ಪ್ರಜಾ ನಾಯಕ ಸುದ್ದಿ ಜಗಳೂರು:-ಮನುಷ್ಯನ ಆರೋಗ್ಯ ರಕ್ಷಣೆಗೆ ಪರಿಸರ ಸ್ವಚ್ಛತೆ ಅತ್ಯವಶ್ಯಕ ಎಂದು ಶಾಸಕ ಬಿ.ದೇವೇಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಪಟ್ಟಣ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಸ್ವಚ್ಛ ಸರ್ವೇಕ್ಷಣಾ ಅಭಿಯಾನಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.
ಪ್ರಸ್ತುತವಾಗಿ ಪ್ರತಿಯೊಬ್ಬರೂ ಪ್ರಕೃತಿ ಆರಾಧಕರಾಗಬೇಕಿದೆ.ಸನಾತ ನ ಶಿಲಾಯುಗದಲ್ಲಿ ಪ್ರಕೃತಿ ಆರಾಧಕರಾಗಿದ್ದುಕೊಂಡು ಉತ್ತಮ ಆರೋಗ್ಯ ಸಂಪತ್ತು ಗಳಿಸಿ ಶತಾಯುಷಿಗಳಾಗಿದ್ದರು.ಆದರೆ ಇಂದು ದೇಶದಲ್ಲಿ ಆಧುನಿಕ ನಾಗಾಲೋಟದಲ್ಲಿ ಜನಸಂಖ್ಯೆ ಹೆಚ್ಚಳ ದಿನ ದಿಂದ ದಿನಕ್ಕೆ ಉಲ್ಬಣವಾಗುತ್ತಿದೆ ಆದರೆ ಪ್ರಕೃತಿ ಸಂಪತ್ತು ವಿನಾಶ ದತ್ತ ಸಾಗುತ್ತಿರುವುದು ಆತಂಕಕಾರಿ ಬೆಳವಣಿಗೆ.ಕೋವಿಡ್ ಸಂದರ್ಭದಲ್ಲಿ ಆಮ್ಲಜನಕದ ಮಹತ್ವ ಅರಿತುಕೊಂಡಿದ್ದನ್ನು ದೇಶದ ಜನತೆ ಮರೆಯುವಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ದರು.
ಪರಿಸರ ಸ್ವಚ್ಛತೆಯ ಜಾಗೃತಿಮೂಡಿಸುವ ಕಾರ್ಯಕ್ರಮಗಳು ಕೇವಲ ಸರಕಾರಿ ಕಾರ್ಯಕ್ರಮಕ್ಕೆ ಸೀಮಿತವಾಗದೆ.ಸಾರ್ವಜನಿ ಕರು ಸಕ್ರಿಯವಾಗಿ ಭಾಗವಹಿಸಿ ಜನಜಾಗೃತಿ ಆಂದೋಲನ ವಾಗಬೇಕು,ವೃಕ್ಷ ರಕ್ಷಿತೋ ರಕ್ಷಿತಃ ಎಂದು ತಿಳಿಸಿದರು.
ಪ.ಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಮಾತನಾಡಿ,ಸರಕಾರದ ನಿರ್ದೇಶನದಂತೆ ಪಟ್ಟಣ ಪಂಚಾಯಿತಿ ವ್ಯಾಪ್ತಿ ಸ್ವಚ್ಛತೆಯ ಕಾರ್ಯ ವೈಖರಿಯ ಪರಿಮಿತಿಯ ಮಾಹಿತಿಗಾಗಿ ದೇಶದಲ್ಲಿ ಆ್ಯಪ್ ಮುಖಾಂತ ರ ಸ್ಥಳಿಯ ಸ್ವಚ್ಛತೆಯ ಮಾಹಿತಿ ಅಪ್ ಲೋಡ್ ಗೆ ಕೆಲಪ್ರಶ್ನಾವಳಿ ನೀಡಿದ್ದು.ಸಾರ್ವಜನಿಕರು ಮಾಹಿತಿ ಅಪ್ ಲೋಡ್ ಮಾಡಬೇಕು ಇಲಾಖೆಯ ಜವಾಬ್ದಾರಿ ಹೆಚ್ಚಿಸಬೇಕು ಎಂದು ಕರೆ ನೀಡಿದರು.
ಸಂದರ್ಭದಲ್ಲಿ ಪ.ಪಂ ಸದಸ್ಯರಾದ ರವಿಕುಮಾರ್,ರಮೇಶ್ ರೆಡ್ಡಿ, ಶಕೀಲ್ ಅಹಮ್ಮದ್,ಮಂಜಣ್ಣ.ಪ್ರಭಾರಿ ಬಿಇಓ ಸುರೇಶ್ ರೆಡ್ಡಿ, ಮಹಮ್ಮದ್ ಆಲಿ. ಎನ್ ಎಂಕೆ ಶಾಲೆಯ ಮುಖ್ಯಸ್ಥ ಲೊಕೇಶ್, ಉಪನ್ಯಾಸಕರಾದ ನಾಗೇಶ್. ತಿಪ್ಪೇಸ್ವಾಮಿ.ಆರೋಗ್ಯ ಇಲಾಖೆ ನಿರೀಕ್ಷಕ ಖಿಫಾಯತ್,ಮುಖಂಡರಾದ ಮಹಮ್ಮದ್ ಗೌಸ್ , ಪಲ್ಲಾಗಟ್ಟೆ ಶೇಖರಪ್ಪ ಸೇರಿದಂತೆ ವಿದ್ಯಾರ್ಥಿಗಳು ಪ.ಪಂ ಸಿಬ್ಬಂದಿಗಳು ಇದ್ದರು