ಪ್ರಜಾ ನಾಯಕ ಸುದ್ದಿ ಜಗಳೂರು :- ಪ್ಲಾಸ್ಟಿಕ್ ಮುಕ್ತ ಪರಿಸರಕ್ಕೆ ಕೈಜೋಡಿಸಿ ಎಂದು ಶಾಸಕ ಬಿ.ದೇವೇಂದ್ರಪ್ಪ ಕರೆ ನೀಡಿದರು.
ಪಟ್ಟಣದ ಹಳೇ ಪಟ್ಟಣ ಪಂಚಾಯಿತಿ ಮುಂಬಾಗ ಮಾಸಿಕವಾಗಿ ಕಸಗುಡಿಸುವ ಮೂಲಕ ಸ್ವಚ್ಛತೆಯ ಜಾಗೃತಿ ಅಭಿಯಾನ ಕುರಿತು ಅವರು ಮಾತನಾಡಿದರು.
ಮಾನವನ ಚಟುವಟಿಕೆಗಳಿಂದ ಪರಿಸರದಲ್ಲಿ ಕೊಳೆಯದಂತಹ ಪ್ಲಾಸ್ಟಿಕ್ ನಂತಹ ತ್ಯಾಜ್ಯ ವಸ್ತುಗಳನ್ನು,ಪರಿಸರ ಮಾಲಿನ್ಯಕ್ಕೆ ಕಾರಣ ವಾಗುವ ವಿಷಪೂರಿತ ಘನ ತ್ಯಾಜ್ಯವಸ್ತುಗಳನ್ನು ಎಲ್ಲಂದರಲ್ಲಿ ವಿಲೆವಾರಿ ಮಾಡದೆ ನಿಗದಿತ ಸ್ಥಳದಲ್ಲಿ ಸಂಗ್ರಹಣೆ ಮಾಡಬೇಕು. ಪಟ್ಟಣವನ್ನು ಪ್ರತಿನಿತ್ಯ ಸುಂದರವನ್ನಾಗಿಸುವ ಪೌರಕಾರ್ಮಿಕರಿಗೆ ಗೌರವ ಸಲ್ಲಿಸಬೇಕು.ನನ್ನ ಆಡಳಿತಾವಧಿಯಲ್ಲಿ ಪೌರ ಕಾರ್ಮಿಕರ ಶ್ರೆಯೋಭಿವೃದ್ದಿಗೆ ಬದ್ದನಾಗಿ ಸದಾ ಧ್ವನಿಯಾಗಿರುವೆ ಎಂದು ಹೇಳಿ ದರು.
ಅಧಿಕಾರಿಗಳಿಗೆ ತರಾಟೆ :- ಹಳೇ ಸಾರ್ವಜನಿಕ ಆಸ್ಪತ್ರೆ ಹಿಂಬಾಗ ಕಲುಷಿತ ಚರಂಡಿ,ಕಸ,ತ್ಯಾಜ್ಯ ವಸ್ತುಗಳನ್ನು ಸ್ವಚ್ಛಗೊಳಿಸಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಹಾಗೂ ಮುಖ್ಯಾಧಿಕಾರಿಗೆ ತರಾಟೆ ತೆಗದುಕೊಂಡರು.
ಪಟ್ಟಣದ ಮರೇನಹಳ್ಳಿ,ರಾಜೇಂದ್ರ ಪ್ರಸಾದ್ ರಸ್ತೆ,ಬಯಲು ರಂಗ ಮಂದಿರ,ಇಂದಿರಾ ಕ್ಯಾಂಟಿನ್, ವಿವಿಧ ರಸ್ತೆಗಳಲ್ಲಿ ಪೌರಕಾರ್ಮಿಕ ರೊಂದಿಗೆ ಕಾಲ್ನಡಿಗೆಯಲ್ಲಿ ಸಂಚರಿಸಿ ಸ್ವಚ್ಛತೆ ಕಾಪಾಡಲು ಸೂಚಿಸಿದರು
ಶನಿವಾರ ರಾತ್ರಿ ತಾಲೂಕಿನ ಹನುಮಂತಾಪುರ ಗ್ರಾಮದ ಕೆಳ ಗೋಟೆ ಬಸವರಾಜ್ ಎಂಬ ವ್ಯಕ್ತಿ ವಿದ್ಯುತ್ ತಗುಲಿ ಸಾವನ್ನಪ್ಪಿದ್ದು. ಶಾಸಕರು ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯ ಶವಗಾರದ ಬಳಿ ಭೇಟಿ ನೀಡಿ ಶಾಸಕ ದೇವೇಂದ್ರಪ್ಪ ಅವರು ವೈಯಕ್ತಿಕ 20,000 ಸಹಾಯಧನದೊಂದಿಗೆ ಕುಟುಂಬದವರಿಗೆ ಸಾಂತ್ವಾನ ಹೇಳಿದರು .ಬೆಸ್ಕಾಂ ಅಧಿಕಾರಿಗಳಿಗೆ ದೂರವಾಣಿ ಕರೆಯಲ್ಲಿ ಕೂಡಲೇ ಸರ ಕಾರ ದಿಂದ ಮೃತರಿಗೆ ಸೌಲಭ್ಯ ಒದಗಿಸಲು ಅಗತ್ಯ ಕ್ರಮಕೈಗೊಳ್ಳ ಬೇಕು ಎಂದು ತಿಳಿಸಿದರು.
ಕೆ.ಎಸ್.ಆರ್.ಟಿ.ಸಿ ಬಸ್ ಗಳನ್ನು ಸಮಯಕ್ಕೆ ಸರಿಯಾಗಿ ರಹ ದಾರಿಯನ್ವಯ ಸಂಚಾರ ಮಾಡಬೇಕು.ನಮ್ಮ ಕಾಂಗ್ರೆಸ್ ಆಡಳಿತ ಸರಕಾರದ ಗ್ಯಾರಂಟಿ ಯೋಜನೆಯಾದ ಶಕ್ತಿ ಯೋಜನೆಯಿಂದ ತಾಲೂಕಿನ ಮಹಿಳೆಯರಿಗೆ ಸೌಲಭ್ಯ ಸದುಪಯೋಗವಾಗಬೇಕು. ಗೊಂದಲ ಸೃಷ್ಠಿಸಿ ಮಹಿಳೆಯರ ವಾಗ್ವಾದಕ್ಕೆಗುರಿಯಾಗಬಾರದು ಎಂದು ನಿಯಂತ್ರಣ ಅಧಿಕಾರಿಗೆ ಎಚ್ಚರಿಕೆ ನೀಡಿದರು.
ಪಟ್ಟಣದಲ್ಲಿ ಬಾರ್ ಗಳ ಮುಂಬಾಗದಲ್ಲಿ ಜನರು ಮದ್ಯಸೇವಿಸಿ ಖಾಲಿ ಬಾಟಲಿ,ಲೋಟಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ಜಾಗೃತಿ ಮೂಡಿಸಿ ಎಂದು ಬಾರ್ ಮಾಲಿಕರಿಗೆ ದೂರವಾಾಣಿ ಮೂಲಕ ತಿಳಿಸಿದರು.
“ನಂತರ ಇಂದಿರಾ ಕ್ಯಾಂಟಿನ್ ನಲ್ಲಿ ಪೌರಕಾರ್ಮಿಕ ಹಾಗೂ ಜನ ಸಾಮಾನ್ಯರೊಂದಿಗೆ ಮಂಡಕ್ಕಿ ಮೆಣಸಿನ ಕಾಯಿ ತಿಂಡಿ ಸವಿದು ಸ್ವಚ್ಛತೆ ಕಾಪಾಡಿ,ಗುಣಮಟ್ಟದ ಆಹಾರ ತಯಾರಿಸಲು ಸಲಹೆ ನೀಡಿದರು”
ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪ.ಪಂ ಸದಸ್ಯರಾದ ರಮೇಶ್ ರೆಡ್ಡಿ.ರವಿಕುಮಾರ್. ಆಹಮ್ಮದ್ ಅಲಿ,ಬೋರ್ ವೆಲ್ ಮoಜಣ್ಣ,ಶಕೀಲ್ ಅಹ್ಮದ್.ಮುಖ್ಯಧಿಕಾರಿ ಲೋಕ್ಯಾನಾಯ್ಕ, ಆರೋಗ್ಯ ನಿರೀಕ್ಷಕ ಖಿಫಾಯತ್,ಕಂದಾಯ ನಿರೀಕ್ಷಕ ಮೋಹಿದ್ದೀನ್,ಟಿ.ಎಚ್.ಓ ಡಾ.ನಾಗರಾಜ್,ಕಾ.ನಿ.ಪತ್ರ ಕರ್ತರ ಸಂಘದ ತಾಲೂಕು ಅಧ್ಯಕ್ಷ ಚಿದಾನಂದಪ್ಪ,ಮುಖಂಡ ರಾದ ಕೆಳಗೋಟೆ ಅಹಮ್ಮದ್ ಅಲಿ,ಷಂಷುದ್ದೀನ್,ಕಿರಾಣಿ ಅಂಗಡಿ ಮಾಲಿಕರಾದ ನಾಗರಾಜ್ ,ಬಸವರಾಜ್.ತಿಪ್ಪೇಸ್ವಾಮಿ .ಸೇರಿದಂತೆ ಕಾರ್ಯಕರ್ತರು ಮತ್ತು ಸಾರ್ವಜನಿಕರು ಇದ್ದರು.