ಚಂದ್ರನನ್ನು ಗೆಲ್ಲಿಸಿ ಎಂದು ಕರೆ ನೀಡಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನಿಕಟ ಪೂರ್ವ ಮುಖ್ಯ ಮಂತ್ರಿ ಯಡಿಯೂರಪ್ಪನವರು ಕೊಟ್ಟ ಮಾತಿನಂತೆ ಜಗಳೂರು ಕ್ಷೇತ್ರವನ್ನು ದತ್ತುಪಡೆದು ₹3500 ಕೋಟಿ ವೆಚ್ಚದಲ್ಲಿ ಎರಡು ಶಾಶ್ವತ ನೀರಾವರಿ ಯೋಜನೆಗಳಾದ ₹650 ಕೋಟಿ ವೆಚ್ಚದಲ್ಲಿ 57 ಕೆರೆ ತುಂಬಿಸುವ ಯೋಜನೆ ಸಾಕಾರಗೊಂಡು ಪೈಪ್ ಲೈನ್ ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.ಭದ್ರಾಮೇಲ್ದಂಡೆ ಯೋಜನೆ ಯಡಿ 45 ಸಾವಿರ ಎಕರೆ ಪ್ರದೇಶ ನೀರಾವರಿ ಗೊಳ್ಳಲಿದೆ. ಬರದ ನಾಡು ಹಸಿರುನಾಡಾಗಲು ಹಾಗೂ ಸಮಗ್ರ ಅಭಿವೃದ್ದಿಗೆ ಸಹಕರಿ ಸಿದ ಸರದಾರರು ಎಂದು ಕೃತಜ್ಞತೆ ಸಲ್ಲಿಸಿದರು.
” ಜಗಳೂರು ಪಟ್ಟಣದ ಗ್ರಾಮ ದೇವತೆ ಮಾರಿಕಾಂಭ ದೇವಿ ಉತ್ಸಮೂರ್ತಿ ಗಂಗೆ ಪೂಜೆ ಮುಗಿಸಿಕೊಂಡು ಮೆರವಣಿಗೆ ಮೂಲಕ ಬರುವುದು ಹಾಗೂ ನನ್ನ ಚುನಾವಣೆ ಪ್ರಚಾರದ ವೇಳೆ ಎದುರಗಡೆ ಆಗಮಿಸಿರುವುದು ಗೆಲುವಿನ ಶುಭ ಸಂಕೇತ ಮತದಾರರು ನನಗೆ ಆಶೀರ್ವಾದಿಸ ಬೇಕು ಎಂದು ಮತ ಯಾಚಿಸಿದರು.”
– ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ
ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಬಿಜೆಪಿ ಪಕ್ಷದ ಅಭಿಮಾನಿಗಳು ಉರುಮೆ ಮತ್ತು ಡೊಳ್ಳಿನ ಶಬ್ದಕ್ಕೆ ಹೆಜ್ಜೆ ಆಗುತ್ತಿರುವುದು ಸಾಮಾನ್ಯವಾಗಿತ್ತು
” ನಾಳೆ ಬೆಳಿಗ್ಗೆ 11 ಗಂಟೆಗೆ ಜಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ ರಾಮಚಂದ್ರ ಅವರ ಪರವಾಗಿ ಚಲನಚಿತ್ರ ನಟ ಹಾಗೂ ಕರ್ನಾಟಕ ಅಭಿನಯ ಚಕ್ರವರ್ತಿ ಹಾಗೂ ಬಾದ್ ಷ್ ಕಿಚ್ಚ ಸುದೀಪ್ ಆಗಮಿಸಿ ಪ್ರವಾಸಿ ಮಂದಿರ ದಿಂದ ಮಹಾತ್ಮ ಗಾಂಧೀಜಿ ವೃತ್ತ ಸೇರಿದಂತೆ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದವರೆಗೆ ರೋಡ್ ಶೋ ಮೆರವಣಿಗೆ ಮೂಲಕ ಮತಯಾಚನೆ ಮಾಡಿ ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಪಕ್ಷದ ಮುಖಂಡರಾದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಿ.ವಿ ನಾಗಪ್ಪ. ಬಿಜೆಪಿ ಮುಖಂಡರಾದ ಬಿದರಿಕೆರೆ ರವಿಕುಮಾರ್. ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಸ್ ಕೆ ಮಂಜುನಾಥ್. ದ್ಯಾಮನಗೌಡ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ “
ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೆಎಸ್ ನವೀನ್,ಕ್ಷೇತ್ರ ಉಸ್ತುವಾರಿ ಆರುಂಡಿ ನಾಗರಾಜ್,ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಜಿಲ್ಲಾ ಉಪಾಧ್ಯಕ್ಷ ಡಿ.ವಿ.ನಾಗಪ್ಪ,ಇಂದಿರಾ ರಾಮಚಂದ್ರ,ಜಯಲಕ್ಷ್ಮಿ ಮಹೇಶ್,ದ್ಯಾಮನಗೌಡ,ರಶ್ಮಿ ರಾಜಪ್ಪ,ಸೊಕ್ಕೆ ನಾಗರಾಜ್,ಸೇರಿದಂತೆ ಮುಖಂಡರುಗಳು ಭಾಗವಹಿಸಿದ್ದರು.