ಪ್ರಜಾ ನಾಯಕ ಸುದ್ದಿ ದಾವಣಗೆರೆ:- ಹಳೇ ಬಾತಿಯ ಡಾಬಾ ವೊಂದರಲ್ಲಿ ಬಳಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿ ಗಳಿಂದ 20 ಸಾವಿರ ಮೌಲ್ಯದ ಗಾಂಜಾ ಸೊಪ್ಪು ವಶಕ್ಕೆ ಪಡೆಯಲಾಗಿದೆ.
ಜೂನ್ 07 ರಂದು ಹಳೇಬಾತಿ ಗ್ರಾಮದ ಹತ್ತಿರವಿರುವ ಕೊಲ್ಲಾ ಪುರಿ ಡಾಬಾದ ಬಳಿ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀ ಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹಿರಿಯ ಸಹಾಯಕ ಪೊಲೀಸ್ ಅಧೀಕ್ಷಕಿ ಕನ್ನಿಕಾ ಸಿಕ್ರೀವಾಲಾ, ಪಿಎಸ್ ಐ ಹಾರೂನ್ ಅಖರ್ ಹಾಗೂ ಸಿಬ್ಬಂದಿ ಒಳ ಗೊಂಡ ತಂಡವನ್ನು ಸ್ಥಳಕ್ಕೆ ಭೇಟಿ ನೀಡಿ, ಆರೋಪಿಗಳನ್ನು ಬಂಧಿ ಸಲಾಗಿದೆ.
ಗಾಂಜಾ ಮಾರಾಟ ಮಾಡುತ್ತಿದ್ದ 1) ಆದರ್ಶ @ ಆದಿ, 25ವರ್ಷ, ಪೇಂಟ್ ಕೆಲಸ, ರಾಣೆಬೆನ್ನೂರು ತಾ. ಹಾವೇರಿ, 2)ವಾಸೀಮ್ ಲಕ್ಕುಂಡಿ, 24 ವರ್ಷ, ವೇಲ್ಡಿಂಗ್ ಕೆಲಸ, ವಾಸ: ಅಜಾದ್ ನಗರ ಹಿರೆಕೇರೂರು ತಾ, ಹಾವೇರಿ ಜಿಲ್ಲೆ, 3)ಕಿರಣ್ ಚೌಹಾಣ್, 22 ವರ್ಷ,ತರಗಾರ ಕೆಲಸ, ವಾಸ ಮೃತುಂಜಯ ನಗರ,ರಾಣೆಬೆ ನ್ನೂ ರುತಾ. ಹಾವೇರಿ ಇವರ ಮೇಲೆ ದಾಳಿ ನಡೆಸಿ ಇವರುಗಳಿಂದ ಸುಮಾರು 20,000 ರೂ ಬೆಲೆಯ 01 ಕೆ.ಜಿ ತೂಕದ ಗಾಂಜಾ ಒಣಗಿದ ಸೊಪ್ಪುನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಆರೋಪಿತರ ವಿರುದ್ಧ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಪತ್ತೆ ಕಾರ್ಯದಲ್ಲಿ ಕಾರ್ಯದಲ್ಲಿ ಯಶಸ್ವಿಯಾದ ಪೊಲೀಸ್ ಅದಿ ಕಾರಿಗಳು ಮತ್ತು ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ಅಧಿಕ್ಷಕ ಡಾ. ಅರುಣ ಕೆ. ಶ್ಲಾಘಿಸಿದ್ದಾರೆ.