ಪ್ರಜಾ ನಾಯಕ ಸುದ್ದಿ ದಾವಣಗೆರೆ :- 13 ಸಾವಿರ ಲಂಚ ಪಡೆ ಯುವಾಗ ಸಬ್ ರಿಜಿಸ್ಟ್ರಾರ್ ಸಿಬ್ಬಂದಿಯೊಬ್ಬರು ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿದ್ದಾರೆ. ಹರಿಹರ ಪಟ್ಟಣದ ಸಬ್ ರಿಜಿ ಸ್ಟ್ರಾರ್ ಕಚೇರಿಯ ದಸ್ತು ಬರಹಗಾರ ಎಂ.ಬಿ. ಪರಮೇಶ್ವರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದವರು.
ಹರಿಹರದ ನಿವಾಸಿಯಾದ ಮಂಜುನಾಥ್ ಎಂಬವರು ಮನೆ ಖರೀದಿ ನೋಂದಣಿ ಪತ್ರಕ್ಕಾಗಿ ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗಿ ದ್ದು, ದಸ್ತು ಬರಹಗಾರ ಪರಮೇಶ್ವರ್ ಅವರನ್ನು ಸಂಪರ್ಕಿಸಿದ್ದಾರೆ. ಆದರೆ ಪರಮೇಶ್ವರ್ 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಮಂಜುನಾಥ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ಶನಿವಾರ ರಾತ್ರಿ ಸಬ್ ರಿಜಿಸ್ಟ್ರಾರ್ ಕಛೇರಿ ಬಳಿ, ಪರ ಮೇಶ್ವರ್ ಅವರು ಮಂಜುನಾಥ್ ಅವರಿಂದ 13 ಸಾವಿರ ರೂಪಾ ಯಿ ಹಣ ಪಡೆಯುವಾಗಲೇ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಎಸ್ ಪಿ ಎಂ.ಎಸ್. ಕೌಲಾಪುರೆ, ಇನ್ಸ್ಪೆಕ್ಟರ್ ರಾಷ್ಟ್ರಪತಿ ಎಚ್.ಎಸ್. ಆಂಜನೇಯ ನೇತೃತ್ವದಲ್ಲಿ ದಾಳಿ ನಡೆ ದಿತ್ತು.ಆರೋಪಿ ಎಂ.ಬಿ.ಪರಮೇಶ್ವರ್ 40 ಸಾವಿರ ರೂಪಾಯಿ ನಗದು ಮತ್ತು ವಿವಿಧ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ