ಪ್ರಜಾ ನಾಯಕ ಸುದ್ದಿ ಜಗಳೂರು :- ಯುವ ಸಮೂಹ ದುಶ್ಚಟ ಗಳಿಂದ ದೂರಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಸಲಹೆ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ,ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಬೆಳ್ತಂಗಡಿ,ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 1691ನೇ ಮದ್ಯವರ್ಜನ ಶಿಬಿರದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಕುಡಿತದ ಹವ್ಯಾಸಸಾಮಾಜಿಕ ಕಳಂಕವಾಗಿದ್ದು. ಮದ್ಯವ್ಯಸನದಿಂದ ಪ್ರತಿಯೊಬ್ಬರೂ ಮಕ್ತರಾಗಲು ಧರ್ಮಸ್ಥಳ ಗ್ರಾಮಾಭೀವೃದ್ದಿ ಸಂಘ ಮದ್ಯವರ್ಜನ ಶಿಬಿರಗಳ ಮೂಲಕ ವ್ಯಸ ನಿಗಳ ಮಾನಸಿಕ ಆಸ್ಮಿತೆ ಬದಲಾವಣೆ ಮಾಡುತ್ತಿರುವ ಸಾಮಾಜಿಕ ಹೊಣೆಗಾರಿಕೆ ಶ್ಲಾಘನೀಯ ಎಂದರು.
ಕುಟುಂಬದ ಸದಸ್ಯರ ಮಾತು ಕೇಳದ ಸಮಾಜದಲ್ಲಿ ಸ್ವಯಂ ಪ್ರೇರಿತವಾಗಿ ಭಾಗವಹಿಸಿದ 50ಕ್ಕೂ ಅಧಿಕ ಕುಟುಂಬಸ್ಥರು ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ಮದ್ಯವರ್ಜನ ಶಿಬಿರ ಯಶಸ್ವಿಗೊಳಿಸಬೇಕು ಎಂದರು
ಪೊಲೀಸ್ ವೃತ್ತ ನಿರೀಕ್ಷಕ ಶ್ರೀನಿವಾಸ್ ರಾವ್ ಮಾತನಾಡಿ,ಮದ್ಯ ವರ್ಜನದಿಂದ ಆರ್ಥಿಕ ಸಂಕಷ್ಟದೂರಾಗಿ ಕೌಟುಂಬಿಕ ನಿರ್ವಹಣೆ ಸುಗಮವಾಗಲಿದೆ.ಮಹಿಳೆಯರು ಪತಿಯರೊಂದಿಗೆ ಸಹಬಾಳ್ವೆಯ ಜೀವನ ಸಾಗಿಸಬೇಕು ಸರಕಾರದ ಗೃಹಲಕ್ಷ್ಮಿ,ಶಕ್ತಿ ಯೋಜನೆ ಸದು ಪಯೋಗ ಪಡೆದುಕೊಂಡು ದುಡಿಮೆಯ ಹಣವನ್ನು ಸಂಗ್ರಹಿಸಿ ಮಕ್ಕಳ ವ್ಯಾಸಂಗಕ್ಕೆ ಬಳಕೆಮಾಡಿಕೊಳ್ಳಿ ಎಂದು ಸಲಹೆ ನೀಡಿ ದರು.
ಚಿತ್ರದುರ್ಗ ಪ್ರಾದೇಶಿಕ ಜನಜಾಗೃತಿ ವೇದಿಕೆ ಅಧ್ಯಕ್ಷ ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿ,ರಾಜ್ಯದಲ್ಲಿ ಮದ್ಯದಂಗಡಿಗಳ ಸ್ಥಗಿತದಿಂದಾಗಲಿ ಅಥವಾ ಮದ್ಯ ವ್ಯಸನಿಗಳಿಗೆ ದಂಡನೆ,ಬಲ ವಂತದಿಂದ ಕುಡಿತ ಬಿಡಿಸಲು ಸಾಧ್ಯವಿಲ್ಲ.ಶಿಬಿರಗಳಿಂದ ಮನಪರಿವರ್ತನೆಗೊಂಡು ಸ್ವಯಂಪ್ರೇರಿತವಾಗಿ ಮದ್ಯಪಾನ ತ್ಯಜಿಸಲು ಧರ್ಮಾಧಿಕಾರಿ ವಿರೇಂದ್ರ ಹೆಗ್ಡೆಯವರು ಸಂಕಲ್ಪಗೈದಿ ದ್ದಾರೆ.ಸ್ಥಳಿಯ ಸಂಘಸಂಸ್ಥೆಯವರ ಸಹಕಾರದಿಂದ ಯಶಸ್ವಿ ಗೊಳ್ಳಲಿ,ಶಿಬಿರಾರ್ಥಿಗಳು ಸದುಪಯೋಗಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿ ದರು.
ಶಿಬಿರದ ಅಧ್ಯಕ್ಷ ಜಿ.ಎಸ್.ಚಿದಾನಂದ, ಗೌರವಾಧ್ಯಕ್ಷ ಸಿ.ತಿಪ್ಪೇ ಸ್ವಾಮಿ,ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪಿಎಸ್ ಅರ ವಿಂದ ನ್,ಸಿಪಿಐ ಶ್ರೀನಿವಾಸ್,ತಾ.ಪಂ.ಇಓ ವೈ.ಎಚ್.ಚಂದ್ರ ಶೇಖರ್, ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಬಿ.ಆರ್.ಸಿ ಡಿಡಿ. ಹಾಲಪ್ಪ,ಧರ್ಮ ಸ್ಥಳ ಗ್ರಾಮಾಭಿವೃದ್ದಿ ಬಿ.ಸಿ.ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಎಸ್.ಜನಾ ರ್ಧನ್. ಮಾತನಾಡಿದರು.
ಈ ಸಂದರ್ಭದಲ್ಲಿ ಶಿಬಿರದ ಗೌರವಾಧ್ಯಕ್ಷ ಸಿ.ತಿಪ್ಪೇಸ್ವಾಮಿ,ಅಧ್ಯಕ್ಷ ಜಿ.ಎಸ್.ಚಿದಾನಂದ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪಿಎಸ್ ಅರವಿಂದನ್,ಸಿಪಿಐ ಶ್ರೀನಿವಾಸ್,ತಾ.ಪಂ.ಇಓ ವೈ.ಎಚ್. ಚಂದ್ರಶೇಖರ್,ಮುಖ್ಯಾಧಿಕಾರಿ ಲೋಕ್ಯಾನಾಯ್ಕ,ಬಿಆರ್ ಸಿ ಡಿಡಿ.ಹಾಲಪ್ಪ,ಸಮಿತಿ ಸದಸ್ಯರಾದ ಕರಿಬಸಯ್ಯ,ಲೊಕೇಶ್, ಮಂಜಣ್ಣ,ರೇವಣ್ಣ,ಹೊನ್ನೂರು ಸ್ವಾಮಿ,ಫಾದರ್ ಸಿವೆಸ್ಟರ್, ಪದ್ಮ, ಶೋಭಾ,ಸೇರಿದಂತೆ ಇದ್ದರು.