ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದ ವಾಲ್ಮೀಕಿ ಭವನದ ಕಟ್ಟಡ ಕಾಮಗಾರಿಯನ್ನು ಶಾಸಕ ಬಿ.ದೇವೇಂದ್ರಪ್ಪ ವೀಕ್ಷಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪಟ್ಟಣದ ಕೇಂದ್ರ ಸ್ಥಾನದಲ್ಲಿ 3.ಕೋಟಿ 75 ಲಕ್ಷ ವೆಚ್ಚದಲ್ಲಿ ಮೇಲ್ಮಾಡಿ ಮತ್ತು ಕೆಳ ಮಹಡಿಯಲ್ಲಿ ಸುಸಜ್ಜಿತ ವಾಲ್ಮೀಕಿ ಭವನ 12 ರೋಮ್. ಶೌಚಾಲಯ ಸೇರಿದಂತೆ ಸಮುದಾಯದ ಕಲ್ಯಾಣ ಕಾರ್ಯಕ್ರಮ ಗಳಿಗೆ ಅನುಕೂಲವಾಗಲಿದೆ.ಕಟ್ಟಡ ಕಾಮಗಾರಿ ಶೀಘ್ರ ಪೂರ್ಣ ಗೊಳಿಸಿ ನನ್ನ ಆಡಳಿತಾವಧಿಯಲ್ಲಿ ಲೊಕಾರ್ಪಣೆಗೊಳ್ಳಲಿದೆ.ಕಟ್ಟ ಡದ ನಿರ್ವಹಣೆಯನ್ನು ಸಂಬಂಧಿಸಿದ ಇಲಾಖೆ ಜಾಗರೂಕತೆ ಯಿಂದ ಹಾಳಾಗದಂತೆ ನೋಡಿಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿ ಗಳಿಗೆ ಸೂಚಿಸಿದರು.
ಪಕ್ಕದಲ್ಲಿನ ವಾಲ್ಮೀಕಿ ಭವನದ ಹಳೇ ಕಟ್ಟಡದಲ್ಲಿ ಸಭೆ ಸಮಾ ರಂಭಗಳು ವಿವಾಹ ಕಾರ್ಯಕ್ರಮಗಳು ಸುಗಮವಾಗಿ ಜರು ಗುತ್ತಿವೆ.ಕೇವಲ ವಾಲ್ಮೀಕಿ ಸಮುದಾಯಕ್ಕೆ ಸೀಮಿತವಲ್ಲದೆ ಸಹೋದರ ಸಮಾಜಗಳ ಕಲ್ಯಾಣಕಾರ್ಯಕ್ರಮಗಳಿಗೆ ಸಹಕಾರಿ ಯಾಗಿದೆ.ಅದೇ ರೀತಿ ಈ ಕಟ್ಟಡ ಉಪಯೋಗವಾಗಲಿದೆ ಎಂದು ತಿಳಿಸಿದರು.
ಕಟ್ಟಡದ ಅವ್ಯವಸ್ಥೆ ಕಂಡು ಗರಂ ಆದ ಶಾಸಕ:- ಇಲ್ಲಿ ಗಾಜಿನ ಕಿಟಕಿಗಳು ಹಾಳಾಗಿವೆ ಸರಿಪಡಿಸಿ ಸುತ್ತಲೂ ಸ್ವಚ್ಛತೆ ಬಿಗಿ ಭದ್ರತೆ ಕಾಪಾಡಿಕೊಳ್ಳಿ.ಸಂಬಂಧಿಸಿದ ಇಲಾಖೆಯ ಎಇಇ ಮತ್ತು ಇಂಜಿನಿಯರ್ ಗಳಿಗೆ ಕಾಳಜಿಯಿಲ್ಲ ಸ್ಥಳಿಯವಾಗಿದ್ದು ನೋಡಿ ಕೊಳ್ಳಬೇಕು ಎಂದು ಗರಂ ಆದರು.
ಸಂದರ್ಭದಲ್ಲಿ ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಹೇಶ್ವರಪ್ಪ.ಬಿ.ಸೇರಿದಂತೆ ಕಾರ್ಯಕರ್ತರು ಇದ್ದರು.