ಪ್ರಜಾ ನಾಯಕ ಸುದ್ದಿ ಜಗಳೂರು -: ತಾಲೂಕಿನ ಹಾಲೇಕಲ್ಲು ಗ್ರಾಮದಲ್ಲಿ ಶಾಲಾ ದುರಸ್ಥಿ ಮತ್ತು ಶಾಲಾ ಮೇಲುಸ್ತವರಿ ಸಮಿತಿ ಸಭೆಯನ್ನ ಉದ್ದೇಶಿಸಿ ಮಾತನಾಡಿ ಅರಸಿಕೆರೆ ಭಾಗದಲ್ಲಿ ತ್ರೈಮಾ ಸಿಕ ಸಭೆ ನಡೆಸುತ್ತಿರುವ ವೇಳೆ ಮದ್ಯಮ ಸ್ನೇಹಿತರು ಕರೆ ಮಾಡಿ ಮಾಹಿತಿ ತಿಳಿಸಿದರು ನಂತರ ನಾನು ಬಂದು ಪರಿಶೀಲನೆ ನಡೆಸಿದೆ ಮಕ್ಕಳ ಕಲಿಕೆಗೆ ಶಾಲಾ ಕೊಠಡಿ ಬಹಳ ಮುಖ್ಯವಾಗಿದ್ದು ಮಕ್ಕಳ ಅನುಕೂಲಕ್ಕಾಗಿ ಮುಂದಿನ ಮೂರು ತಿಂಗಳಲ್ಲಿ ಕಾಮಗಾರಿ ಪ್ರಾರಂಬಿಸಲಾಗುವುದು ಎಂದರು.
ಶಾಲೆಯಲ್ಲಿ ತುಂಬಾ ದುಸ್ತಿಯಲ್ಲಿರುವ ಕೊಠಡಿಗಳನ್ನು ಸಂಪೂರ್ಣ ವಾಗಿ ತೆಗೆದು ಹೊಸ ಕಟ್ಟಡ ಮಾಡಿಸಲಾಗುವುದು ಗ್ರಾಮಸ್ಥರು ಹೇಳುವ ಪ್ರಕಾರ ಹಿಂದಿನ ಶಾಸಕ ಕಟ್ಟಡಕ್ಕೆ ದುರಸ್ತಿ ಹಾಕುವಂತ ಕೆಲಸ ಮಾಡಿದ್ದಾರೆ ಅವರಂತೆ ನಾನು ಮಾಡುವುದಿಲ್ಲ ಎಂದರು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಇನ್ನು ಆನೇಕ ಶಾಲೆಗಳ ಕೊಠ ಡಿಗಳ ಸಮಸ್ಯೆ ಇದ್ದು ಬಹುತೇಕ ಎಲ್ಲಾ ಶಾಲೆಗಳನ್ನು ಹಂತ ಹoತ ವಾಗಿ ಶಾಲೆಗಳನ್ನು ಅಭಿವೃದ್ದಿ ಪಡಿಸಲಾಗುವುದು.
ತಹಶೀಲ್ದಾರ್ ಜಿ.ಸಂತೋಷ್ ಕುಮಾರ್ ಮಾತನಾಡಿ ಶತಮಾನ ಗಳ ಪೂರೈಸಿದಶಾಲೆಯಾಗಿದ್ದು ಶಾಲೆ ಸೇರಿದಂತೆ ವಿವಿಧ ಅನು ದಾನಗಳನ್ನ ಬಳಸಿಕೊಂಡು ಕಟ್ಟಡ ನಿರ್ಮಾಣಕ್ಕೆ ಒತ್ತು ನೀಡಲಾ ಗುವುದು ಈ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗು ವುದು ಎಂದರು.
ಡಿ.ಡಿ.ಪಿ.ಐ ತಿಪ್ಪೇಶಪ್ಪ ಮಾತನಾಡಿ ಶಾಲೆಯ ದುರಸ್ಥಿಯ ಬಗ್ಗೆ ಸರ್ಕಾರಕ್ಕೆ ಶೀಘ್ರದಲ್ಲಿಯೇ ಮಾಡಲಾಗುವುದು ಸರಕಾರ ಈಗ ತಾನೆ ರಚನೆಯಾಗಿದೆ ಬಜೆಟ್ ಆದ ನಂತರ ಅನುದಾನ ಬರಲು ಸಹಕಾರಿಯಾಗಲಿದೆ ಎಂದರು.
ಬಿ.ಆರ್.ಸಿ ಹಾಲಪ್ಪ ಮಾತನಾಡಿ ಶಾಲಾ ಕಟ್ಟಡ ನಿರ್ಮಾಣ ಕುರಿತು ಹಲವಾರು ಭಾರಿ ಇಲಾಖೆಯ ಗಮನಕ್ಕೆ ತರಲಾಗಿದೆ ಎಂದರು ಈ ಶಾಲೆಯಲ್ಲಿ ಯೋಗ್ಯವಿಲ್ಲ ಎಂಬವು ದರ ಬಗ್ಗೆ ತಜ್ಞ ರಿಂದ ವರದಿ ತರಿಸಿಕೊಂಡು ಇಗ ಎಷ್ಟು ಕೊಠಡಿಗಳ ಅವಶ್ಯಕತೆ ಇದೆ ಕಟ್ಟಡ ನಿರ್ಮಿಸಲಿಕ್ಕೆ ಅನುಕೂಲವಾಗಿದೆ ಇಂದು ನಡೆದ ಸಭೆಯ ನಡವಳಿಗಳನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ಸಲ್ಲಿಸಲಾ ಗುವುದು ಗ್ರಾಮಸ್ಥರು ಸರ್ಕಾರಿ ಶಾಲೆಗಳ ದಾಖಲಾತಿಯನ್ನು ಹೆಚ್ಚಿ ಸಬೇಕು ಎಂದರು.
ಗ್ರಾಮದ ಮುಖಂಡ ಹಾಗೂ ನಿವೃತ್ತ ಶಿಕ್ಷಕ ರೇವಣ ಸಿದ್ದಪ್ಪ ಮಾತ ನಾಡಿ ಶಾಲೆ ಪ್ರಾರಂಭ ವಾಗಿ 137 ವರ್ಷ ಕಳೆದಿದೆ ಆದರೆ ಕೊಠಡಿ ಗಳಿಗೆ ಅಷ್ಟು ವರ್ಷ ವಾಗಿಲ್ಲ ಶಾಲೆಯ ಕೆಲವು ಕೊಠಡಿಗಳು ಬೀಳು ಹಂತದಲ್ಲಿದ್ದು ಮಕ್ಜಳಿಗ ಯಾವುದೆ ರೀತಿಯ ತೊಂದರೆಯಾಗ ದಂತೆ ನಿಗಾವಹಿಸಬೇಕು ಎಂದರು ಕೊಠಡಿ ನಿರ್ಮಿಸಿವಂತೆ ಎಸ್ ಡಿಎಮ್ ಸಿ ವತಿಯಿಂದ ಹಲವಾರು ಭಾರಿ ಮನವಿ ಮಾಡಿದರು ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಲಿಲ್ಲ ಆದರೆ ಶಾಸಕರುಸ್ಪಂದಿಸಿ ಇಲ್ಲಿಯವರೆಗೆ ಬಂದು ಸಭೆ ನಡೆಸಿದ್ದಾರೆ ಶಾಸಕರು 4 ಕೊಠಡಿಗಳನ್ನು ನಿರ್ಮಿಸಿಕೊಡಬಕೆಂದು ಮನವಿ ಮಾಡಿದರು
ಈ ಸಂಧರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇ ಶಕ ಮಹೇಶ್ವರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಕೆ ಬಸವ ರಾಜ್,ಪ್ರಭಾರಿ ಬಿ.ಇ.ಓ ಸುರೇಶ್ ರಡ್ಡಿ,ನಾಗರಾಜ, ಆರ್.ಐ ಧನಂಜಯ್, ಶ್ರೀನಿವಾಸ್,ಕಾಂಗ್ರೇಸ್ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಹಮ್ಮದ್ ಗೌಸ್. ಗ್ರಾಮ ಪಂಚಾ ಯಿತಿ ಸದಸ್ಯರಾದ ದ್ಯಾಮಣ್ಣ,ಪರಶುರಾಮ,ತಿಮ್ಮರೆಡ್ಡಿ, ಮದನ್ ಕುಮಾರ್, ಗ್ರಾ. ಪಂ ಕಾರ್ಯದರ್ಶಿ ಜಯ್ಯಣ್ಣ, ಕರವ ಸೂಲಿಗಾರ ಬಸವರಾಜ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.