ಪ್ರಜಾ ನಾಯಕ ಸುದ್ದಿ ಜಗಳೂರು :- ನನ್ನ ಮೇಲೆ ವಿಶ್ವಾಸವಿಟ್ಟು ತಾಲೂಕು ಪಂಚಾಯಿತಿ ಬಿಜೆಪಿ, ಕಾಂಗ್ರೇಸ್ ಮಾಜಿ ಸದಸ್ಯರು ಪಕ್ಷ ತೊರೆದು ಪಕ್ಷೇತರಕ್ಕೆ ಸೇರ್ಪಡೆಗೊಂಡಿದ್ದಾರೆ ನಾನು ಜನ ಬಲದ ಮೇಲೆ ಚುನಾವಣೆ ನಡೆಸುವವನು ಆದರೆ ಕೆಲವರು ಹಣ ಮತ್ತು ಅಧಿಕಾರದ ಬಲದಿಂದ ಚುನವಾವಣೆ ನಡೆಸುತ್ತಿದ್ದಾರೆ ಜನ ಅವರಿಗೆ ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು
ಭಾನುವಾರ ತಾಲೂಕಿನ ಮಾಜಿ ಶಾಸಕರ ಸ್ವ ಗೃಹದಲ್ಲಿ ಸುದ್ದಿಗೊಷ್ಟಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು ಕ್ಷೇತದಲ್ಲಿ ನಾನು ಮಾಡಿರುವ ಕೆಲಸವನ್ನು ಗಮನಿಸಿದ ಜನರು ಸ್ವ ಇಚ್ಚೆಯಿಂದ ಬಂಬಲ ನೀಡುತ್ತಿದ್ದಾರೆ ಹಾಲಿ ಶಾಸಕ ರಾಮಚಂದ್ರ ಅವರ ವಿರುದ್ದ ವಿರೋಧ ಅಲೆ ಇದೆ ಯಾವುದೆ ಅಭಿವೃದ್ದ ಕಾರ್ಯಗಳು ನಡೆದಿಲ್ಲ ಅವರಿಂದ ನೋವ ಅನುಭವಿಸಿರುವ ತಾ.ಪಂ ಸದಸ್ಯರು ನಮಗೆ ಬೆಂಬಲ ನೀಡಿರುವುದು ಆನೆ ಬಲ ಬಂದoತಾಗಿದೆ ಈ ಭಾರಿಯ ಚುನಾವಣೆಯಲ್ಲಿ ಜಯಗಳಿಸುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಮತ್ತು ಎ.ಪಿ.ಎಂ.ಸಿ ಯ ಕಾಂಗ್ರೇಸ್ , ಬಿಜೆಪಿ ಸದಸ್ಯರು ತೊರೆದು ಪಕ್ಷೇತರಕ್ಕೆ ಸೇರ್ಪಡೆ ಗೊಂಡರು. ವಿವರ ನೋಡುವುದಾದರೆ.
ತಾಲೂಕು ಪಂಚಾಯಿತಿ ಕಾಂಗ್ರೇಸ್ ಪಕ್ಷದ ಸದಸ್ಯರು :- ಬಿಳಿ ಚೋಡು ಕ್ಷೇತ್ರದ ಮಂಜುಳ ಸಹೋದರ ಗೀರಿಶ್ ಒಡೆಯರ್, ಅಣಬೂರು ಕ್ಷೇತ್ರದ ಕುಬೇಂದ್ರಪ್ಪ,ದೇವಿಕೆರೆ ಕ್ಷೇತ್ರದ ಲಕ್ಷ್ಮೀ ಬಾಯಿ ಸುರೇಶ್ ನಾಯ್ಕ,ಕೆಚ್ಚೆನಹಳ್ಳಿ ಕ್ಷೇತ್ರದ ಪಕ್ಷೇತರ ಸದಸ್ಯ ತಿಪ್ಪೇಸ್ವಾಮಿ,ತೋರಣೆಗಟ್ಟೆ ಕಮಲಮ್ಮ ಲೋಕಣ್ಣ,ಗುರುಸಿದ್ದಪುರ ಕ್ಷೇತ್ರದ ಮಮತ ಮಲ್ಲೇಶ್,ಪಲ್ಲಾಗಟ್ಟೆ ಮುದೆಗೌಡ್ರು ಬಸವ ರಾಜ್,
ಬಿಜೆಪಿ ಪಕ್ಷದ ಸದಸ್ಯರು : ದೋಣೆಹಳ್ಳಿ ಕ್ಷೇತ್ರದ ಮರೇನಹಳ್ಳಿ ಬಸವರಾಜ್,ಹೀರೆಮಲ್ಲನಹೋಳೆ ಕ್ಷೇತ್ರದ ತಿಮ್ಮೇಶ್,ಹೊಸಕೆರೆ ಆಂಜೀನಪ್ಪ, ಆಸಗೋಡು ಲಕ್ಷ್ಮಮ್ಮ, ಚಂದ್ರಶೇಖರ್ ಸೇರ್ಪಡೆ ಗೊoಡರು.
ಎಪಿಎoಸಿ ಮಾಜಿ ಸದಸ್ಯರರಾದ ಎನ್.ಎಸ್. ರಾಜು ಯು.ಜಿ. ಶಿವಕುಮಾರ್, ಎಸ್.ಕೆ.ರಾಮರೆಡ್ಡಿ, ಉಮದೇವಿ ಜಯ್ಯಣ್ಣ, ಗೋವಿಂದರಾಜ್, ಚಿತ್ತಪ್ಪ, ಇಬ್ರಾಹಿಂ ಸೇರ್ಪಡೆ ಗೊಂಡರು.
ಈ ಸಂಧರ್ಭದಲ್ಲಿ ಬಿಜೆಪಿ ಮುಖಂಡ ಬಿದರಿಕೆರೆ ಮಲ್ಲಿಕಾರ್ಜುನ್ ಬಾಬು ,ಮುಖಂಡರಾದ ಲೋಕೆಶ್,ರೇವಣ್ಣ ಕುಬೇಂದ್ರಪ್ಪ ಸೇರಿದಂತೆ ಮತ್ತಿತರರು ಪಕ್ಷೇತರ ಕಾರ್ಯಕರ್ತರಿದ್ದರು