ಪ್ರಜಾ ನಾಯಕ ಸುದ್ದಿ ಜಗಳೂರು :- ಪಟ್ಟಣದಲ್ಲಿನ ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣಾ ಅಭಿವೃದ್ಧಿ ಬ್ಯಾಂಕ್ ಆಡಳಿತ ಮಂಡಳಿ ಚುನಾವಣೆಗೆ ಸೋಮವಾರ ನಾಮಪತ್ರ ಸಲ್ಲಿಸಲು ಕೊನೆದಿನವಾಗಿದ್ದು ಅಣಬೂರು ಸಾಲಗಾರರ ಕ್ಷೇತ್ರದ ಪರಿಶಿಷ್ಠ ಪಂಗಡ ಮೀಸಲಾತಿ ಸ್ಥಾನ ದಿಂದ ಹಿರಿಯ ಮುಖಂಡರಾದ ಲಿಂಗಣ್ಣನಹಳ್ಳಿ ಕೆ.ತಿಮ್ಮರಾಯಪ್ಪ ಅವರು ನಿರ್ದೇಶಕರ ಸ್ಥಾನಕ್ಕೆ ಅವಿರೋದವಾಗಿ ಆಯ್ಕೆಯಾಗಿ ದ್ದಾರೆ
ಲಿಂಗಣ್ಣನಹಳ್ಳಿ ಗ್ರಾಮದ ಕೆ.ತಿಮ್ಮರಾಯಪ್ಪ ಅವರು ಸಹಕಾರಿ ಮತ್ತು ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಪ್ರಗತಿಪರ ರೈತರಲ್ಲಿ ಮುಂಚೂಣಿಯಲ್ಲಿ ಇದ್ದಾರೆ ಸದಾ ರೈತ ಪರ ಚಿಂತನೆಯುಳ್ಳ ತಿಮ್ಮರಾಯಪ್ಪ ಅವರು ಜಗಳೂರು ತಾಲ್ಲೂಕಿನಲ್ಲಿ ಎಲ್ಲರ ಮೆಚ್ಚಿನ ಹಿತೈಶಿಗಳಾಗಿದ್ದಾರೆ ಸತತ ವರ್ಷಗಳಿಂದಲೂ ಸಹಕಾರಿ ಕ್ಷೇತ್ರದಲ್ಲಿ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ
ಹಲವು ಬಾರಿ ಸಹಕಾರಿ ಬ್ಯಾಂಕ್ ಅಧ್ಯಕ್ಷರು ,ಸ್ಥಳೀಯ ಸೋಸೈಟಿ ಸಂಘದ ಅಧ್ಯಕ್ಷರು ನಿರ್ದೇಶಕರು ಆಗಿ ಕಾರ್ಯನಿರ್ವಹಿಸಿದ್ದಾರೆ ಹಿರಿಯ ಮುಖಂಡರಾದ ತಿಮ್ಮರಾಯಪ್ಪ ಅವರನ್ನ ಈ ಬಾರಿ ಸಹ ಕಾರಿ ಕೃಷಿ ಮತ್ತು ಗ್ರಾಮೀಣ ಅಬಿವೃದ್ದಿ ಬ್ಯಾಂಕ್ ಚುನಾವಣೆಯಲ್ಲಿ ಅಣಬೂರು ಸಾಲಗಾರರ ಕ್ಷೇತ್ರದಿಂದ ಪರಿಶಿಷ್ಠ ಪಂಗಡದ ಮೀಸ ಲಾತಿ ಸ್ಥಾನದಲ್ಲಿ ಅವರನ್ನು ನಿರ್ದೇಶಕರ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಸೋಮವಾರ ನಾಮಪತ್ರ ಪರಿಶೀಲನೆಯಲ್ಲಿ ಅವಿರೋಧ ವಾಗಿ ಆಯ್ಕೆ ಪ್ರಕ್ರಿಯೆ ನೆಡೆಯಿತು
ಹನುಮಂತಾಪುರ ಸಾಮಾನ್ಯ ಕ್ಷೇತ್ರ ನರೇಂದ್ರ ಬಾಬು ,ಬಿಳಿ ಚೋಡು ಕ್ಷೇತ್ರದ ಮೆದಕೇರನಹಳ್ಳಿ ಎನ್.ಬಿ.ರಾಜು ,ಬಿದರಿಕೆರೆ ರಾಘವೇಂದ್ರ , ಸೊಕ್ಕೆ ಶ್ರೀನಿವಾಸ್ ,ಹಿರೇಮಲ್ಲನ ಹೊಳೆ ಧನಂಜಯ ರೆಡ್ಡಿ , ಪರಿಶಿಷ್ಠ ಜಾತಿ ಮೀಸಲು ಕ್ಷೇತ್ರವಾದ ಜಗಳೂರು ಟೌನ್ -1 ಸಿ.ಟಿ.ರಾಘವೇಂದ್ರ , ಬಿ.ಸಿ.ಎಂ.ಎ ಕ್ಷೇತ್ರದ ದೊಣ್ಣೆಹಳ್ಳಿ ಕ್ಷೇತ್ರ ಚೌಡಮ್ಮ ,ಬಿ.ಸಿ.ಎಂ. ಬಿ ಹೊಸಕೆರೆ ಕ್ಷೇತ್ರದಿಂದ ಯು.ಜಿ.ವಾಮದೇವಪ್ಪ ,ಅವರು ಅವಿರೋಧವಾಗಿ ಅಯ್ಕೆಯಾಗಿ ದ್ದಾರೆ