ಪ್ರಜಾ ನಾಯಕ ಸುದ್ದಿ ಜಗಳೂರು :- ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಪರ ಪತ್ನಿ ಇಂದಿರಾ ರಾಮ ಚಂದ್ರ ಮತಯಾಚಿಸಿದರು.
ಜಗಳೂರು ವಿಧಾನಸಭಾ ಕ್ಷೇತ್ರದ ಚಟ್ನಹಳ್ಳಿ,ಅಣಜಿಗೆರೆ, ಬಸವನ ಕೋಟೆ,ಸೇರಿದಂತೆ ವಿವಿಧ ಗ್ರಾಮಪಂಚಾಯಿತಿ ವ್ಯಾಪ್ತಿ ವಿವಿಧ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡರು.
ನಂತರ ಮಾತನಾಡಿದ ಅವರು,ನನ್ನ ಪತಿ ಶಾಸಕ.ಎಸ್.ವಿ.ರಾಮ ಚಂದ್ರ ಅವರು ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಅವಿರತ ಶ್ರಮ ವಹಿಸುತ್ತಿದ್ದು.ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಸಂಕಲ್ಪ ಗೈದಿದ್ದಾರೆ.ಪರಿಶಿಷ್ಠ ಪಂಗಡ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾಗಿ ಪರಿಶಿಷ್ಟ ಪಂಗಡದ ಬಡವರ್ಗದವರ ಆರ್ಥಿಕ ಸ್ವಾವ ಲಂಬಿ ಬದುಕು ಕಲ್ಪಿಸಿದ್ದಾರೆ.ಎಲ್ಲಾ ಸಮುದಾಯಗಳ ಶ್ರೇಯೋಭಿ ವೃದ್ದಿಗೆ ಬದ್ದರಾಗಿದ್ದು.ಅವರನ್ನು ಆಶೀರ್ವಾದಿಸಿ ಅತ್ಯಧಿಕ ಮತಗಳ ಅಂತರದಿಂದಗೆಲ್ಲಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಮಂಜುನಾಥ್ ಮಾತ ನಾಡಿ,ದೇಶದಲ್ಲಿ ಬಿಜೆಪಿ ಡಬಲ್ ಇಂಜಿನ್ ಸರಕಾರ ಕೋವಿಡ್ ಮಹಮಾರಿ ಆಕ್ರಮಣದ ಸಂದರ್ಭದಲ್ಲಿ ಸಕಾಲದಲ್ಲಿ ಲಸಿಕೆ ವಿತರಿಸಿ ಸಮರ್ಥವಾಗಿ ಎದುರಿಸಿದೆ.ಬಡವರಿಗೆ ಸೂರು,ಮನೆಮನೆ ಗೆ ನೀರು,ರಸ್ತೆ ಅಭಿವೃದ್ದಿಕಾಮಗಾರಿಗಳನ್ನು ಕೈಗೊಂಡಿದ್ದು.ಪ್ರಧಾನಿ ನರೇಂದ್ರ ಮೋದಿಜಿ ಅವರ ಆಡಳಿತ ವಿಶ್ವಕ್ಕೆ ಮಾದರಿಯಾಗಿದೆ .ಮತ್ತೊಮ್ಮೆ ಬಿಜೆಪಿ ಪಕ್ಷದ ಆಡಳಿತ ಮರುಕಳಿಸಬೇಕಿದೆ.ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಅವರ ಗುರುತು ಕಮಲಕ್ಕೆ ತಮ್ಮ ಅಮೂಲ್ಯ ಮತನೀಡಬೇಕು.ಕಾರ್ಯಕರ್ತರು ಬೂತ್ ಮಟ್ಟದಿಂದ ಮತದಾನ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಶಾಂತಕುಮಾರಿ,ಮುಖಂಡ ರಾದ ಭರಮನಗೌಡ,ಬಕ್ಕೇಶ್ ಪಟೇಲ್,ಮಲ್ಲಿಕಾರ್ಜುನ್, ಭೀಮ ಪ್ಪ,ದ್ಯಾಮನಗೌಡ,ಚಂದ್ರನಾಯ್ಕ,ಸಿದ್ದೇಶ್,ಫಣಿಯಾಪುರ ಲಿಂಗ ರಾಜ್,ನಾಗೇಂದ್ರಪ್ಪ,ಸೇರಿದಂತೆ ಇದ್ದರು.