ಪ್ರಜಾ ನಾಯಕ ಸುದ್ದಿ ದಾವಣಗೆರೆ :- ರಾಜ್ಯ ವಿಧಾನಸಭೆಗೆ ಮೇ 10 ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಮೇ 9 ರಂದು ಎಲ್ಲಾ ಮತಗಟ್ಟೆಗಳಿಗೆ ಮತದಾನ ಸಿಬ್ಬಂದಿಗಳು ತಲುಪಿದ್ದು ಬೆಳಗ್ಗೆ 7 ಗಂಟೆಯಿಂದ ಜಿಲ್ಲೆಯ ಎಲ್ಲಾ 1685 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ.
ಮತದಾರರಿಗೆ ಮತದಾನ ಮಾಡಲು ಅನುಕೂಲವಾಗುವಂತೆ ಬಿಎಲ್ಓಗಳ ಮೂಲಕ ವೋಟರ್ ಸ್ಲಿಪ್ಗಳನ್ನು ವಿತರಣೆ ಮಾಡ ಲಾಗಿದೆ. ಎಲ್ಲಾ ಮತದಾರರು ಯಾವುದೇ ಭಯವಿಲ್ಲದೆ ಮುಕ್ತ ವಾಗಿ ಮತದಾನ ಮಾಡಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರತಿಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಸ್ಥಾಪಿಸ ಲಾಗಿದೆ. ನೆರಳಿನ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇರಲಿದೆ.
ಮತದಾನಕ್ಕೆ ಎಫಿಕ್ ಜೊತೆ ಇತರೆ 12 ದಾಖಲೆಗಳಿಗೆ ಅವಕಾಶ; ಮೇ 10 ರಂದು ನಡೆಯುವ ಮತದಾನದ ವೇಳೆ ಚುನಾವಣಾ ಆಯೋಗ ನೀಡಿರುವ ಗುರುತಿನ ಚೀಟಿ ಜೊತೆಗೆ ಪರ್ಯಾಯ ವಾಗಿ ಇತರೆ 12 ದಾಖಲೆಗಳಲ್ಲಿ ಒಂದನ್ನು ಹಾಜರುಪಡಿಸಿ ಮತ ದಾನ ಮಾಡಬಹುದಾಗಿದೆ. ಆಧಾರ್ ಕಾರ್ಡ್, ಉದ್ಯೋಗ ಖಾತರಿ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಇಲಾಖೆಯಿಂದ ಪಡೆದ ಭಾವ ಚಿತ್ರವಿರುವ ಪಾಸ್ ಬುಕ್, ಕಾರ್ಮಿಕ ಸಚಿವಾಲಯದಿಂದ ನೀಡ ಲಾದ ಆರೋಗ್ಯ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಸ್ಮಾರ್ಟ್ ಕಾರ್ಡ್ ಆರ್ಜಿಐ ನೀಡಿದ ಎನ್ಪಿಆರ್, ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ, ರಾಜ್ಯ ಹಾಗೂ ಸಾರ್ವಜನಿಕ ಉದ್ದೆಮೆಗಳಲ್ಲಿ ನೀಡಿರುವ ಭಾವಚಿತ್ರವಿ ರುವ ನೌಕರರ ಗುರುತಿನ ಚೀಟಿ, ಎಂ.ಪಿ, ಎಂ.ಎಲ್.ಸಿ.ಯವರು ನೀಡಿರುವ ಅಧಿಕೃತ ಗುರುತಿನ ಚೀಟಿ, ಕೇಂದ್ರ ಸಾಮಾಜಿಕ ನ್ಯಾಯ, ಸಬಲೀಕರಣ ಇಲಾಖೆಯಿಂದ ನೀಡಿರುವ ವಿಶೇಷಚೇತ ನ ಗುರುತಿನ ಚೀಟಿ, ಇವುಗಳಲ್ಲಿ ಒಂದನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ. ಮತದಾನದ ವೇಳೆ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ.
ಜಿಲ್ಲೆಯಲ್ಲಿ 1442553 ಮತದಾರರು;- ಜಿಲ್ಲೆಯ 7 ಕ್ಷೇತ್ರಗಳಿಂದ 721964 ಪುರುಷ, 720004 ಮಹಿಳೆಯರು, 118 ಇತರೆ, 467 ಸೇವಾ ಮತದಾರರು ಸೇರಿ 1442553 ಮತದಾರರಿದ್ದಾರೆ. ಇದರಲ್ಲಿ ಜಗಳೂರು 97690 ಪುರುಷ, 95257 ಮಹಿಳೆ, 11 ಇತರೆ ಹಾಗೂ 70 ಸೇವಾ ಮತದಾರರು ಸೇರಿ 193028 ಮತ ದಾರರು. ಹರಿಹರ 103667 ಪುರುಷ, 103832 ಮಹಿಳೆ, 18 ಇತರೆ, 72 ಸೇವಾ ಮತದಾರರು ಸೇರಿ 207589. ದಾವಣಗೆರೆ ಉತ್ತರ 119353 ಪುರುಷ, 121841 ಮಹಿಳೆ, 38 ಇತರೆ, 46 ಸೇವಾ ಮತದಾರರು ಸೇರಿ 241278. ದಾವಣಗೆರೆ ದಕ್ಷಿಣ 104762 ಪುರುಷ, 105873 ಮಹಿಳೆ, 33 ಇತರೆ ಹಾಗೂ 40 ಸೇವಾ ಮತದಾರರು ಸೇರಿ 210708. ಮಾಯಕೊಂಡ 96491 ಪುರುಷ, 94803 ಮಹಿಳೆಯರು, 6 ಇತರೆ, 121 ಸೇವಾ ಮತ ದಾರರು ಸೇರಿ 191421. ಚನ್ನಗಿರಿ 100266 ಪುರುಷ, 99194 ಮಹಿಳೆ, 8 ಇತರೆ, 49 ಸೇವಾ ಮತದಾರರು ಸೇರಿ 199517. ಹೊನ್ನಾಳಿ 99735 ಪುರುಷ, 99204 ಮಹಿಳೆ, 4 ಇತರೆ ಹಾಗೂ 69 ಸೇವಾ ಮತದಾರರು ಸೇರಿ ಒಟ್ಟು 199012 ಮತದಾರ ರಿದ್ದಾರೆ.
7 ಕ್ಷೇತ್ರಗಳಿಂದ 1685 ಮತದಾನ ಕೇಂದ್ರಗಳು;- ದಾವಣಗೆರೆ ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿಂದ 1685 ಮತಗಟ್ಟೆಗಳ ನ್ನು ಸ್ಥಾಪಿಸಲಾಗಿದೆ. ಇದರಲ್ಲಿ ಜಗಳೂರು 262, ಹರಿಹರ 228, ದಾವಣಗೆರೆ ಉತ್ತರ 242, ದಕ್ಷಿಣ 214, ಮಾಯಕೊಂಡ 240, ಚನ್ನಗಿರಿ 254 ಹಾಗೂ ಹೊನ್ನಾಳಿ 245 ಮತಗಟ್ಟೆಗಳಿವೆ.
ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಮತಪ್ರಚಾರ ಇಲ್ಲ;- ಮತಗಟ್ಟೆ 100 ಮೀಟರ್ ಒಳಗೆ ಯಾವುದೇ ಚುನಾವಣಾ ಮತ ಪ್ರಚಾರ ಮಾಡುವಂತಿಲ್ಲ. ಅಭ್ಯರ್ಥಿಗಳು, ಪಕ್ಷದವರು ಮತ ಕೇಂದ್ರದ 200 ಮೀಟರ್ ವ್ಯಾಪ್ತಿ ನಂತರ 1 ಟೇಬಲ್, 2 ಚೇರ್ ಹಾಗೂ 1 ಬ್ಯಾನರ್ 3 ಅಡಿ ಉದ್ದ ಮತ್ತು 1.5 ಅಡಿ ಎತ್ತರ ಇರುವುದನ್ನು ಉಪಯೋಗಿಸಿ ಮತದಾರರ ಪ್ರಚಾರ ಸಹಾಯ ವಾಣಿ ನಡೆಸಲು ಅವಕಾಶ ಇದೆ. ಮತ್ತು ಇವರು ಕಡ್ಡಾಯವಾಗಿ ಮತದಾರರ ಗುರುತಿನ ಚೀಟಿಯನ್ನು ಇಟ್ಟುಕೊಂಡಿರಬೇಕು, ಇದಕ್ಕೆ ಚುನಾವಣಾಧಿಕಾರಿಯ ಅನುಮತಿ ಕಡ್ಡಾಯವಾಗಿದೆ. ಮತಗಟ್ಟೆ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಮಾರಕಾಸ್ತ್ರ ವನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಿದೆ. ಯಾವುದೇ ಶಾಸಕರು, ಸಂಸದರು, ಸಚಿವರುಗಳು ಅಭ್ಯರ್ಥಿಗಳಿಗೆ ಏಜೆಂಟ ರು, ಮತದಾನ ಏಜೆಂಟರು, ಎಣಿಕೆ ಏಜೆಂಟರಾಗು ವಂತಿಲ್ಲ. ಮತದಾನ ಕೇಂದ್ರದೊಳಗೆ ಮತಗಟ್ಟೆ ಅಧಿಕಾರಿಗಳಿಗೆ, ಚುನಾವ ಣಾ ಕರ್ತವ್ಯ ನಿರತ ಅಧಿಕಾರಿಗಳಿಗೆ, ಚುನಾವಣಾ ಆಯೋಗದಿಂದ ನೇಮಕವಾದ ಅಧಿಕಾರಿಗಳಿಗೆ, ಅಭ್ಯರ್ಥಿಗಳ ಒಬ್ಬ ಏಜೆಂಟರಿಗೆ, ಅಂಧ, ದುರ್ಬಲ ಮತದಾರರ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ಇರುತ್ತದೆ.
ದೂರು, ಸಹಾಯಕ್ಕಾಗಿ ಟೋಲ್ಫ್ರೀ ಬಳಸಿ 1950 ಬಳಸಿ
ಪ್ರವಾಸಿ ತಾಣಗಳು ಬಂದ್;- ಮೇ 10 ವಿಧಾನಸಭಾ ಚುನಾ ವಣಾ ಮತದಾನ ನಡೆಯಲಿರುವುದರಿಂದ ದಾವಣಗೆರೆ ಗ್ಲಾಸ್ ಹೌಸ್ ಮತ್ತು ಶಾಂತಿಸಾಗರದಲ್ಲಿ ಯಾವುದೇ ಪ್ರವಾಸಿಗರಿಗೆ ಅವಕಾಶ ಇರುವುದಿಲ್ಲ. ಮತದಾನದ ಪ್ರಯುಕ್ತ ಮುಚ್ಚಲಾಗಿ ರುತ್ತದೆ. ನಂತರ ಎಂದಿನಂತೆ ಲಭ್ಯವಿರಲಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ