ಪ್ರಜಾ ನಾಯಕ ಸುದ್ದಿ ದಾವಣಗೆರೆ; ಒಂಟಿ ಮಹಿಳೆಯ ಮೊಬೈಲ್ ನಗದು ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಏ. 23 ರಂದು ಉಷಾ ಎಂಬುವವರು ನಗರದ ಮಹಾಲಕ್ಷ್ಮೀ ಲೇಔಟ್ ಕಾವೇರಿ ಅಪಾರ್ಟ್ಮೆಂಟ್ ಬಳಿ ನಡೆದುಕೊಂಡು ಹೋಗುತ್ತಿರುವಾಗ ಯಾರೋ ಒಬ್ಬ ವ್ಯಕ್ತಿ ಒಂದು ಬೈಕಿನಲ್ಲಿ ಬಂದು, ಕೈಯಲ್ಲಿದ್ದ ಬ್ಯಾಗನ್ನು ಕಿತ್ತುಕೊಂಡು ಹೋಗಿದ್ದರು. ಬ್ಯಾಗಿನಲ್ಲಿ 5000/-ರೂ ನಗದು, ಒಂದು ಮೊಬೈಲ್ ಪೋನ್ ದಾಖಲಾತಿಗಳು ಮತ್ತು ಮನೆ ಮತ್ತು ಬೈಕಿನ ಕೀ ಇತ್ತು ಎಂದು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಮಾಲು ಮತ್ತು ಆರೋಪಿಗಳ ಪತ್ತೆ ಮಾಡಲು ದಾವಣ ಗೆರೆ ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾನಗರ ಪೊಲೀಸ್ ಠಾಣೆ, ಆರ್.ಪಿ ಅನಿಲ್ ಪೊಲೀಸ್ ಇನ್ಸ್ಪೆಕ್ಟರ್ ಸಂಚಾರಿ ವೃತ್ತ ದಾವಣಗೆರೆ ರವರ ನೇತೃತ್ವದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ ಸಿಬ್ಬಂದಿಯನ್ನೊಳ ಗೊಂಡ ತಂಡವನ್ನು ರಚಿಸಲಾಟಗಿತ್ತು. ಈ ತಂಡವು ಪ್ರಕರಣದ ಆರೋಪಿ ಪುಟಗನಾಳು ಗ್ರಾಮದ ಯಲ್ಲಪ್ಪ (46) ಪತ್ತೆ ಮಾಡಿ ಸುಲಿಗೆ ಮಾಡಿದ್ದ 1,500/-ರೂ ನಗದು ಹಣ, ಕೃತ್ಯಕ್ಕೆ ಬಳಸಿದ 30,000/-ರೂ ಬೆಲೆ ಬಾಳುವ ಬೈಕನ್ನು ವಶಪಡಿಸಿಕೊಂಡಿದ್ದು. ಪ್ರಕರಣ ತನಿಖೆ ಮುಂದುವರೆದಿದೆ.
ಈ ಪ್ರಕರಣದಲ್ಲಿ ಆರೋಪಿತನನ್ನು ಪತ್ತೆ ಮಾಡಿದ ತನಿಖಾಧಿಕಾರಿ ಯಾದ ಪ್ರಭಾವತಿ ಸಿ ಶೇತಸನದಿ ಪೊಲೀಸ್ ಇನ್ಸ್ಪೆಕ್ಟರ್ ವಿದ್ಯಾ ನಗರ ಠಾಣಿ, ಆರ್.ಪಿ ಅನಿಲ್ ಪೊಲೀಸ್ ಇನ್ಸ್ಪೆಕ್ಟರ್ ಸಂಚಾರಿ ವೃತ್ತ , ಎಂ.ಎಸ್ ದೊಡ್ಡಮನಿ ಪಿ.ಎಸ್.ಐ, ವಿದ್ಯಾನಗರ ಪೊಲೀಸ್ ಠಾಣೆ, ಹಾಗೂ ಸಿಬ್ಬಂದಿಗಳಾದ ನಾಗರಾಜ್ ಎ.ಎಸ್.ಐ. ಆನಂದ ಮುಂದಲಮನಿ, ಭೋಜಪ್ಪ ಕಿಚಡಿ, ಯೋಗೀಶ್ ನಾಯ್ಕ, ಮಂಜಪ್ಪ , ಮಂಜುನಾಥ, ರಾಘವೇಂದ್ರ, ಸರಸ್ವತಿ, ರಾಮಚಂದ್ರ ಪ್ಪ, ಸೋಮಪ್ಪ, ಮಾರುತಿ, ದೇವರಾಜ್, ಗುರುಸಿದ್ದನಗೌಡ ರವರಿ ಗೆ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ., ಐ.ಪಿ.ಎಸ್ ರವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ