ಪ್ರಜಾ ನಾಯಕ ಸುದ್ದಿ ಜಗಳೂರು -: ತಾಲ್ಲೂಕಿನ ಅಣಬೂರು ಗೊಲ್ಲರಹಟ್ಟಿ ಗ್ರಾಮದ ಕಾಟಲಿಂಗಪ್ಪ 42 ವರ್ಷ ಮತ್ತು ರಾಜು 36 ವರ್ಷ ಸಿಡಿಲು ಬಡಿದು ಸಾವನ್ನಪ್ಪಿದ ಘಟನೆ ಜರುಗಿದೆ.ಪ್ರಕೃತಿ ವಿಕೋಪಕ್ಕೆ ಬಲಿಯಾಗಿರುವ ದುರ್ದೈವಿಗಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ .
ತಾಲ್ಲೂಕಿನ ಅಣಬೂರು ಬಳಿಯಿರುವ ಜಮಿನಿನಲ್ಲಿ ಹತ್ತಿ ಬೀಜ ಬಿತ್ತನೆ ಮಾಡಲು ತನ್ನ ಸಂಬಂಧಿಕರೊಂದಿಗೆ ತೆರಳಿದ ರಾಜು ಮತ್ತು ಕಾಟಪ್ಪ ಎಂಬವವರು ಹೊಲಕ್ಕೆ ತೆರಳಿದ ಹಿನ್ನಲೆಯಲ್ಲಿ ಇಂದು ಸಾಯಂಕಾಲ 5.30 ರ ಸಮಯದಲ್ಲಿ ಮಳೆ ಬರುವ ಹಿನ್ನಲೆಯಲ್ಲಿ ರಾಜು ಮತ್ತು ಕಾಟಲಿಂಗಪ್ಪ ಮರದ ಬಳಿ ಆಶ್ರಯ ಪಡೆದು ಕುಳಿತುಕೊಂಡ ಸಮಯದಲ್ಲಿ ಗುಡುಗು ಮಳೆ ಬರುವ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಜಮಿನಿಗೆ ಒಟ್ಟು ಐದು ಮಂದಿ ತೆರಳಿದ್ದರು ಹಿಡಿ ದಿನ ಒಟ್ಟಿಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರು ಸಾಯಂಕಾಲ ಮಿಂಚು ಗುಡುಗು ಸಹಿತ ಮಳೆ ಬರುತ್ತಿದ್ದ ಸಿಡಿಲಿಗೆ ಇಬ್ಬರಿಗೆ ಸಿಡಿಲು ಬಡಿದು ಸ್ಥಳದಲ್ಲಿಯೆ ಸಾವನ್ನಪ್ಪಿರುತ್ತಾರೆ ಎಂದು ತಿಳುದು ಬಂದಿದ್ದು. ಜಮಿನಿನಲ್ಲಿ ಇವರ ಸಂಬಂಧಿಕರು ಮಳೆ ಬರುವ ಸಂದರ್ಭದಲ್ಲಿ ಇನ್ನು ಮೂರು ಜನ ಒಂದು ಕಡೆ ಕುಳಿತುಕೊಂಡಿ ದ್ದರು ಅವರಿಗೆ ಯಾವುದೆ ಹಾನಿಯಾಗಿಲ್ಲ.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಶಾಸಕ ಬಿ.ದೇವೇಂದ್ರಪ್ಪ ಭೇಟಿ:- ಮೃತ ಕುಟುಂಬದವರಿಗೆ ವೈಯಕ್ತಿಕವಾಗಿ ತಲಾ ₹25000 ಪರಿಹಾರ ನೀಡಿ.ಸರಕಾರದಿಂದ ಪ್ರಕೃತಿ ವಿಕೋಪ ತುರ್ತು ನಿಧಿಯಡಿ ಪರಿ ಹಾರಕ್ಕೆ ಶಿಫಾರಸ್ಸು ಮಾಡುವೆ ಎಂದರು.
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಜಿ ಸಂತೋಷಕುಮಾರ್ ಭೇಟಿ:- ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ಜಿ. ಸಂತೋಷ್ ಕುಮಾರ್ ಹಾಗೂ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಅವರು ಭೇಟಿ ಪ್ರಕೃತಿ ವಿಕೋಪ ಯೋಜನೆಯಲ್ಲಿ ಮೃತಪಟ್ಟ ತಲಾ ಇಬ್ಬರಿಗೆ 5 ಲಕ್ಷ ರೂಗಳಂತೆ ಶಾಸಕರ ಸೂಚನೆ ಮೇರೆಗೆ ಶೀಘ್ರದಲ್ಲೇ ಪರಿಹಾರ ಹಣವನ್ನು ನೀಡುತ್ತೇವೆ ಎಂದು ನೀಡಲು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿ ಸಂತೋಷ್ ಕುಮಾರ್ ಜಿ. ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ಮತ್ತು ಸಿಬ್ಬಂದಿಗಳು ಹಾಗೂ ಕಲ್ಲೇಶ್ ರಾಜ್ ಪಾಟೀಲ್. ಪ್ರಧಾನ ಕಾರ್ಯದರ್ಶಿ ಪಲ್ಲಾ ಗಟ್ಟೆ ಶೇಖರಪ್ಪ. ಮಹಮದ್ ಗೌಸ್. ಸೇರಿದಂತೆ ಊರಿನ ಮುಖಂಡರು ಹಾಗೂ ಸಾರ್ವಜನಿಕರು ಹಾಜರಿದ್ದರು