ಪ್ರಜಾ ನಾಯಕ ಸುದ್ದಿ ಜಗಳೂರು :- ರೈತರಿಗೆ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಿ ಎಂದು ಕೃಷಿ ಅಧಿಕಾರಿಗಳಿಗೆ ಶಾಸಕ ಬಿ.ದೇವೇಂದ್ರಪ್ಪ ಸೂಚಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಕೃಷಿ ಇಲಾಖೆ ವತಿಯಿಂದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮದಲ್ಲಿ ಸಾಂಕೇತಿಕವಾಗಿ ರೈತರಿ ಗೆ ಮುಂಗಾರು ಬಿತ್ತನೆ ಬೀಜ ವಿತರಿಸಿ ಅವರು ಮಾತನಾಡಿದರು.
ಜಗಳೂರು ತಾಲೂಕಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಯಾಗಿದ್ದು ರೈತರು ಈಗಾಗಲೇ ತಮ್ಮ ಜಮೀನುಗಳನ್ನು ಹಸನು ಮಾಡಿ ಕೊಂಡು ಮುಗಿಲಿನತ್ತ ಮುಖಮಾಡಿದ್ದಾರೆ. ಇಂತಹ ಒಂದು ಪರಿಸ್ಥಿತಿಯಲ್ಲಿ ಮುಂಗಾರು ಬಿತ್ತನೆ ಬೀಜವನ್ನು ಸಮರ್ಪಕ ವಾಗಿ ರೈತರಿಗೆ ತಲುಪಿಸಬೇಕು ಕೃಷಿ ಅಧಿಕಾರಿಗಳು ಮತ್ತು ಸಿಬ್ಬಂದಿ ಗಳು ವಿತರಿಸಬೇಕು.
ಖಾಸಗಿ ಮಧ್ಯವರ್ತಿಗಳನ್ನು ಕೃಷಿ ಇಲಾಖೆ ಯಿಂದ ದೂರವಿಟ್ಟು ನಿಜವಾದ ರೈತ ಫಲಾನುಭವಿಗಳಿಗೆ ವಿತರಿಸ ಬೇಕು ಖಾಸಗಿ ಕಂಪನಿಗಳು ರೈತರಿಗೆ ಕಳಪೆ ಬಿತ್ತನೆ ಬೀಜ ವಿತರಿಸ ದಂತೆ ನೋಡಿಕೊಳ್ಳಬೇಕು. ರೈತರು ತಮ್ಮ ಜಮೀನುಗಳಲ್ಲಿ ಏಕ ಬೆಳೆ ಬೆಳೆಯುವುದನ್ನು ಬಿಟ್ಟು ವಿಧಳ ಧಾನ್ಯಗಳನ್ನು ಅಕಡಿಗಳಾಗಿ ಬೆಳೆಯಬೇಕು ಅಧಿಕಾರಿಗಳು ಬೀಜ ವಿತರಣೆಯಲ್ಲಿ ನಿರ್ಲಕ್ಷ್ಯ ವಹಿ ಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
“ಎಪಿಎಂಸಿ ಯಲ್ಲಿ ಬಿತ್ತನೆ ಬೀಜ ಖರೀದಿ ಕೇಂದ್ರಗಳಲ್ಲಿ ತಾಂತ್ರಿಕ ದೋಷ ಸರಿಪಡಿಸಿಕೊಂಡು ರೈತರಿಗೆ ಯಾವುದೇ ರೀತಿ ತೊಂದ ರೆ ಯಾಗದಂತೆ ಕಾಪಾಡಿಕೊಳ್ಳಿ. ಈಗಾಗಲೇ ರಾಗಿ ಖರೀದಿ ಕೇಂದ್ರದಲ್ಲಿ ರೈತರಿಗೆ ತೀವ್ರ ಅನ್ಯಾಯವಾಗಿದೆ.ಮರು ಕಳಿಸಿದರೆ ನಾನು ಸಹಿಸುವುದಿಲ್ಲ”
ಈ ಸಂದರ್ಭದಲ್ಲಿ ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಜಿ. ಜಿಲ್ಲಾ ಕೃಷಿ ಇಲಾಖೆಯ ಇಲಾಖೆ ಉಪ ನಿರ್ದೇಶಕ ತಿಪ್ಪೇಸ್ವಾಮಿ, ತಾಲೂಕು ಸಹಾಯಕ ನಿರ್ದೇಶಕ ಮಿಥುನ್ ಖಿಮಾವತ್ ಕೆಪಿಸಿಸಿ ತಾಲೂಕು ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್,ಪಲ್ಲಾಗಟ್ಟೆ ಶೇಖರಪ್ಪ. ಮಹಮ್ಮದ್ ಗೌಸ್. ತಿಮ್ಮಣ್ಣ ರಂಗಸ್ವಾಮಿ.ವಿಜಯ್. ಕುಮಾರ್ ನಾಯ್ಕ್. ಡಿಪಿ ಜಗಳೂರಯ್ಯ.ಅನುಪ್ ರೆಡ್ಡಿ.ಆದರ್ಶ ಕೃಷಿ ಅಧಿಕಾರಿಗಳಾದ ರೇಣುಕೇಶ್. ಗಿರೀಶ್ ಸೇರಿದಂತೆ ರೈತರು ಇದ್ದರು.