ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ವಿಧಾನ ಸಭಾ ಕ್ಷೇತ್ರದ ಬೂತ್ ಗಳಿಗೆ ಇವಿಎಂ ಯಂತ್ರ ಹಾಗೂ ಚುನಾವಣೆ ಪರಿಕರಗಳನ್ನು ಕೈಯಲ್ಲಿ ಹಿಡಿದು ಕೆ ಎಸ್ ಆರ್ ಟಿ ಸಿ ಬಸ್ಗಳಲ್ಲಿ ತೆರಳಿದರು.
ಬೆಳಿಗ್ಗೆ 10 ಗಂಟೆಯಿಂದಲೇ ಮತಗಟ್ಟೆ ಅಧಿಕಾರಿ ಮತ್ತು ಸಿಬ್ಬಂದಿ ಗಳಿಗೆ ತಿಂಡಿ ವ್ಯವಸ್ಥೆ ಮಾಡಲಾಗಿತ್ತು ನಂತರ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣೆ ಅಧಿಕಾರಿಯ ನೇತೃತ್ವದಲ್ಲಿ ಮತ ಗಟ್ಟೆ ಅಧಿಕಾರಿಗಳಿಗೆ ಇವಿಎಂ ಯಂತ್ರದ ಬಗ್ಗೆ ತರಬೇತಿ ನೀಡಿ ಕರ್ತವ್ಯದ ಬಗ್ಗೆ ಮಾರ್ಗದರ್ಶನ ನೀಡಿ ತಮ್ಮ ತಮ್ಮ ಸ್ಥಳಗಳಿಗೆ ಕಳಿಸಲಾಯಿತು
ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ 29 ಗ್ರಾಮಪಂಚಾಯಿತಿಗಳು 1 ಪಟ್ಟಣ ಪಂಚಾಯಿತಿ ವ್ಯಾಪ್ತಿ 192958 ಮತದಾರರಿದ್ದು.ಒಟ್ಟು 262 ಬೂತ್ ಗಳಿದ್ದು.563 ಪೊಲೀಸ್ ಸಿಬ್ಬಂದಿ 1200 ಮತಗಟ್ಟೆ ಅಧಿಕಾರಿಗಳನ್ನು 1ಡಿವೈಎಸ್ ಪಿ 4 ಪಿಐ,7 ಪಿಎಸ್ ಐ ,48 ಎಎಸ್ ಐ,192 ಹೆಚ್ ಸಿ ,ಹಾಗೂ ಪಿಸಿ ಸೇರಿದಂತೆ 346 ಜನ ಪೊಲೀಸ್ ಸಿಬ್ಬಂದಿಗಳು,18 ಆರ್ ಪಿ ಎಫ್,18 ಕೇರಳ ಪೊಲೀಸ್ ,ಒಳಗೊಂಡಂತೆ 54 ಸಿಬ್ಬಂದಿಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.
ಮಧ್ಯಾಹ್ನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುವ ಚುನಾವಣಾ ಕರ್ತವ್ಯದ ಬಗ್ಗೆ ಸಲಹೆ ಸೂಚನೆ ನೀಡುತ್ತಿರುವ ಸ್ಥಳ ಕ್ಕೆ ಚುನಾವಣಾ ಆಯೋಗದ ವೀಕ್ಷಕರಾದ ರಂಜಿತ್ ಕುಮಾರ್.ಜಿ ವೀಕ್ಷಣೆ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು
128 ಮತಗಟ್ಟೆಗಳಲ್ಲಿ ವೆಬ್ ಕ್ಯಾಮೆರಾ, ಅಳವಡಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ಎಸ್ ರವಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಸಂತೋಷ್ ಕುಮಾರ್ ಜಿ. ಪೋಲಿಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ತಿಳಿಸಿದ್ದಾರೆ .