ಪ್ರಜಾ ನಾಯಕ ಸುದ್ದಿ ಜಗಳೂರು :- ವಸತಿಯೋಜನೆ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯಗಳನ್ನು ಸದುಪಯೋಗಪಡೆದುಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಆಸ್ತಿಯನ್ನಾಗಿಸಬೇಕು ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಸಲಹೆ ನೀಡಿದರು.
ತಾಲೂಕಿನ ಅಸಗೋಡು ಗ್ರಾಮದ ಶಂಭುಲಿಂಗೇಶ್ವರ ದೇವಸ್ಥಾನ ದ ಸಮುದಾಯಭವನದಲ್ಲಿ 22 ಗ್ರಾಮಪಂಚಾಯಿತಿ ವ್ಯಾಪ್ತಿಯ ಪ್ರಧಾನ ಮಂತ್ರಿ ಆವಾಸ್ (ಗ್ರಾಮೀಣ) ಯೋಜನೆ ಫಲಾನುಭವಿ ಗಳ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರದಲ್ಲಿನ ಬಿಜೆಪಿ ಆಡಳಿತ ಸರಕಾರದ ಪ್ರಧಾನಿ ಮೋದಿಜಿ ಅವರ ಸೂರು ಕಲ್ಪಿಸುವ ಸಂಕಲ್ಪದಂತೆ ಬಡವರ್ಗದ ವಸತಿರಹಿತ ರಿಗೆ ಪ್ರಧಾನಮಂತ್ರಿ ಆವಾಸ್ ವಸತಿ ಯೋಜನೆಯಡಿ 1001 ಗುರಿಯಲ್ಲಿ 831 ಮನೆಗಳನ್ನು ಮಂಜೂರು ಮಾಡಲಾಗಿದೆ.
ಆಯುಷ್ಮಾನ್ ಭಾರತ್ ಕಾರ್ಡ್ ನಿಂದ ಆರೋಗ್ಯ ಸೇವೆಗಾಗಿ ಲಭ್ಯ ವಿದ್ದು.ಪ್ರತಿಯೊಬ್ಬರೂ ಕಡ್ಡಾಯವಾಗಿ ಕಾರ್ಡ್ ಮಾಡಿಸಬೇಕು. ಅನಾರೋಗ್ಯದ ವೇಳೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ₹ 5 ಲಕ್ಷದವರೆಗೆ ಉಚಿತ ಸೌಲಭ್ಯವನ್ನು ಬಡವರು ಪಡೆಯಬಹುದು.ಜನ್ ಧನ್ ಖಾತೆ ತೆರೆದರೆ ನೇರವಾಗಿ ಫಲಾನುಭವಿಗಳಿಗೆ ಹಣಜಮಾಮಾಡ ಲಾಗುವುದು.ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಡಿ ವಾರ್ಷಿಕವಾಗಿ ₹430 ಶುಲ್ಕ ಭರಿಸಿದರೆ. ಎಲ್ಲಾ ವರ್ಗದವರಿಗೆ ಅಪಘಾತದ ವೇಳೆ ₹2ಲಕ್ಷ ಮೃತರಿಗೆ ₹5 ಲಕ್ಷ ಪರಿಹಾರ ಒದಗಿಸ ಲಾಗುವುದು.ಸಣ್ಣ ಕೈಗಾರಿಕೋದ್ಯಮಿಗಳಿಗೆ ₹2ಲಕ್ಷದವ ರೆಗೆ ಸಾಲಸೌಲಭ್ಯ ಹಾಗೂ ಮಹಿಳಾ ಸ್ವಸಹಾಯ ಸಂಘಗಳಿಗೆ ತಲಾ ₹15ಲಕ್ಷ ಸಹಾಯಧನ ನೀಡಲಾಗಿದೆ. ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಉದಾಸೀನ ಸಲ್ಲದು ಎಂದು ಹೇಳಿದರು.
ಕೋವಿಡ್ ಸಂದರ್ಭದಲ್ಲಿ 110 ಕೋಟಿ ಜನರಿಗೆ ಎರಡು ಬಾರಿ ವಾಕ್ಸಿನೇಷನ್ ಹಾಗೂ ತಲಾ 5 ಕೆಜಿ ಅಕ್ಕಿ ಉಚಿತವಾಗಿ ನೀಡ ಲಾಗಿದೆ.ಪ್ರಧಾನಿ ಮೋದಿಜಿ ಅವರ ಅಭಿವೃದ್ದಿ ಯೋಜನೆಗಳಿಂದ ಭಾರತ ವಿಶ್ವಕ್ಕೆ ಗುರುವಾಗಿದೆ ಎಂದರು.
ಕ್ಷೇತ್ರಕ್ಕೆ ₹4500ಕೋಟಿ ಅನುದಾನದಲ್ಲಿ 3 ಮಹತ್ತರ ನೀರಾವರಿ ಯೋಜನೆಗಳು ಸೇರಿದಂತೆ ರಸ್ತೆ,ಭವನಗಳ ನಿರ್ಮಾಣ ಇತರೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಂಡಿದ್ದರೂ ಎಸ್.ವಿ.ರಾಮ ಚಂದ್ರ ಅವರ ಸೋತರು ಆದರೂ ಅವರು ಸೋಲಿನಿಂದ ದೃತಿಗೆ ಟ್ಟಿಲ್ಲ ಜನರ ಮಧ್ಯೆ ಇದ್ದಾರೆ ಎಂದು ತಿಳಿಸಿದರು.
” ಸರಕಾರಿ ಕಾರ್ಯಕ್ರಮಕ್ಕೆ ಶಾಸಕ ಬಿ.ದೇವೇಂದ್ರಪ್ಪ ಅವರನ್ನು ಆಹ್ವಾನಿಸಲಾಗಿತ್ತು.ಯಾವುದೇ ಪಕ್ಷದಿಂದ ಗೆಲ್ಲಲಿ ಕ್ಷೇತ್ರದ ಅಭಿ ವೃದ್ದಿ ವಿಚಾರದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ ಬಳಕೆಮಾಡಿ ಕೊಳ್ಳಲಿ ಎಂದರು”
ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ,ನಾನು ಸೋತಿರ ಬಹುದು.ಕ್ಷೇತ್ರದ ಜನತೆಯ ಮೇಲಿನ ಅಭಿಮಾನ ಕುಂದಿಲ್ಲ.ನನ್ನ ಆಡಳಿತಾವಧಿಯಲ್ಲಿ ಮಂಜೂರಾದ ಮನೆಗಳನ್ನು ಯಾವುದೇ ಮದ್ಯವರ್ತಿಗಳಿಗೆ,ಫಲಾನುಭವಿಗಳಿಂದ ಲಂಚ ಪಡೆಯದೆ ಪಾರ ದರ್ಶಕವಾಗಿ ನೀಡಬೇಕು ಎಂದು ತಾಕೀತು ಮಾಡಿದರು.
ಸಂದರ್ಭದಲ್ಲಿ ತಾ.ಪಂ ಇಓ ಚಂದ್ರಶೇಖರ್,ವಿವಿಧ ಗ್ರಾ.ಪಂ. ಅಧ್ಯಕ್ಷರಾದ ರೇಣುಕಮ್ಮ.ಸಿದ್ದಪ್ಪ,ಪವಿತ್ರಾವಿರೇಶ್,ರೇಖಾ ರಾಜ್ ಕುಮಾರ್,ಬಸವರಾಜ್,ಉಪಾಧ್ಯಕ್ಷೆ ನಾಗಮ್ಮ,ಸದಸ್ಯರಾದ ವಿರೇಶ್, ರೇಖಾ,ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ.ಮಹೇಶ್,ಜಿ. ಪಂ. ಮಾಜಿ ಸದಸ್ಯ ಎಸ್.ಕೆ.ಮಂಜುನಾಥ್,ವಿವಿಧ ಗ್ರಾಮಪಂಚಾ ಯಿತಿ ಅಧ್ಯಕ್ಷರು ಉಪಾಧ್ಯಕ್ಷರುಗಳು ಸದಸ್ಯರುಗಳು,ಮುಖಂಡ ರಾದ ಶಿವಕುಮಾರ್ ಸ್ವಾಮಿ,ಪೂಜಾರಿ ಸಿದ್ದಪ್ಪ.ಪವಿವಿಧ ಗ್ರಾಮ ಪಂಚಾ ಯಿತಿ ಪಿಡಿಓ ಗಳು ಭಾಗವಹಿಸಿದ್ದರು.