ಪ್ರಜಾ ನಾಯಕ ವಿಶೇಷ ಸುದ್ದಿ :- ಜಗಳೂರು ವಿಧಾನಸಭಾ ಕ್ಷೇತ್ರ ದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಪಕ್ಷೇತರ ನಡುವೆ ಹಣಾಹಣಿ ತ್ರಿಕೋನ ಸ್ಪರ್ಧೆಗೆ ಕೊಂಡುಕುರಿ ನಾಡು ಸಾಕ್ಷಿ ಎರಡು ತಾಲ್ಲೂಕು ಗಳಲ್ಲಿ ಕ್ಷೇತ್ರವನ್ನು ವಿಸ್ತರಿಸಿಕೊಂಡಿರುವ ಕೊಂಡುಕುರಿ ವಿಧಾನ ಸಭಾ ಕ್ಷೇತ್ರದಲ್ಲಿ ಚುನಾವಣೆ ಕಾವು ಬೇಸಿಗೆಯ ಬಿಸಿಲನ್ನು ಮೀರಿ ಸುವಷ್ಟು ರಂಗೇರುತ್ತಿದ್ದು ತ್ರೀಕೋನ ಸರ್ಧೆಗೆ ಸಾಕ್ಷಿಯಾಗಿದೆ.
ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕ ರಾಮಚಂದ್ರಪ್ಪ, ಕಾಂಗ್ರೆಸ್ ಪಕ್ಷದಿಂದ ಬಂಡಾಯವೆದ್ದು ಇದೀಗಾ ಪಕ್ಷೇತರವಾಗಿ ಸ್ಪರ್ಧಿಸಿರುವ ಮಾಜಿ ಶಾಸಕ ರಾಜೇಶ್ ಹಾಗೂ ಕಾಂಗ್ರಸ್ ಪಕ್ಷದಿಂದ ಬಿ ದೇವೇಂದ್ರಪ್ಪನವರು ಹೀಗೆ ಮೂವರು ನಾಮಪತ್ರ ಸಲ್ಲಿಸಿ ಚುನಾವಣೆ ಪ್ರಚಾರಕ್ಕೆ ಇಳಿದಿದ್ದಾರೆ. ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪೈಪೋಟಿಯಲ್ಲಿ ಅಭ್ಯರ್ಥಿಗಳು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದು, ಮತದಾರರನ್ನು ಸೆಳೆಯಲು ತಮ್ಮದೆ ಆದ ಕಾರ್ಯತಂತ್ರ ರೂಪಿಸಿಕೊಂಡಿದ್ದಾರೆ.
ಚುನಾವಣೆಗಳ ಇತಿಹಾಸ:- ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ನೇರಾ ಹಣಾಹಣಿ ಇದೆ. 2008ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ 41961 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ ವಿರುದ್ಧ ಜಯಗಳಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ 37528 ಮತಗಳನ್ನು ಪಡೆದು ಸೋಲುಂಡಿದ್ದರು. 2013 ಚುನಾವಣೆ ಫಲಿತಾಂಶ ನೋಡುವುದಾದರೆ ಈ ಕ್ಷೇತ್ರ ಕಾಂಗ್ರೆಸ್ ವಶವಾಗಿತ್ತು. ಕಾಂಗ್ರೆಸ್ ಅಭ್ಯರ್ಥಿಹೆಚ್ ಪಿ ರಾಜೇಶ್ 77805 ಮತಗಳನ್ನು ಪಡೆದು ಗೆಲುವು ಸಾಧೀಸಿದ್ದರೆ ಕೆಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಎಸ್ ವಿ ರಾಮಚಂದ್ರ 40915 ಮತಗಳನ್ನು ಪಡೆದು ಪರಭವಗೊಂಡಿ ದ್ದರು. ಆ ವೇಳೆ ಇಲ್ಲಿ ಬಿಜೆಪಿ ಹೀನಾಯವಾಯಿ ಸೋಲುಂಡಿತ್ತು. 2018ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ 78948 ಮತಗಳನ್ನು ಪಡೆದು ಕಾಂಗ್ರೆಸ್ ಅಭ್ಯರ್ಥಿ ಹೆಚ್ ಪಿ ರಾಜೇಶ್ ವಿರುದ್ಧ ಗೆಲುವುದು ಸಾಧಿಸಿದ್ದರು. ಹೆಚ್ ಪಿ ರಾಜೇಶ್ 49727 ಮತಗಳನ್ನು ಪಡೆದು ಸೋಲು ಕಂಡಿದ್ದರು.
“ಜಗಳೂರು ವಿಧಾನಸಭಾ ಮತಕ್ಷೇತ್ರ ವಿವರಮತದಾರರ ಮಾಹಿತಿ:- ಕ್ಷೇತ್ರದಲ್ಲಿ 1,91,638 ಒಟ್ಟು ಮತದಾರರಿದ್ದು, 97,048 ಪುರುಷ ಮತದಾರರು, 94,510 ಮಹಿಳಾ ಮತದಾರರು, 10 ತೃತಿಯ ಲಿಂಗಿಗಳು ಮತದಾರರಿದ್ದಾರೆ.”
ಎರಡು ತಾಲ್ಲೂಕು ಒಂದು ಕ್ಷೇತ್ರ:- ಜಗಳೂರು ವಿಧಾನಸಭಾ ಕ್ಷೇತ್ರವು ತಾಲ್ಲೂಕು ಒಳಗೊಂಡು ಗಡಿ ಹಂಚಿಕೊಂಡಿರುವ ವಿಜಯನಗರ ಜಿಲ್ಲೆ ಹರಪ್ಪನಹಳ್ಳಿ ತಾಲ್ಲೂಕಿನ ಏಳು ಪಂಚಾಯಿತಿ ಯನ್ನು ಒಳಗೊಂಡಿದೆ. ಜಗಳೂರು ಕ್ಷೇತ್ರ ಎಸ್ಟಿ ಮೀಸಲು ಕ್ಷೇತ್ರ ವಾಗಿದ್ದು, 1,89,209 ಮತದಾರರಿದ್ದಾರೆ. ಈ ಪೈಕಿ 95,928, ಪುರುಷರು, 93,269 ಮಹಿಳಾ ಮತದಾರರು, 71ಸೇವಾ ಮತ ದಾರರು ಹಾಗೂ 12 ತೃತಿಯಲಿಂಗಿಗಳಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 262 ಮತಗಟ್ಟೆಗಳಿದ್ದು, ಎರಡು ತಾಲ್ಲೂಕುಗಳಲ್ಲಿ ಒಟ್ಟು 178 ಹಳ್ಳಿಗಳು ಸೇರಿದ್ದು, ಹೀಗೆ ವಿಶಾಲ ಬೌಗೋಳಿಕ ವ್ಯಾಪ್ತಿಯನ್ನು ಹೊಂದಿದ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಕ್ಷೇತ್ರ ಸಂಚಾರ ಕ್ಕೆ ಹರಸಾಹಸ ಪಡುವಂತಾಗಿದೆ.
ತ್ರಿಕೋನ ಸ್ಪರ್ಧೆ:- ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್, ಪಕ್ಷೇತರ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಳೆದ ಚುನಾವಣೆ ಪರಾಜಿತಗೊಂಡಿ ರುವ ಮಾಜಿ ಶಾಸಕ ರಾಜೇಶ್ ಪಕ್ಷೇತರ ಅಭ್ಯರ್ಥಿಯಾಗಿ ಗೆಲ್ಲಲು ಪಣತೋಟ್ಟರೇ ಹಾಲಿ ಶಾಸಕ ರಾಮಚಂದ್ರಪ್ಪನವರು ನಾಲ್ಕನೇ ಬಾರಿ ಅದೃಷ್ಟದ ಪರೀಕ್ಷೆಗೆ ಮುಂದಾಗಿದ್ದಾರೆ ಅಲ್ಲದೇ ಕೈ ಅಭ್ಯರ್ಥಿ ದೇವೇಂದ್ರಪ್ಪನವರು ಒಂದು ವರ್ಷದಿಂದ ಕ್ಷೇತ್ರ ವ್ಯಾಪಿ ಸಂಚರಿಸಿ ಗೆಲ್ಲುವ ರೆಸ್ನಲ್ಲಿದ್ದಾರೆ.
ಬಿಜೆಪಿಯಲ್ಲಿ ಹಾಲಿ ಶಾಸಕ ರಾಮಚಂದ್ರಪ್ಪ, ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ರಾಜೇಶ್, ಇಬ್ಬರನ್ನು ಕೈ ಅಭ್ಯರ್ಥಿ ದೇವೇಂದ್ರಪ್ಪ ಮಣಿಸಲು ಸಜ್ಜಾಗಿದ್ದಾರೆ. ಪ್ರತಿಷ್ಠತೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್, ಬಿಜೆಪಿ, ಪಕ್ಷೇತರ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಕ್ಷೇತ್ರದಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ಜಾತಿವಾರು ಲೆಕ್ಕಾಚಾರ:- ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಜಾತಿ ಲೆಕ್ಕಚಾರದ ಆಧಾರದ ಮೇಲೂ ಹೆಚ್ಚಿನ ಮತದಾರರನ್ನು ಹೊಂದಿರುವ ಸಮು ದಾಯಗಳನ್ನು ಸೆಳೆಯುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅಲ್ಲದೇ ಕ್ಷೆತ್ರದಲ್ಲಿ ಲಿಂಗಾಯಿತ ಸಮುದಾಯ ಹೆಚ್ಚಿನ ಮತಗಳು ಹೊಂದಿ ದ್ದು ಇದರ ಬಳಿಕ ಎಸ್ಟಿ, ಎಸ್ಸಿ ಮುಸ್ಲಿಂ ಕುರುಬ ಸೇರಿ ಇತರೆ ಸಮುದಾಯಗಳ ಮುಖಂಡ ರನ್ನು ಸೆಳೆದು ಬೆಂಬಲ ನೀಡವಂತೆ ಕೊರುತ್ತಿದ್ದಾರೆ .ಇದರೊಂದಿಗೆ ಯುವ ಮತದಾರರನ್ನು ಸಹ ಓಲೈಸಿ ಕೊಳ್ಳಲು ನಾನಾ ಪ್ರಯತ್ನ ಮಾಡುತ್ತಿದ್ದಾರೆ.
“ಜಗಳೂರು ಕ್ಷೇತ್ರಕ್ಕೆ ಐದು ವರ್ಷಗಳಲ್ಲಿ 3,500ಕೋಟಿಗೂ ಅಧಿಕ ಅನುಧಾನ ತಂದು ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ತಂದು ಅಬಿವೃದ್ದಿ ಪಡಿಸಿದ್ದೇನೆ ಹಾಗಾಗಿ ನಾನೇ ಕ್ಷೇತ್ರದಲ್ಲಿ ಗೆಲ್ಲುತ್ತೇನೆ.”
– ಎಸ್ ವಿ ರಾಮಚಂದ್ರಪ್ಪ. ಶಾಸಕ, ಬಿಜೆಪಿ ಅಭ್ಯರ್ಥಿ
“ಕ್ಷೇತ್ರದಲ್ಲಿ ಹಾಗೂ ರಾಜ್ಯದಲ್ಲಿ ಮತದಾರನ ನಾಡಿ ಮೀಡಿತ ಕಾಂಗ್ರಸ್ ಪಕ್ಷವಾಗಿದೆ ಅಲ್ಲದೆ ಕ್ಷೇತ್ರದ ಮನೆ ಮಗನಾಗಿ ಕೋರೋನಾ ಕಾಲದಲ್ಲಿ ಸಮಾಜ ಸೇವೆ ಮಾಡಿದ್ದು, ಎರಡು ವರ್ಷಗಳ ಕಾಲ ಕ್ಷೇತ್ರ ವ್ಯಾಪಿ ಜನರ ಕಷ್ಟಗಳಿಗೆ ಸ್ಪಂದಿಸಿದ್ದು ಹಾಗೂ ಎಚ್ ಪಿ ರಾಜೇಶ್ ರಾಮಚಂದ್ರ ಅವರು ಈಗಾಗಲೇ ಕ್ಷೇತ್ರದ ಶಾಸಕರಾಗಿದ್ದಾರೆ ಈಗ ನನಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡಿದ್ದು ನನಗೂ ಒಂದು ಬಾರಿ ಕ್ಷೇತ್ರದ ಸೇವೆ ಮಾಡಲು ಅವಕಾಶ ಕೊಡಿ ಕ್ಷೇತ್ರದಲ್ಲಿ ನಾನೇ ಗೆಲ್ಲುವ ವಿಶ್ವಾಸವಿದೆ”
– ಬಿ ದೇವೇಂದ್ರಪ್ಪ. ಕೈ ಅಭ್ಯರ್ಥಿ
” ಕ್ಷೇತ್ರದಲ್ಲಿ ಐದು ವರ್ಷಗಳ ಕಾಲ ಶಾಸಕನಾಗಿ ಕ್ಷೇತ್ರದ ಮನೆ ಮಗನಂತೆ ಅಬಿವೃದ್ಧಿ ಪಡಿಸಿದ್ದೇನೆ ಅಲ್ಲದೆ 57 ಕೆರೆ ತುಂಬಿಸುವ ಯೋಜನೆ ಹಾಗೂ ಭದ್ರಾಮೇಲ್ದಂಡೆ ಯೋಜನೆ ಜಾರಿಗೊಳ್ಳಲು ನಾನೇ ಕಾರಣಿಭೂತನಾಗಿರುವೆ. ಕ್ಷೇತ್ರದ ಜನರ ಪ್ರೀತಿಗೆ ಪಾತ್ರನಾಗಿದ್ದು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವಿದೆ “
-ರಾಜೇಶ್ ಪಕ್ಷೇತರ ಅಭ್ಯರ್ಥಿ
“ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಒಂದು ಕಡೆ ಬಿಜೆಪಿ ಅಭ್ಯರ್ಥಿ ಎಸ್ ವಿ ರಾಮಚಂದ್ರ ಅವರು ಒಂದು ಬಾರಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಮತ್ತು ಖ್ಯಾತ ಚಲನಚಿತ್ರ ನಟ ಕಿಚ್ಚ ಸುದೀಪ್ ಕರೆಸಿ ರೋಡ್ ಶೋ ಮೂಲಕ ಮತದಾರರ ಗಮನ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ”
“ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ ದೇವೇಂದ್ರಪ್ಪ ಪ್ರತಿ ಹಳ್ಳಿಗಳಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಅಬ್ಬರ ದ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ ಮತ್ತ ನಾಳೆ ಜಗಳೂರು ಪಟ್ಟಣಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆಸಿ ಚುನಾವಣಾ ಪ್ರಚಾರ ಸಭೆ ಮಾಡಲಿದ್ದಾರೆ”
“ಇನ್ನೊಂದಡೆ ನೋಡೋದಾದರೆ ಮಾಜಿ ಶಾಸಕ ಎಚ್.ಪಿ ರಾಜೇಶ್ ರವರು ಪ್ರತಿ ಹಳ್ಳಿಗಳಲ್ಲಿ ಕಾಂಗ್ರೆಸ್ ಪಕ್ಷ ನನಗೆ ಟಿಕೆಟ್ ಕೊಟ್ಟಿಲ್ಲ ಹಾಗಾಗಿ ನಾನು ಪಕ್ಷೇತರ ಅಭ್ಯರ್ಥಿಯಾಗಿ ಹೊರ ಹೊಮ್ಮಿದ್ದೇನೆ ನೀವೇ ನಮಗೆ ಸ್ಟಾರ್ ಗಳು ನನ್ನ ಗುರುತು ತೆಂಗಿನ ಮರ ಎಂದು ಕ್ಷೇತ್ರದ ಜನತೆಗೆ ಕೈಮುಗಿಯುತ್ತಿದ್ದಾರೆ “
ಅಭ್ಯರ್ಥಿಗಳು ಈ ರೀತಿ ಪ್ರಚಾರ ಮಾಡುತ್ತಿರುವುದನ್ನು ನೋಡು ವುದಾದರೆ ಮೇ 10 ರಂದು ಮತದಾನ ಮತ್ತು 13 ರಂದು ಮತ ಎಣಿಕೆ ನಡೆಯಲಿದ್ದು ಮತದಾರರು ಯಾವ ಪ್ರಜೆಯನ್ನು ಆಯ್ಕೆ ಮಾಡಲಿದ್ದಾರೆ ಎಂದು ಕಾದು ನೋಡಬೇಕಾಗಿದೆ