ಪ್ರಜಾ ನಾಯಕ ಸುದ್ದಿ ಜಗಳೂರು :- ತಾಲೂಕಿನ ಕಲ್ಲೇದೇವರ ಪುರ ಗ್ರಾ.ಪಂ ಎರಡನೇ ಅವಧಿಯ ಅಧ್ಯಕ್ಷರಾಗಿ ವಸಂತಕುಮಾರಿ ಡಿ ತಿಪ್ಪೇಸ್ವಾಮಿ (ಕೊಟ್ಟಿಗೆ) ಹಾಗೂ ಉಪಧ್ಯಕ್ಷರಾಗಿ ಅನೂಸುಯ ಮ್ಮ ಶನಿವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.
ಕಲ್ಲೇದೆವರಪುರ ಗ್ರಾ.ಪಂ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮೀಸಲು ನಿಗಧಿಯಾಗಿತ್ತು.ಅಧ್ಯಕ್ಷ ಸ್ಥಾನಕ್ಕೆ ವಸಂತಕುಮಾರಿ ತಿಪ್ಪೇಸ್ವಾಮಿ ಒಬ್ಬರೇ ನಾಮ ಪತ್ರ ಸಲ್ಲಿಸಿದರು ಅದರಂತೆಯೇ ಉಪಾಧ್ಯಕ್ಷ ಸ್ಥಾನಕ್ಕೆ ಅನುಸೂಯಮ್ಮ ಒಬ್ಬರೇ ನಮ್ಮ ಪತ್ರ ಸಲ್ಲಿಸಿದ್ದರು. ಆದ್ದರಿಂದ ವಸಂತ ಕುಮಾರಿ ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಹಾಗೂ ಉಪಧ್ಯಕ್ಷರಾಗಿ ಅನುಸೂಯಮ್ಮ ಅವಿರೋಧವಾಗಿ ಆಯ್ಕೆಯಾಗಿ ದ್ದಾರೆ ಎಂದು ಚುನಾವಣೆ ಅಧಿಕಾರಿಯಾಗಿ ಹಾಗೂ ತಾಲೂಕು ಪಂಚಾಯಿತಿ ಇಓ ಚಂದ್ರಶೇಖರ್ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ
ಗ್ರಾ.ಪಂ ಯಲ್ಲಿ ೧೩ ಜನರ ಸದಸ್ಯರ ಬಲ ಹೊಂದಿದ್ದು ಎಲ್ಲಾ ಸದಸ್ಯರು ಸರ್ವಾನುಮತದಿಂದ ಎರಡನೇ ಬಾರಿಗೆ ವಸಂತ ಕುಮಾರಿಯನ್ನು ಆಯ್ಕೆಮಾಡಿದ್ದು ವಿಶೇಷವಾಗಿತ್ತು
ನಂತರ ಮಾತನಾಡಿದ ನೂತನ ಅಧ್ಯಕ್ಷೆ ವಂಸತ ಕುಮಾರಿ ಕಲ್ಲೇ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಐದು ಹಳ್ಳಿ ಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಚರಂಡಿ ಸ್ವಚ್ಚತೆ, ಕುಡಿಯುವ ನೀರು, ಬೀದಿ ದೀಪ, ಶೈಕ್ಷಣಿಕ ಸೇರಿದಂತೆ ಗ್ರಾಮಗಳ ಅಭಿವೃದ್ಧಿ ಕಡೆ ಹೆಚ್ಚು ಅಧ್ಯತೆ ನೀಡಲಾಗುವುದು ಎಲ್ಲಾ ಗ್ರಾಮಗಳ ಮುಖಂಡರು ಮತ್ತು ಸದಸ್ಯರ ಸಹಮತದಿಂದ ಅಭಿವೃದ್ಧಿ ಕೆಲಸ ಮಾಡುವೆ ಎಂದರು.
ಈ ಸಂದರ್ಭದಲ್ಲಿ ಸಹಾಯಕರಾಗಿ ಶೀನಿವಾಸ್ ಪಿಡಿಓ ಕೆ. ರಾಜೇಶ್ವರಿ ಸರ್ವವ ಸದಸ್ಯರು ಸೇರಿದಂತೆ ಸಿಬ್ಬಂದಿಗಳು ಹಾಗೂ ಜಗಳೂರು ಪೊಲೀಸ್ ಇಲಾಖೆಯಿಂದ ಬಿಗಿ ಬಂದೋಬಸ್ತು ಮಾಡಲಾಗಿತ್ತು