✍️ವರದಿ-: ಬಾಬು ಎಚ್ ಮರೇನಹಳ್ಳಿ
ಪ್ರಜಾ ನಾಯಕ ವಿಶೇಷ ಸುದ್ದಿ ಜಗಳೂರು:- ಈ ತಾಲೂಕು ಬರದನಾಡು, ಕೊಂಡು ಕುರಿ ನಾಡಿನ ಎಸ್.ಟಿ ಗೆ ಮೀಸಲಾಗಿ ರುವ ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆ ಬಿಜೆಪಿ, ಪಕ್ಷೇತರ, ಕಾಂಗ್ರೆಸ್ ನಡುವೆ ತ್ರಿಕೋನ ಟೈಟ್ ಫೈಟ್ ಸರ್ಧೆಗೆ ಸಾಕ್ಷಿಯಾಗಿದೆ. ಯಾರು ಗೆದ್ದರೂ ಕೆಲವೇ ಅಂತರಗಳಲ್ಲಿ ಜಯ ಕಾಣುವ ನಿರೀಕ್ಷೆ , ಕಾಂಗ್ರೆಸ್, ಬಿಜೆಪಿಗೆ ಪ್ರಭಲ ಸ್ಪರ್ಧಿ ಯಾಗಿ ಪಕ್ಷೆತರ ಅಭ್ಯರ್ಥಿ ನಿಂತಿರುವುದು ಯಾರಿಗೆ ಗೆಲುವಿನ ಲಾಭ ಸಿಗಲಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 2023ರ ಚುನಾವಣೆ ಕಣದಲ್ಲಿ ಬಿಜೆಪಿ ಶಾಸಕ ಎಸ್.ವಿ.ರಾಮಚಂದ್ರ, ಕೊನೆಗಳಿಗೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಮಾಜಿ ಶಾಸಕ ಪಕ್ಷೇತರ ಅಭ್ಯರ್ಥಿ ಎಚ್.ಪಿ.ರಾಜೇಶ್, ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ನಡುವೆ ಚುನಾವಣೆ ಪ್ರತಿಷ್ಠೆಯಾಗಿದ್ದು, ರಾಜಕೀಯ ಅಳಿವು ಉಳುವಿನ ಪ್ರಶ್ನೆಯಾಗಿದೆ. ಸೋಲಾದರೆ ರಾಜಕೀಯ ಅಂತ್ಯವಾಗುವ ಬೀತಿಯಿಂದ ಶತ ಗತಾಯ ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದು ಚುನಾವಣೆಯಲ್ಲಿ ಮೂವರು ಅಭ್ಯರ್ಥಿಗಳು ಬಿಸಲು ಲೆಕ್ಕಿಸದೇ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.
2008 ರಿಂದ ಪರಿಶಿಷ್ಠ ಪಂಗಡಕ್ಕೆ ಮೀಸಲಾದ ಕ್ಷೇತ್ರದಲ್ಲಿ 2011 ರ ಉಪ ಚುನಾವಣೆ ಸೇರಿದಂತೆ 2018 ರವರೆಗೆ ಹಾಲಿ ಶಾಸಕ ಎಸ್.ವಿ.ರಾಮಚಂದ್ರ, ಮಾಜಿ ಶಾಸಕ ಎಚ್.ಪಿ.ರಾಜೇಶ್ ನಡುವೆಯೇ ನೇರಾ ನೇರಾ ಚುನಾವಣೆ ನಡೆದಿದೆ. ಮೂರು ಬಾರಿ ಎಸ್.ವಿ.ರಾಮಚಂದ್ರ, ಒಂದು ಬಾರಿ ಎಚ್.ಪಿ.ರಾಜೇಶ್ ಶಾಸಕರಾಗಿ ಆಯ್ಕೆಯಾಗಿದ್ದರು.
ಎಸ್.ವಿ.ಆರ್ ಐದನೇ ಬಾರಿ ಅಗ್ನಿ ಪರೀಕ್ಷೆ:-2023ರ ಚುನಾವಣೆ ಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಈ ಬಾರಿ ಮಾಜಿ ಶಾಸಕ ಎಚ್.ಪಿ.ರಾಜೇಶ್ ಪಕ್ಷೇತರರಾಗಿ ತೆಂಗಿನ ಮರದ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಚಿಕ್ಕಮ್ಮನಹಟ್ಟಿ ಬಿ.ದೇವೇಂದ್ರಪ್ಪ ಕಣದಲ್ಲಿದ್ದು ಇವೆರೆಡರ ನಡುವೆ ನಾನು ನಾಲ್ಕನೇ ಬಾರಿ ಗೆಲ್ಲುತ್ತೇನೆ ಎಂಬ ಆತ್ಮ ವಿಶ್ವಾಸದಲ್ಲಿ ಬಿಜೆಪಿ ಅಭ್ಯರ್ಥಿಶಾಸಕ ಎಸ್.ವಿ.ರಾಮಚಂದ್ರ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕಿಚ್ಚ ಸುದೀಪ್ ಭರ್ಜರಿ ರೋಡ್ ಶೋ ಮಾಡಿ ಮತಯಾಚನೆ ಮಾಡಿದ್ದಾರೆ.
ತ್ರಿಕೋನ ಸ್ಪರ್ಧೆಯಲ್ಲಿ ಈ ಬಾರಿ ರಾಜೇಶ್ಗೆ ಅನುಕಂಪ ಅಲೆ ಕೈ ಹಿಡಿಯುವ ಸಾಧ್ಯತೆ ಇದೆಯಾ..!
ಮಾಜಿ ಶಾಸಕ ಎಚ್.ಪಿ. ರಾಜೇಶ್ಗೆ ಕಾಂಗ್ರೆಸ್ ಟಿಕೆಟ್ ತಪ್ಪಿದ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಅನುಕಂಪ ಹಾಗೂ ಬಿಜೆಪಿ ಹಾಗೂ ಕಾಂಗ್ರೆಸ್ ಚುನಾಯಿತ ಸದಸ್ಯರುಗಳು, ಕಾರ್ಯಕರ್ತರು, ಸ್ಥಳೀಯ ಅನೇಕ ಘಟಾನಿಗಟಿ ಸ್ಥಳೀಯ ಮುಖಂಡರುಗಳ ಸೇರ್ಪಡೆ, ಕ್ಷೇತ್ರದ ಪ್ರತಿ ಗ್ರಾಮಗಳಲ್ಲಿ ಜಾತಿ ಬೇದ, ಪಕ್ಷ ಬೇದ ಮರೆತು ಸ್ವಾಗತದ ಮೂಲಕ ಬೆಂಬಲ ಸೂಚಿಸುತ್ತಿರುವುದರ ಜೊತೆಗೆ ವೀರಶೈವ ಲಿಂಗಾಯಿತರ ಮತ ಸೆಳೆಯುತ್ತಿರುವುದು ಬಿಜೆಪಿಗೆ ಆತಂಕ ಸೃಷ್ಠಿ ಮಾಡಿದೆ. ನಾಮ ಪತ್ರ ಸಲ್ಲಿಸುವಾಗ ಕಾಂಗ್ರೆಸ್, ಬಿಜೆಪಿ ಪಕ್ಷಗಳಿಗಿಂತಲೂ ಅತ್ಯಧಿಕ ಸಾವಿರಾರು ಜನರೊಂದಿಗೆ ನಾಮ ಪತ್ರ ಸಲ್ಲಿಸಿದ್ದರು.ಕ್ಷೇತ್ರದ ಮತದಾರರೇ ನನಗೆ ಶ್ರೀ ರಕ್ಷೆ ಯಾಗಿದ್ದು, ಮತದಾರ ಪ್ರಭುವೇ ಸ್ಟಾರ್ಪ್ರಚಾರಕರು, ಅವರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ “ತೆಂಗಿನ ತೋಟ ಚಿಹ್ನೆ”ಯಿಂದ ಸ್ಪರ್ಧಿಸಿದ್ದು ಗೆಲವು ಖಚಿತ. ಕ್ಷೇತ್ರದ ಮನೆ ಮಗ ನಾದ ನನಗೆ ಆಶೀರ್ವಾದ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ಈ ಹಿಂದೆ 2011 ಉಪ ಚುನಾವಣೆಯಲ್ಲಿ ಬಿಜೆಪಿಯ ಎಸ್.ವಿ. ರಾಮಚಂದ್ರ, ವಿರುದ್ಧ ಎಚ್.ಪಿ.ರಾಜೇಶ್, ಪಕ್ಷೇತರ ಅಭ್ಯರ್ಥಿ ಯಾಗಿ ನಿಂತು ಕೇವಲ 4433 ಅಂತರದಲ್ಲಿ ಸೋಲು ಕಂಡಿದ್ದು, ಈ ಬಾರಿ ಪಕ್ಷೇತರರಾಗಿ ಸೋಲು ತೀರಿಸಿಕೊಳ್ಳವ ತವಕದಲ್ಲಿ ಎಚ್.ಪಿ.ಆರ್.ಇದ್ದಾರೆ ಮತ್ತೊಂದೆಡೆ ಕಳೆದ ಬಾರಿ ಜೆಡಿಎಸ್ ಪಕ್ಷದಿಂದ ಸೋಲು ಕಂಡಿದ್ದ ಚಿಕ್ಕಮ್ಮನಟಿ ಬಿ ದೇವೇಂದ್ರಪ್ಪ ಅವರು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ
ಮೊದಲ ಬಾರಿ ಅವಕಾಶಕ್ಕೆ ಬಿ. ದೇವೇಂದ್ರಪ್ಪ ಅಗ್ನಿ ಪರೀಕ್ಷೆ:
ಕಾಂಗ್ರೆಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ಬಿ. ದೇವೇಂದ್ರಪ್ಪ ಅವರು ಬಿಜೆಪಿ ಹಾಲಿ ಶಾಸಕ ರಾಮಚಂದ್ರಪ್ಪ, ಪಕ್ಷೇತರ ಅಭ್ಯರ್ಥಿ ಮಾಜಿ ಶಾಸಕ ರಾಜೇಶ್, ಇಬ್ಬರನ್ನು ಮಣಿಸಲು ಶತ ಪ್ರಯತ್ನ ಮಾಡುತ್ತಿದ್ದು, ನನ್ನ ವಿರುದ್ಧ ಸ್ಪರ್ಧಿಸಿರುವ ಇಬ್ಬರಿಗೂ ಅವಕಾಶ ನೀಡಿದ್ದೀರಿ, ಇದೊಂದು ಬಾರಿ ನನಗೊಂದು ಅವಕಾಶ ಮಾಡಿ ಕೊಡುವಂತೆ ಮತದಾರರಲ್ಲಿ ಮನವಿ ಮಾಡುತ್ತಿದ್ದಾರೆ. ಪ್ರತಿಷ್ಠತೆಯ ಕಣವಾಗಿ ಸ್ವೀಕರಿಸಿರುವ ಕಾಂಗ್ರೆಸ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಭರ್ಜರಿ ಬಹಿರಂಗ ಸಭೆ ಮಾಡುವ ಮೂಲಕ ಮತಯಾಚನೆ ಮಾಡಿದ್ದಾರೆ.
ವಿಜಯದ ಅದೃಷ್ಠದ ಮಾಲೆ ಯಾರ ಕೊರಳಿಗೆ :-
ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಪೈಪೋಟಿಯಲ್ಲಿ ಅಭ್ಯರ್ಥಿ ಗಳು ಪ್ರಚಾರದ ಭರಾಟೆಯಲ್ಲಿ ತೊಡಗಿಸಿಕೊಂಡಿದ್ದು, ಮತದಾರ ರನ್ನು ಸೆಳೆಯಲು ತಮ್ಮದೆ ಆದ ಕಾರ್ಯತಂತ್ರ ರೂಪಿಸಿಕೊಂಡಿ ದ್ದಾರೆ. ವಿಜಯದ ಅದೃಷ್ಠ ಯಾರ ಕಡೆ ಒಲೆಯಲಿದೆ ಎಂಬುದು ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಭದ್ರವಾಗಲಿದ್ದು, ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ.
2018ರಲ್ಲಿ ಪಕ್ಷಗಳು ಪಡೆದ ಮತ ಪ್ರಮಾಣ-:
2018ರ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎಸ್.ವಿ. ರಾಮಚಂದ್ರ 78,948 ಸಾವಿರ ಮತ ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಪಿ.ರಾಜೇಶ್ ಅವರು 49,728 ಸಾವಿರ ಮತಗಳಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿದ್ದ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ ಅವರು 13.401 ಮತಗಳನ್ನು ಪಡೆದಿದ್ದರು.
ಕ್ಷೇತ್ರದ ಮತದಾರರ ಮಾಹಿತಿ:
ಜಗಳೂರು ವಿಧಾನಸಭಾ ಕ್ಷೇತ್ರವು ತಾಲ್ಲೂಕು ಜಗಳೂರು ಒಳ ಗೊಂಡoತೆ ಹರಪ್ಪನಹಳ್ಳಿ ತಾಲ್ಲೂಕಿನ ಏಳು ಪಂಚಾಯಿತಿಯ ನ್ನು ಒಳಗೊಂಡಿರುವoತೆ 1,92,958 ಮತದಾರ ರಿದ್ದಾರೆ. ಈ ಪೈಕಿ ಪುರುಷರು ಮತದಾರರು 97,690, ಮಹಿಳಾ ಮತದಾರರು 95,257, ಸೇವಾ ಮತದಾರರು 70, 80ವರ್ಷ ಮೇಲ್ಪಟ್ಟವರು 3409, ವಿಶೇಷ ವಿಕಲ ಚೇತನ 2381, ಇತರೇ 12 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 262 ಮತಗಟ್ಟೆಗಳಿದ್ದು, ಎರಡು ತಾಲ್ಲೂಕುಗಳಲ್ಲಿ ಒಟ್ಟು 178 ಹಳ್ಳಿಗಳು ಸೇರಿವೆ.
ಜಗಳೂರು ವಿಧಾನಸಭಾ ಎಸ್ ಟಿ ಮೀಸಲು ಕ್ಷೇತ್ರದಲ್ಲಿ ಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರ ನೋಡುವುದಾದರೆ
ಕ್ಷೇತ್ರದಲ್ಲಿ 193,028 ಒಟ್ಟು ಮತದಾರರು
ಪುರುಷರು: 97690
ಮಹಿಳೆಯರು: 95257
ಇತರೆ:81
ಲಿಂಗಾಯತರು: 39,000
ಎಸ್ಸಿ: 47,000
(ಲಂಬಾಣಿ-11,000, ಛಲವಾದಿ-4000, ಮಾದಿಗ ಸಮುದಾಯ-19,000, ಬೋವಿ-13,500)
ಎಸ್ಟಿ(ನಾಯಕ): 41,000
ಕುರುಬ: 12,000
ಮುಸ್ಲಿಂ: 18,600
ಉಪ್ಪಾರ: 3000
ಯಾದವ: 14,609
ರೆಡ್ಡಿ: 3000
ಸವಿತಾಸಮಾಜ: 2000
ಮಡಿವಾಳ: 3000
ಇತರೆ:5000
ಈ ಎಲ್ಲಾ ಚಿತ್ರಣಕ್ಕೆ ಕ್ಷೇತ್ರದ ಮತದಾರರು ಮೇ 10 ರಂದು ನಡೆ ಯಲಿರುವ ಚುನಾವಣೆಯಲ್ಲಿ ಯಾವ ರೀತಿ ತೀರ್ಪು ಕೊಡಲಿದ್ದಾರೆ ಎಂಬುದು ಕಾದು ನೋಡುವ ಆತಂಕ ಸಾರ್ವಜನಿಕರಿಗೆ ಕುತೂಹಲ ಮೂಡಿಸಿದೆ
ಜಗಳೂರು ಕ್ಷೇತ್ರಕ್ಕೆ ಐದು ವರ್ಷಗಳಲ್ಲಿ 3,500ಕೋಟಿಗೂ ಅಧಿಕ ಅನುಧಾನ ತಂದು ಕೆರೆ ತುಂಬಿಸುವ ಯೋಜನೆ, ಭದ್ರಾ ಮೇಲ್ದಂಡೆ ಯೋಜನೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿ,ರಸ್ತೆಗಳು, ಸಮುದಾಯ ಭವನಗಳು ಸೇರಿದಂತೆ ಅನೇಕ ಅಬಿವೃದ್ದಿ ಪಡಿಸಿದ್ದೇನೆ. ನನಗೆ ಕ್ಷೇತ್ರದ ಮತದಾರರ ಬೆಂಬಲದಿoದ ನಾನು ನಾಲ್ಕನೇ ಬಾರಿ ಶಾಸಕನಾಗಿ ಆಯ್ಕೆ ಯಾಗುವೆ:
– ಎಸ್ ವಿ ರಾಮಚಂದ್ರಪ್ಪ. ಶಾಸಕ, ಬಿಜೆಪಿ ಅಭ್ಯರ್ಥಿ
ಕ್ಷೇತ್ರದ ಮತದಾರರೇ ನನ್ನ ಗೆಲುವಿನ ಮಾನದಂಡ: ನನ್ನದೇನೆ ಇದ್ದರೂ ಜನಪರ ಮತ್ತು ಕ್ಷೇತ್ರದ ಅಭಿವೃದ್ದಿಪರ ನಿಷ್ಠೆ: ಅವರ ಆಸೆಯಂತೆ ನಾನು ಪಕ್ಷೇತರ ಅಭ್ಯರ್ಥಿಯಾಗಿ “ತೆಂಗಿನ ತೋಟ ಚಿಹ್ನೆ”ಯಿಂದ ಸ್ಪರ್ಧಿಸಿದ್ದು ಗೆಲವು ಖಚಿತ. ಕ್ಷೇತ್ರದ ಮನೆ ಮಗನಾದ ನನಗೆ ಆಶೀರ್ವಾದ ಮಾಡುತ್ತಾರೆ.ಜಯದ ಭರವಸೆ ಯ ಹಾದಿಯಲ್ಲಿ ಮುನ್ನಡೆಯುತ್ತಿದ್ದೇನೆ.
ಎಚ್.ಪಿ.ರಾಜೇಶ್, ಮಾಜಿ ಶಾಸಕ, ಪಕ್ಷೇತರ ಅಭ್ಯರ್ಥಿ.
ಕ್ಷೇತ್ರದ ಮನೆ ಮಗನಾಗಿ ಕೋರೋನಾ ಕಾಲದಲ್ಲಿ ಸಮಾಜ ಸೇವೆ ಮಾಡಿದ್ದೇನೆ. ಎರಡು ವರ್ಷಗಳ ಕಾಲ ಕ್ಷೇತ್ರ ವ್ಯಾಪಿ ಜನರ ಕಷ್ಟ ಗಳಿಗೆ ಸ್ಪಂದಿಸಿದ್ದೇನೆ. ಕ್ಷೇತ್ರದ ಜನರು ಇಬ್ಬರಿಗೂ ಅವಕಾಶ ನೀಡಿದ್ದು, ಈ ಬಾರಿ ನನಗೆ ಅವಕಾಶ ನೀಡುತ್ತಾರೆ. ಜೊತೆಗೆ ರಾಜ್ಯದಲ್ಲಿ ಸಿದ್ದರಾಮಯ್ಯ ಅವರ ಜನಪರ ಆಡಳಿತ, ಬಡವರಿಗೆ 10 ಕೆ.ಜಿ. ಅಕ್ಕಿ, ಮನೆಯ ಒಡತಿಗೆ ಪ್ರತಿ ತಿಂಗಳು 2 ಸಾವಿರ, ಮಹಿಳೆಯರಿಗೆ ಉಚಿತ ಬಸ್ ಸಂಚಾರ, ಪಧವಿದರರಿಗೆ 3 ಸಾವಿರ, 200 ಉಚಿತ ವಿಧ್ಯುತ್ 5 ಭರವಸೆಗಳು ನೀಡಿರುವುದ ರಿಂದ ಜನರು ನಮಗೆ ಅಧಿಕ ಮತಗಳಿಂದ ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ಇದೆ.
– ಬಿ ದೇವೇಂದ್ರಪ್ಪ. ಕಾಂಗ್ರೆಸ್ ಅಭ್ಯರ್ಥಿ